ರಾಜ್ಯದ ಸರಾಸರಿಗಿಂತಲೂ ಈ 6 ಜಿಲ್ಲೆಗಳಲ್ಲಿ ಕೋವಿಡ್-19 ಪಾಸಿಟೀವ್ ದರ ಹೆಚ್ಚು!

ರಾಜ್ಯದ ಸರಾಸರಿಗಿಂತಲೂ 6 ಜಿಲ್ಲೆಗಳಲ್ಲಿ ಕೋವಿಡ್-19 ಪಾಸಿಟೀವ್ ದರ ಹೆಚ್ಚಾಗಿರುವುದು ಆತಂಕ ಮೂಡಿಸಿದೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬೆಂಗಳೂರು: ರಾಜ್ಯದ ಸರಾಸರಿಗಿಂತಲೂ 6 ಜಿಲ್ಲೆಗಳಲ್ಲಿ ಕೋವಿಡ್-19 ಪಾಸಿಟೀವ್ ದರ ಹೆಚ್ಚಾಗಿರುವುದು ಆತಂಕ ಮೂಡಿಸಿದೆ. 

ಗಣೇಶ ಹಬ್ಬ ಮುಕ್ತಾಯಗೊಂಡು ದಸರಾ, ದೀಪಾವಳಿಗಳಿಗೆ ರಾಜ್ಯದ ಜನತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು ಹಾಗೂ ಉಡುಪಿ ಜಿಲ್ಲೆಗಳು 14 ದಿನಗಳಿಂದ ದೈನಂದಿನ ಸಕ್ರಿಯ ಪ್ರಕರಣಗಳ ಸಂಖ್ಯೆಗೆ ಹೆಚ್ಚು ವರದಿಯಾಗುತ್ತಿವೆ.

ರಾಜ್ಯ ವಾರ್ ರೂಮ್ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ ಚಿಕ್ಕಮಗಳೂರು (1.58%) ಕೊಡಗು (1.39%) ಉಡುಪಿ (1.35%) ದಕ್ಷಿಣ ಕನ್ನಡ (1.18%) ಹಾಸನ (1.06%) ಗಳಲ್ಲಿ ರಾಜ್ಯದ ಶೇ.0.63 ರಷ್ಟಿರುವ ಸರಾಸರಿ ಪಾಸಿಟೀವ್ ರೇಟ್ ಗಿಂತಲೂ ಹೆಚ್ಚಾಗಿದೆ.

ಆಗಸ್ಟ್ ಕೊನೆಯ ವಾರದಲ್ಲಿ ಶೇ.3.46 ರಷ್ಟಿದ್ದ ಪಾಸಿಟಿವಿಟಿ ದರ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ದಕ್ಷಿಣ ಕನ್ನಡದಲ್ಲಿ ಅಧಿಕಾರಿಗಳು ಸೋಂಕು ಹರಡುವಿಕೆಯನ್ನು ತಗ್ಗಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ.  ತಾಂತ್ರಿಕ ಸಲಹಾ ಸಮಿತಿಯ ಅಧಿಕಾರಿಗಳು ಈ ಬಗ್ಗೆ ಮಾತನಾಡಿದ್ದು ಭಾರತ ಸರ್ಕಾರ, 15 ರಾಜ್ಯಗಳ 70 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.5 ರಷ್ಟಿದ್ದು ಕಟ್ಟುನಿಟ್ಟಿನ ನಿಗಾ ವಹಿಸಲು ಸೂಚನೆ ನೀಡಿದೆ. ಮುಂಬರುವ ಹಬ್ಬದ ಸಾಲುಗಳಾ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿ ಸೋಂಕು ಮತ್ತಷ್ಟು ಹೆಚ್ಚಾಗಬಹುದು ಎಂಬ ಭೀತಿ ಇದೆ.

ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಟಿಪಿಆರ್ ಶೇ.2 ಕ್ಕಿಂತ ಹೆಚ್ಚು ಇಲ್ಲ. ಕೇವಲ 5 ಜಿಲ್ಲೆಗಳಲ್ಲಿ ಮಾತ್ರ ಟಿಪಿಆರ್ ಶೇ.1 ಕ್ಕಿಂತ ಹೆಚ್ಚಿದೆ. ಆದ್ದರಿಂದ ಈ ಜಿಲ್ಲೆಗಳ ಮೇಲೆ ಹೆಚ್ಚು ನಿಗಾ ವಹಿಸಲಾಗುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com