ಹೈಡ್ರೋಜನ್ ಪವರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವುದು ಕರ್ನಾಟಕದ ಗುರಿ!

ಸೋಲಾರ್ ಶಕ್ತಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವಂತೆ ಹೈಡ್ರೋಜನ್ ಉತ್ಪಾದನೆಯಲ್ಲಿಯೂ ಮುನ್ನುಗ್ಗುವತ್ತ ಕರ್ನಾಟಕ ರಾಜ್ಯ ಯೋಜಿಸುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸೋಲಾರ್ ಶಕ್ತಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವಂತೆ ಹೈಡ್ರೋಜನ್ ಉತ್ಪಾದನೆಯಲ್ಲಿಯೂ ಮುನ್ನುಗ್ಗುವತ್ತ ಕರ್ನಾಟಕ ರಾಜ್ಯ ಯೋಜಿಸುತ್ತಿದೆ. 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾಡಿದ ಭಾಷಣದಿಂದ ಪ್ರೇರಣೆ ಪಡೆದಿರುವ ರಾಜ್ಯ ಸರ್ಕಾರಕ್ಕೆ ಇದು ಹೊಸ ಕಾನ್ಸೆಪ್ಟ್ ಆಗಿದೆ, ರಾಜ್ಯ ಇಂಧನ ಇಲಾಖೆಯು ಹೈಡ್ರೋಜನ್ ಶಕ್ತಿಯ ಮೂಲಗಳನ್ನು ಹುಡುಕುತ್ತಿದೆ, ಇದರ ಜೊತೆಗೆ ತನ್ನದೇ ಆದ ಹಸಿರು ಹೈಡ್ರೋಜನ್ ಶಕ್ತಿಯನ್ನು ಉತ್ಪಾದಿಸುವತ್ತ ಕೆಲಸ ಮಾಡುತ್ತಿದೆ.

ಇಲಾಖೆಯು ನವೀಕರಿಸಬಹುದಾದ ಇಂಧನ ನೀತಿಯಲ್ಲಿ ಒಂದು ಅಧ್ಯಾಯವಾಗಿ ಹೈಡ್ರೋಜನ್ ಶಕ್ತಿಯನ್ನು ಸೇರಿಸಬೇಕೇ ಅಥವಾ ಅದನ್ನು ಪ್ರತ್ಯೇಕ ವಿಷಯವಾಗಿಸಬೇಕೆ ಎಂದು ಯೋಚಿಸುತ್ತಿದೆ.

ಈಗ ಹೈಡ್ರೋಜನ್ ಶಕ್ತಿ ಉತ್ಪಾದನೆ ಮೇಲೆ ನಾವು ಗಮನ ಕೇಂದ್ರೀಕರಿಸುತ್ತಿದ್ದೇವೆ ಏಕೆಂದರೆ ಇದು ಹೊಸದಾಗಿದೆ, ಇದು ಕಲ್ಲಿದ್ದಲು ಮತ್ತು ಸಸ್ಯಗಳ ಮೇಲಿನ ಅವಲಂಬನೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಸೌರ ಮತ್ತು ಪವನ ಶಕ್ತಿ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡುತ್ತದೆ, ಹೀಗಾಗಿ ನಾವು ಹೈಡ್ರೋಜನ್ ಶಕ್ತಿಯನ್ನು ಎಲ್ಲಿಂದ ಬಳಕೆಮಾಡಬಹುದು ಎಂಬುದನ್ನು ನೋಡುತ್ತಿದ್ದೇವೆ ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಸಿರು ಶಕ್ತಿಯನ್ನು ಬಳಸಿಕೊಂಡು ಉತ್ಪಾದನೆ ಮಾಡುವುದಕ್ಕೆ ನಾವು ಹೈಡ್ರೋಜನ್ ಶಕ್ತಿ ಎನ್ನಲಾಗುತ್ತದೆ, ಇದು ಹೊಸ ಪರಿಕಲ್ಪನೆಯಾಗಿದ್ದು, ಕೆಲವು ದೇಶಗಳಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ, ಪ್ರಯೋಗಾಲಯಗಳು, ಕೈಗಾರಿಕೆಗಳು ಮತ್ತು ಆಸ್ಪತ್ರೆಗಳಲ್ಲಿ ಇದು ಉಪಯುಕ್ತವಾಗಿದೆ. ಅಂತಹ ಸ್ಥಳಗಳಲ್ಲಿ ಈ ಶಕ್ತಿಯನ್ನು ಬಳಸುವುದು ನಮ್ಮ ಯೋಜನೆ ಎಂದು ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com