ಗದಗ: ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನ, ಪ್ರಾಣಾಪಾಯದಿಂದ ಮೂವರು ಪಾರು, 8 ವರ್ಷದ ಮಗುವಿಗೆ ಶೋಧ 

ಕೌಟುಂಬಿಕವಾಗಿ ಬೇಸತ್ತು ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಇಂದು ನಸುಕಿನ ಜಾವ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗದಗ: ಕೌಟುಂಬಿಕವಾಗಿ ಬೇಸತ್ತು ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಇಂದು ನಸುಕಿನ ಜಾವ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ.

ಘಟನೆ ಹೇಗಾಯಿತು: ಉಮಾದೇವಿ ಎಂಬ ಮಹಿಳೆಯ ಪತಿ ಮೂರು ತಿಂಗಳ ಹಿಂದೆ ಕೋವಿಡ್-19 ಸೋಂಕಿಗೆ ಮೃತಪಟ್ಟಿದ್ದರು. ದಂಪತಿಗೆ ನಾಲ್ವರು ಹೆಣ್ಣುಮಕ್ಕಳು. ಮೊದಲ ಮಗಳು ಪಿಯುಸಿಯಲ್ಲಿ ಹುಬ್ಬಳ್ಳಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದು ಇನ್ನು ಮೂವರು ಮಕ್ಕಳು ಮಹಿಳೆಯ ಜೊತೆಗೇ ಇದ್ದರು.

ಹೆಣ್ಣು ಮಕ್ಕಳು ಮಾತ್ರ, ಸಣ್ಣ ಮಕ್ಕಳು ಬೇರೆ ಎಂದು ಪತಿ ತೀರಿಕೊಂಡ ಮೇಲೆ ತೀವ್ರ ನೊಂದಿದ್ದ ಉಮಾದೇವಿ ಎಂಬ ಮಹಿಳೆ ಇಂದು ನಸುಕಿನ ಜಾವ ಮಕ್ಕಳನ್ನು ಎಬ್ಬಿಸಿ ಊರಿಗೆ ಹೋಗೋಣ ಎಂದು ಹೊರಡಿಸಿ ಕರೆದುಕೊಂಡು ಹೋಗಿ ನದಿ ಬಳಿ ಹೋಗಿ ಹಾರಿದ್ದಾರೆ. ಘಟನೆಯಲ್ಲಿ ಉಮಾದೇವಿಯವರ 12 ಮತ್ತು 14 ವರ್ಷದ ಮತ್ತಿಬ್ಬರು ಹೆಣ್ಣುಮಕ್ಕಳು ಬಚಾವಾಗಿ ಮೇಲೆ ಬಂದಿದ್ದರು. 

ನಂತರ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ನಿರಂತರ ಕಾರ್ಯಾಚಾರಣೆ ನಡೆಸಿ ಮಹಿಳೆಯನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ನದಿಯಿಂದ ರಕ್ಷಿಸಿ ಮೇಲೆ ಕರೆದುಕೊಂಡು ಬಂದಿದ್ದಾರೆ. 8 ವರ್ಷದ ಮತ್ತೊಂದು ಮಗುವಿಗಾಗಿ ಶೋಧ ಮುಂದುವರಿದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com