ಕೋವಿಡ್ ಎರಡನೇ ಅಲೆ ಮುಗಿದಿದ್ದರೂ ರಾಜ್ಯದ ವೈದ್ಯರಿಗೆ ಇನ್ನೂ ಸಿಕ್ಕಿಲ್ಲ ಅಪಾಯ ಭತ್ಯೆ!

ಕೋವಿಡ್ ಕರ್ತವ್ಯದಲ್ಲಿರುವ ವೈದ್ಯರಿಗೆ ಪ್ರೋತ್ಸಾಹ ನೀಡಲು, ಸರ್ಕಾರವು ಈ ವರ್ಷ 'ಅಪಾಯ ಭತ್ಯೆ' ನೀಡಲು ಆದೇಶ ಹೊರಡಿಸಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್ ಕರ್ತವ್ಯದಲ್ಲಿರುವ ವೈದ್ಯರಿಗೆ ಪ್ರೋತ್ಸಾಹ ನೀಡಲು, ಸರ್ಕಾರವು ಈ ವರ್ಷ 'ಅಪಾಯ ಭತ್ಯೆ' ನೀಡಲು ಆದೇಶ ಹೊರಡಿಸಿತು.

ಆದಾಗ್ಯೂ, ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಕೋವಿಡ್ ರೋಗಿಗಳೊಂದಿಗೆ ಕೆಲಸ ಮಾಡುತ್ತಿದ್ದರೂ, ಯಾವುದೇ ವೈದ್ಯರಿಗೆ ಇನ್ನೂ ಅಪಾಯ ಭತ್ಯೆ ಸಿಕ್ಕಿಲ್ಲ ಎಂದು ಕರ್ನಾಟಕ ನಿವಾಸಿ ವೈದ್ಯರ ಸಂಘ (ಕೆಎಆರ್‌ಡಿ) ಹೇಳಿದೆ.

ಸರ್ಕಾರವು ವೈದ್ಯರಿಗೆ 10,000 ರೂ.ಗಳ ಅಪಾಯ ಭತ್ಯೆಯನ್ನು ಘೋಷಿಸಿತ್ತು. ಈ ಆದೇಶವನ್ನು ಬಹುಶಃ ಪ್ರದರ್ಶನಕ್ಕಾಗಿ ಮಾತ್ರ ಮಾಡಲಾಗಿದೆ ಮತ್ತು ನಿವಾಸಿ ವೈದ್ಯರಿಂದ ಹೆಚ್ಚಿನ ಕೆಲಸವನ್ನು  ಪಡೆಯಲು ಸರ್ಕಾರ ಈ ನಿರ್ಧಾರ ಮಾಡಿದೆ ಎಂದು ಕೆಎಆರ್‌ಡಿ ಅಸೋಸಿಯೇಷನ್‌ನ ವೈದ್ಯರು  ಆರೋಪಿಸಿದ್ದಾರೆ.

ಇದುವರೆಗೂ ಸರ್ಕಾರ ಒಂದೇ ಒಂದು ರೂಪಾಯಿ ಕೂಡ ರಿಸ್ಕ್ ಭತ್ಯೆ ನೀಡಿಲ್ಲ, ಆದೇಶ ಹೊರಡಿಸಿ ಆರು ತಿಂಗಳು ಕಳೆದಿದೆ. ಈ ಸಂಬಂಧ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ, ಅಧಿಕಾರಿಗಳು ನಿವಾಸಿ ವೈದ್ಯರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಕೆಎಆರ್ ಡಿ ರಿಲೀಸ್ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿದ ಎಲ್ಲಾ ನಿವಾಸಿ ವೈದ್ಯರಿಗೆ ಕೋವಿಡ್ ಅಪಾಯ ಭತ್ಯೆಯ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಸಂಘದ ವೈದ್ಯರು ಒತ್ತಾಯಿಸಿದ್ದಾರೆ.

ನಾವು 1,19,470 ರೂಪಾಯಿಗಳನ್ನು ಪಾವತಿಸುತ್ತೇವೆ, ಇದು ಭಾರತದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅತ್ಯಧಿಕವಾಗಿದೆ ಹಾಗೂ ನಾವು 45,000 ರೂ.ಗಳ ಅತ್ಯಲ್ಪ ಸ್ಟೈಫಂಡ್  ಪಡೆಯುತ್ತೇವೆ, ಇದು ಭಾರತದ ಎಲ್ಲಾ ಕಾಲೇಜುಗಳಲ್ಲಿ ಅತ್ಯಂತ ಕಡಿಮೆ ಎಂದು ಸರ್ಕಾರಿ ವೈದ್ಯಕೀಯ ಕಾಲೇಜಿನ ನಿವಾಸಿ ವೈದ್ಯರು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com