ಕೋವಿಡ್-19: ಬೆಂಗಳೂರಿನ ಆರ್ ಪ್ರಮಾಣ 1.06ಕ್ಕೆ ಏರಿಕೆ, ತಜ್ಞರ ಆತಂಕ

ದೇಶದಲ್ಲಿ ಕೋವಿಡ್ ಪರಿಣಾಮಕಾರಿ ಪುನರುತ್ಪತ್ತಿ ಪ್ರಮಾಣ (ಆರ್ ಮೌಲ್ಯ) ಕಳೆದ ವಾರ 0.98 ರಿಂದ 0.92ಕ್ಕೆ ಕುಸಿದಿದ್ದು, ಇದು ಉತ್ತಮ ಸೂಚನೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದೇಶದಲ್ಲಿ ಕೋವಿಡ್ ಪರಿಣಾಮಕಾರಿ ಪುನರುತ್ಪತ್ತಿ ಪ್ರಮಾಣ (ಆರ್ ಮೌಲ್ಯ) ಕಳೆದ ವಾರ 0.98 ರಿಂದ 0.92ಕ್ಕೆ ಕುಸಿದಿದ್ದು, ಇದು ಉತ್ತಮ ಸೂಚನೆಯಾಗಿದೆ. ಆದರೆ ನಮ್ಮ ಬೆಂಗಳೂರಿನಲ್ಲಿ ಸೆಪ್ಟೆಂಬರ್ 14 ರಿಂದ 21 ರ ನಡುವೆ ಆರ್ ಮೌಲ್ಯ 0.98 ರಿಂದ 1.06ಕ್ಕೆ ಏರಿಕೆಯಾಗಿದ್ದು, ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಕರಣಗಳ ಸಂಖ್ಯೆಯ ಬಗ್ಗೆ ತೀವ್ರ ನಿಗಾ ವಹಿಸಬೇಕು ಮತ್ತು ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಅನುಸರಿಸುವ ಮೂಲಕ ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಬೆಂಗಳೂರಿನ ತಜ್ಞರು ಎಚ್ಚರಿಸಿದ್ದಾರೆ.

ಆರ್ ಮೌಲ್ಯವು ವೈರಸ್ ಹರಡುವ ಕ್ಷಿಪ್ರತೆಯನ್ನು ಸೂಚಿಸುತ್ತದೆ. ಇದು ಒಂದಕ್ಕಿಂತ ಕೆಳಗಿದ್ದರೆ, ಸಾಂಕ್ರಾಮಿಕ ನಿರ್ವಹಣೆಯ ವಿಷಯದಲ್ಲಿ ಒಂದು ಪ್ರದೇಶವು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತೋರಿಸುತ್ತದೆ. 

ಪ್ರಮಾಣ ಒಂದಕ್ಕಿಂತ ಹೆಚ್ಚು ಇದ್ದರೆ, ಸೋಂಕಿತ ರೋಗಿಯು ಒಂದಕ್ಕಿಂತ ಹೆಚ್ಚು ವ್ಯಕ್ತಿಗಳಿಗೆ ವೈರಸ್ ಹರಡಬಹುದು ಎಂದರ್ಥ.

ಚೆನ್ನೈನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್(IMSc)ನ ಮಾಹಿತಿಯ ಪ್ರಕಾರ, ಕಳೆದ ವಾರ ಕರ್ನಾಟಕದಲ್ಲಿ ಆರ್ ಮೌಲ್ಯ 0.99 ರಿಂದ 0.95 ಕ್ಕೆ ಇಳಿಕೆಯಾಗಿದೆ. ಆದರೆ ಬೆಂಗಳೂರಿನಲ್ಲಿ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com