ಬೆಂಗಳೂರು: 'ಸೇಂಟ್ ಜಾನ್ಸ್ ನಲ್ಲಿ ಸದ್ಯದಲ್ಲೇ ಜೆರಿಯಾಟ್ರಿಕ್ ಕೇಂದ್ರ' ಸ್ಥಾಪನೆ
ಮುಂದಿನ ವರ್ಷ ವೃದ್ಧಾಪ್ಯದಲ್ಲಿ ಸಮಗ್ರ ಆರೈಕೆ, ತರಬೇತಿ ಮತ್ತು ಸಂಶೋಧನೆಗಾಗಿ ಬೃಹತ್ ಸೌಲಭ್ಯ, ಮತ್ತು ಅದಕ್ಕಾಗಿ ಆರೋಗ್ಯ ಸಹಾಯಕರಿಗೆ ತರಬೇತಿ ನೀಡಲು ಸೆಂಟ್ ಜಾನ್ಸ್ ಜೆರಿಯಾಟ್ರಿಕ್ ಕೇಂದ್ರ ಸ್ಥಾಪನೆಗೆ ಸೆಂಟ್ ಜಾನ್ಸ್ ಆರೋಗ್ಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ ಎದುರು ನೋಡುತ್ತಿದೆ.
Published: 27th September 2021 09:17 AM | Last Updated: 27th September 2021 09:17 AM | A+A A-

ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜ್
ಬೆಂಗಳೂರು: ಮುಂದಿನ ವರ್ಷ ವೃದ್ಧಾಪ್ಯದಲ್ಲಿ ಸಮಗ್ರ ಆರೈಕೆ, ತರಬೇತಿ ಮತ್ತು ಸಂಶೋಧನೆಗಾಗಿ ಬೃಹತ್ ಸೌಲಭ್ಯ, ಮತ್ತು ಅದಕ್ಕಾಗಿ ಆರೋಗ್ಯ ಸಹಾಯಕರಿಗೆ ತರಬೇತಿ ನೀಡಲು ಸೆಂಟ್ ಜಾನ್ಸ್ ಜೆರಿಯಾಟ್ರಿಕ್ ಕೇಂದ್ರ ಸ್ಥಾಪನೆಗೆ ಸೆಂಟ್ ಜಾನ್ಸ್ ಆರೋಗ್ಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ ಎದುರು ನೋಡುತ್ತಿದೆ.
10 ನೇ ತರಗತಿಯ ಕನಿಷ್ಠ ಶೈಕ್ಷಣಿಕ ಅರ್ಹತೆ ಹೊಂದಿರುವ 15 ವಿದ್ಯಾರ್ಥಿಗಳಿಗೆ ಮೂರು ತಿಂಗಳ ರೆಸಿಡೆನ್ಶಿಯಲ್ ಕೋರ್ಸ್- ಮೊದಲ ಬ್ಯಾಚ್ ಹೆಲ್ತ್ ಕೇರ್ ಅಸಿಸ್ಟೆನ್ಸ್ ಕೋರ್ಸ್ ಆರಂಭವಾಗಿದೆ. ಮುಂದಿನ ವರ್ಷ ಜೆರಿಯಾಟ್ರಿಕ್ ಕೇಂದ್ರ ಸ್ಥಾಪನೆಯಾಗಲಿದ್ದು, ರೋಗಿಗಳು, ದಿವ್ಯಾಂಗರು ಮತ್ತು ವಯೋ ವೃದ್ದರನ್ನು ನೋಡಿಕೊಳ್ಳುವ ಕೌಶಲ್ಯದ ಕುರಿತು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು, ಇದು ದಿನದ ಆರೈಕೆ, ಅಲ್ಪಾವಧಿಯ ಆರೈಕೆ, ದೀರ್ಘಾವಧಿಯ ಆರೈಕೆ (4-6 ವಾರಗಳ ಆಚೆಗೆ) ಮತ್ತು ಧರ್ಮಶಾಲೆ ಅಥವಾ ಜೀವನದ ಅಂತ್ಯದ ಆರೈಕೆಯನ್ನು ಒಳಗೊಂಡಿರುತ್ತದೆ
ಸದ್ಯಕ್ಕೆ, ಅಭ್ಯರ್ಥಿಗಳನ್ನು ಆಸ್ಪತ್ರೆಯಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ಜೆರಿಯಾಟ್ರಿಕ್ ಸೆಂಟರ್ ಆರಂಭವಾದಾಗ ಅವರನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಸೆಂಟ್ ಜಾನ್ಸ್ ನ ಸಮುದಾಯ ಆರೋಗ್ಯದ ಸಹ ಪ್ರಾಧ್ಯಾಪಕ ಡಾ.ಪ್ರತೇಶ್ ಆರ್ ಕಿರಣ್ ತಿಳಿಸಿದ್ದಾರೆ.
ಹಣಕಾಸಿನ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು, ಕೋರ್ಸ್ ಉಚಿತವಾಗಿದೆ. ಆದಾಗ್ಯೂ, ಮೂರು ತಿಂಗಳ ಕೋರ್ಸ್‌ಗೆ ಬೋಧನೆ, ಆಹಾರ ಮತ್ತು ವಸತಿಗಾಗಿ ಪ್ರತಿ ಅಭ್ಯರ್ಥಿಗೆ ರೂ 12,000 ಪ್ರಾಯೋಜಕತ್ವವನ್ನು ಕೋರಲಾಗುತ್ತಿದೆ ಎಂದು ಡಾ. ಪ್ರೀತೇಶ್ ಹೇಳಿದರು.
ಸರ್ಜಾಪುರ ರಸ್ತೆಯಲ್ಲಿರುವ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಆವರಣದಲ್ಲಿ ಈ ಸೌಲಭ್ಯವಿರುತ್ತದೆ ಎಂದು SJNAHS ನ ನಿರ್ದೇಶಕರಾದ ಡಾ. ಪೌಲ್ ಪಾರತಝಾಮ್ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.