ಬೆಳಗಾವಿ- ಬೆಂಗಳೂರು ರೈಲಿಗೆ ಸುರೇಶ್ ಅಂಗಡಿ ಎಕ್ಸ್‌ಪ್ರೆಸ್ ಹೆಸರು: ಬಸವರಾಜ ಬೊಮ್ಮಾಯಿ
ಬೆಳಗಾವಿ-ಬೆಂಗಳೂರು ರೈಲಿಗೂ 'ಸುರೇಶ್ ಅಂಗಡಿ ಎಕ್ಸಪ್ರೆಸ್' ಹೆಸರು ಇಡಲು ತಕ್ಷಣ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
Published: 27th September 2021 08:15 AM | Last Updated: 27th September 2021 01:05 PM | A+A A-

ಸುರೇಶ್ ಅಂಗಡಿ
ಬೆಳಗಾವಿ: ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ್ ಅಂಗಡಿ ಕನಸನ್ನು ನನಸು ಮಾಡಲು ಧಾರವಾಡ-ಬೆಳಗಾವಿ ರೈಲ್ವೆ ಮಾರ್ಗಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಹಣವನ್ನು ಬಿಡುಗಡೆ ಮಾಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಳಗಾವಿಯ ಸಾವಗಾಂವ ರಸ್ತೆಯಲ್ಲಿರುವ ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ಸ್ಥಾಪಿಸಿರುವ ದಿವಂಗತ ಸುರೇಶ ಅಂಗಡಿ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಬೆಳಗಾವಿ-ಬೆಂಗಳೂರು ರೈಲಿಗೂ 'ಸುರೇಶ್ ಅಂಗಡಿ ಎಕ್ಸಪ್ರೆಸ್' ಹೆಸರು ಇಡಲು ತಕ್ಷಣ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿ ಅವರು, ಸುರೇಶ್ ಅಂಗಡಿ ಅಜಾತ ಶತ್ರು. ವೈಚಾರಿಕವಾಗಿ ಎಷ್ಟೆ ವ್ಯತ್ಯಾಸ ಇದ್ದರೂ ಸಹನೆಯಿಂದ ಎಲ್ಲರ ಹೃದಯ ಗೆದ್ದವರು. ಸಮರ್ಥ ನಾಯಕನ ಕೈಗೆ ಆಧಿಕಾರ ಕೊಟ್ಟರೆ ಏನಾಗುತ್ತದೆ ಎನ್ನುವುದಕ್ಕೆ ಸುರೇಶ ಅಂಗಡಿ ಸ್ಪಷ್ಟ ಸಾಕ್ಷಿ. ರೈಲ್ವೆ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದ ಯೋಜನೆಗಳಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಹಾರ ಕಲ್ಪಿಸಿ ಕ್ರಾಂತಿ ಮಾಡಿದವರು. ರೈಲ್ವೆ ಮಂಡಳಿಯಲ್ಲಿ ಹಣಕಾಸು ವ್ಯವಹಾರಗಳ ಅನುಮತಿ ಪಡೆಯುವುದು ಸವಾಲಿನ ಕೆಲಸ ಎಂದು ಸಿಎಂ ಹಾಡಿ ಹೊಗಳಿದರು.