ಕಲಬುರಗಿ: ನವಜಾತ ಶಿಶು, ತಾಯಿ ಸಾವು; ಜಿಲ್ಲಾಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ

ನಗರದ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ನವಜಾತ ಶಿಶು, ತಾಯಿ ಇಬ್ಬರೂ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಪಟ್ಟಣ ಗ್ರಾಮದ ಕನ್ಯಾಕುಮಾರಿ(23) ಹಾಗೂ ಆಕೆಯ ನವಜಾತ ಶಿಶು ಮೃತರು.
ಕಲಬುರಗಿ ಜಿಲ್ಲಾಸ್ಪತ್ರೆ ಹಾಗೂ ಮೃತಪಟ್ಟ ಕನ್ಯಾಕುಮಾರಿ
ಕಲಬುರಗಿ ಜಿಲ್ಲಾಸ್ಪತ್ರೆ ಹಾಗೂ ಮೃತಪಟ್ಟ ಕನ್ಯಾಕುಮಾರಿ

ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ನವಜಾತ ಶಿಶು, ತಾಯಿ ಇಬ್ಬರೂ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಪಟ್ಟಣ ಗ್ರಾಮದ ಕನ್ಯಾಕುಮಾರಿ(23) ಹಾಗೂ ಆಕೆಯ ಮಗು ಸಾವನ್ನಪ್ಪಿದೆ.

ಶುಕ್ರವಾರ ರಾತ್ರಿ 9.30 ಕ್ಕೆ ಹೆರಿಗೆ ನೋವು ಕಾಣಿಸಿಕೊಂಡಾಗ ತಕ್ಷಣ ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದಿಂದ ಜಿಮ್ಸ್ ಆಸ್ಪತ್ರೆಯ ಹೆರಿಗೆ ವಿಭಾಗಕ್ಕೆ ಕನ್ಯಾಕುಮಾರಿಯನ್ನು ತಂದು ದಾಖಲಿಸಿದ್ದೇವೆ. ಈ ವೇಳೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ತಪಾಸಣೆ ಮಾಡಲಿಲ್ಲ.ಅಲ್ಲದೇ, ಅಗತ್ಯ ಕ್ರಮ ಕೈಗೊಳ್ಳಲಿಲ್ಲ. ಗರ್ಭದಲ್ಲೇ ಮಗು ತೀರಿಕೊಂಡಿದೆ ಎಂದು ಕುಟುಂಬಸ್ಥರು ತಿಳಿಸಿದರು.

ಹೆರಿಗೆಯ ಬಳಿಕವೂ ಸಮರ್ಪಕ ಚಿಕಿತ್ಸೆ ನೀಡಿಲ್ಲ. ನರ್ಸ್ ನೀಡಿದ ಮಾತ್ರೆಯ ಪರಿಣಾಮದಿಂದಾಗಿ ಕನ್ಯಾಕುಮಾರಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಈ ಘಟನೆ ಕುರಿತು ಜಿಮ್ಸ್ ಆಸ್ಪತ್ರೆಯ ಅಧೀಕ್ಷಕ ಡಾ. ಮೊಹಮ್ಮದ್ ಶಫಿಯುದ್ದೀನ್ ಪ್ರತಿಕ್ರಿಯಿಸಿ, ಗರ್ಭದಲ್ಲಿಯೇ ಮಗು ತೀರಿಕೊಂಡಿದೆ ಎಂದು ಕುಟುಂಬ ಸದಸ್ಯರಿಗೆ ಮೊದಲೇ ತಿಳಿಸಲಾಗಿತ್ತು. ಶಸ್ತ್ರ ಚಿಕಿತ್ಸೆ ಮಾಡಿ ಮಗು ಹೊರತೆಗೆಯಲು ಕುಟುಂಬ ಸದಸ್ಯರು ದಾಖಲೆಗಳಿಗೆ ಸಹಿ ಕೂಡ ಮಾಡಿದ್ದಾರೆ ಎಂದರು.

ಗರ್ಭದಿಂದ ಮಗುವನ್ನು ಹೊರತೆಗೆದ ಬಳಿಕ ಬಹಳ ಹೊತ್ತಿನ ನಂತರ ತಾಯಿಗೆ ಎಂಬಾಲಿಸಂ ಆಗಿ ಆಕೆ ಅವರು ಏಕಾಏಕೀ ಸಾವನ್ನಪ್ಪಿರುವ ಸಾಧ್ಯತೆಯಿದೆ. ಈ ಕುರಿತು ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com