ಯೋಜನೆಗಳ ವೇಗಗೊಳಿಸಲು ಟಿಡಿಆರ್ ಸರಳೀಕರಣಕ್ಕೆ ವಿಧೇಯಕ: ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ ಯೋಜನೆಗಳ ವೇಗಗೊಳಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿ ವರ್ಗಾಯಿಸಬಹುದಾದ ಅಭಿವೃದ್ಧಿ (ಟಿಡಿಆರ್) ಸರಳೀಕರಣಗೊಳಿಸುವ ಕುರಿತು ಪ್ರತ್ಯೇಕ ವಿಧೇಯಕವನ್ನು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಯೋಜನೆಗಳ ವೇಗಗೊಳಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿ ವರ್ಗಾಯಿಸಬಹುದಾದ ಅಭಿವೃದ್ಧಿ (ಟಿಡಿಆರ್) ಸರಳೀಕರಣಗೊಳಿಸುವ ಕುರಿತು ಪ್ರತ್ಯೇಕ ವಿಧೇಯಕವನ್ನು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಬನ್ನೇರುಘಟ್ಟರಸ್ತೆ, ಬೇಗೂರು ರಸ್ತೆ-ಸರ್ಜಾಪುರ ರಸ್ತೆ ಅಗಲೀಕರಣ ಕಾಮಗಾರಿ ವಿಳಂಬದಿಂದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಬನ್ನೇರುಘಟ್ಟ ರಸ್ತೆಯನ್ನು 120 ಅಡಿಗೆ ಅಗಲೀಕರಣ ಮಾಡುವ ಸಂಬಂಧ ಭೂಸ್ವಾಧೀನವಾದ ಜಾಗಕ್ಕೆ ಮೆಟ್ರೋ ಸಂಸ್ಥೆಯು ಪ್ರತಿ ಚದರಡಿಗೆ ರೂ.17 ಸಾವಿರ ಪರಿಹಾರ ನೀಡಿದೆ. ಆದರೆ, ಆದರೆ, ಬಿಬಿಎಂಪಿಯಿಂದ ಭೂಸ್ವಾಧೀನ ಆಗಬೇಕಿರುವ ಜಾಗಕ್ಕೆ ಬಿಬಿಎಂಪಿಯವರು ಟಿಡಿಆರ್ ನೀಡಲು ಮುಂದಾಗಿದ್ದಾರೆ. ಈ ಟಿಡಿಆರ್'ಗೆ ಬೆಲೆ ಇಲ್ಲದಿರುವುದರಿಂದ ಮಾಲೀಕರು ಪಡೆಯುತ್ತಿಲ್ಲ. ಟಿಡಿಆರ್ ಬ್ಯಾಂಕ್ ಮಾಡಿದರೆ ಇಂತಹ ಸಮಸ್ಯೆ ಉದ್ಭವವಾಗುವುದಿಲ್ಲ. ಭೂ ಸ್ವಾಧೀನ ಮತ್ತು ಯೋಜನೆ ಅಧಿಕಾರಿಗಳು ಬಿಬಿಎಂಪಿ ಮತ್ತು ಬಿಡಿಎಯಿಂದ ಒಪ್ಪಿಗೆ ಪಡೆಯಬೇಕಿದ್ದು. ಪ್ರಸ್ತುತ ಇರುವ ಟಿಡಿಆರ್ ಪ್ರಕ್ರಿಯೆ ಜಟಿಲವಾಗಿದೆ. ಹೀಗಾಗಿ ಮೆಟ್ರೋ ವತಿಯಿಂದಲೇ ಈ ಕಾಮಗಾರಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು. 

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಬಿಬಿಎಂಪಿ ಖಜಾನೆಯಿಂದ ನೀಡಬೇಕಾದರೆ ರೂ.4,475 ಕೋಟಿ ಹೊರೆಯಾಗುತ್ತದೆ. ಹೀಗಾಗಿ ಟಿಡಿಆರ್ ಮುಂದೆ ಬರುತ್ತಿಲ್ಲ. ಏಕೆಂದರೆ ಟಿಡಿಆರ್ ನೀಡುವ ಪದ್ಧತಿಯಲ್ಲಿ ಗೊಂದಲಗಳಿವೆ. ಯೋಜನಾ ಪ್ರಾಧಿಕಾರ ಹಾಗೂ ಕಾಮಗಾರಿ ಅನುಷ್ಠಾನ ಏಜೆನ್ಸಿಗಳು ಇಬ್ಬರೂ ಟಿಡಿಆರ್'ಗೆ ಅನುಮೋದನೆ ನೀಡಬೇಕು. ಇದರಿಂದ ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳುತ್ತದೆ. ಜೊತೆಗೆ ಟಿಡಿಆರ್ ಬಳಕೆ ಕುರಿತು ಸಹ ಗೊಂದಲಗಳಿವೆ. ಹೀಗಾಗಿ ಟಿಡಿಆರ್ ಸರಳೀಕರಣ ಮಾಡುವ ಮೂಲಕ ಹೆಚ್ಚು ಬೆಲೆ ಬರುವಂತೆ ಮಾಡಲು ವಿಧೇಯಕ ಮಂಡಿಸಲಾಗುತ್ತದೆ ಎಂದು ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com