ಬೆಂಗಳೂರು: ಸಿಸಿಬಿ ಪೊಲೀಸರಿಂದ ಭಾರಿ ಪ್ರಮಾಣದ ಗಾಂಜಾ ವಶ

ಬೆಂಗಳೂರು ನಗರ ಅಪರಾಧ ವಿಭಾಗದ ಪೊಲೀಸರು ವಾಸದ ಮನೆಯಲ್ಲಿ ಬೆಳೆಯುತ್ತಿದ್ದ ಅಪಾರ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಳ್ಳುವುದರೊಂದಿಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಇರಾನ್ ಮೂಲದ ಜಾವಿದ್ ರುಸ್ತಂ ಪುರಿ (36) ಮತ್ತು ಈತನ ಮೂವರು ಸಹಚರರು ಬಂಧಿತರಾಗಿದ್ದಾರೆ. 
ಅಪಾರ ಪ್ರಮಾಣದ ಗಾಂಜಾ ವಶದ ಚಿತ್ರ
ಅಪಾರ ಪ್ರಮಾಣದ ಗಾಂಜಾ ವಶದ ಚಿತ್ರ

ಬೆಂಗಳೂರು: ಬೆಂಗಳೂರು ನಗರ ಅಪರಾಧ ವಿಭಾಗದ ಪೊಲೀಸರು ವಾಸದ ಮನೆಯಲ್ಲಿ ಬೆಳೆಯುತ್ತಿದ್ದ ಅಪಾರ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಳ್ಳುವುದರೊಂದಿಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಇರಾನ್ ಮೂಲದ ಜಾವಿದ್ ರುಸ್ತಂ ಪುರಿ (36) ಮತ್ತು ಈತನ ಮೂವರು ಸಹಚರರು ಬಂಧಿತರಾಗಿದ್ದಾರೆ. 

ಬಂಧಿತರಿಂದ 130 ಹೈಡ್ರೋ ಗಾಂಜಾ ಗಿಡಗಳು, ಯುವಿ ಲೈಟ್ಸ್, ಎಲ್.ಇ.ಡಿ ಲ್ಯಾಂಪ್ಸ್, ಎಲೆಕ್ಟ್ರಿಕಲ್ ವೆಯ್ಟಿಂಗ್ ಮಷಿನ್, 1 ಕೋಟಿ ಬೆಲೆಯ 12 ಕೆಜಿ 850 ಗ್ರಾಂ ತೂಕದ ಹೈಡ್ರೋ ಗಾಂಜಾ, ಒಂದು ಸ್ಕೋಡಾ ಕಾರು, 4 ಮೊಬೈಲ್ ವಶಕ್ಕೆ ಪಡೆಯಲಾಗಿದೆ. 

ಈತ ತನ್ನ ಸಹಚರರೊಂದಿಗೆ ಬಿಡದಿ ಬಳಿಯ ವಿಲ್ಲಾವೊಂದರಲ್ಲಿ ಗಾಂಜಾ ಬೆಳೆಯುತ್ತಿದ್ದ ಎನ್ನಲಾಗಿದೆ. ತನಿಖೆ ನಡೆಸುತ್ತಿದ್ದಾಗ ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, ಸುಮಾರು 150ಕ್ಕೂ ಹೆಚ್ಚು ಹೈಡ್ರೋ ಗಾಂಜಾ ಗಿಡಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿಗಳು ಕಳೆದ ಒಂದೂವರೆ ವರ್ಷದಿಂದ ವಿಲ್ಲಾದಲ್ಲಿಯೇ ಗಾಂಜಾ ಬೆಳೆಯುತ್ತಿದ್ದರು. ಮನೆಯ ಕೊಠಡಿಗಳು ಅಲ್ಲದೇ, ತಾರಸಿಯಲ್ಲಿ ಇಡಲಾಗಿದ್ದ ಕುಂಡಗಳಲ್ಲಿ ವ್ಯವಸ್ಥಿತವಾಗಿ ಗಾಂಜಾ ಬೆಳೆಯುತ್ತಿದ್ದರು. ಇದಕ್ಕಾಗಿ ಆನ್ ಲೈನ್ ಮೂಲಕ ಗಾಂಜಾ ಗಿಡದ ಬೀಜಗಳನ್ನು ತರಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರ ಪೈಕಿ ಪ್ರಮುಖ ಆರೋಪಿ ರುಸ್ತುಂ ಪುರಿ ಈ ಹಿಂದೆಯೂ ಡ್ರಗ್ಸ್ ಕೇಸ್ ನಲ್ಲಿ ಬಂಧಿತನಾಗಿದ್ದ. ವೀಸಾ ಅವಧಿ ಮುಗಿದ್ದರೂ ಇಲ್ಲಿಯೇ ನೆಲೆಸಿದ್ದರು. ಡಾರ್ಕ್ ವೆಬ್ ಸೈಟ್ ಮೂಲಕ ಗಾಂಜಾ ಗಿಡಗಳನ್ನು ತರಿಸಿಕೊಳ್ಳುತ್ತಿದ್ದರು. ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇವರುಗಳು ಬಂಧನ ಕಾರ್ಯ ನಡೆದಿತ್ತು.

ಇವರನ್ನು ವಿಚಾರಣೆ ಮಾಡಿದಾಗ ಬಿಡದಿ ಬಳಿಯ ವಿಲ್ಲಾದಲ್ಲಿ ಹೈಡ್ರೋ ಗಾಂಜಾ ಬೆಳೆದಿರುವ ಮಾಹಿತಿ ದೊರೆಯಿತು. ವಿಲ್ಲಾ ಮೇಲೆ ಸಿಸಿಬಿ ತಂಡ ದಾಳಿ ಮಾಡಿ ಪರಿಶೀಲಿಸಿದಾಗ ಹೈಡ್ರೋ ಗಾಂಜಾ ಸಿಕ್ಕಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಸಿಬಿಸಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com