ಸಾರ್ವಜನಿಕ ಸ್ಥಳಗಳಿಗೆ ಸಾಕುಪ್ರಾಣಿ ಕರೆದೊಯ್ಯುವಾಗ ಮಲತ್ಯಾಜ್ಯ ಸಂಗ್ರಹಿಸಲು ಬಯೊ ಬ್ಯಾಗ್ ಕಡ್ಡಾಯಗೊಳಿಸಿ:  ಹೈಕೋರ್ಟ್ ಗೆ ಕ್ಯೂಪಾ ಮನವಿ

ಸಾಕುಪ್ರಾಣಿಯನ್ನು ಮಾಲೀಕರು ಸಾರ್ವಜನಿಕ ಸ್ಥಳಗಳಿಗೆ ಕರೆದೊಯ್ಯುವಾಗ ಅದರ ಮಲತ್ಯಾಜ್ಯವನ್ನು ಶುಚಿಗೊಳಿಸಲು ತಮ್ಮೊಂದಿಗೆ ಪರಿಸರಸ್ನೇಹಿ ಬ್ಯಾಗನ್ನು (ಬಯೊ ಬ್ಯಾಗ್) ಇಟ್ಟುಕೊಂಡಿರಬೇಕು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾಕುಪ್ರಾಣಿಯನ್ನು ಮಾಲೀಕರು ಸಾರ್ವಜನಿಕ ಸ್ಥಳಗಳಿಗೆ ಕರೆದೊಯ್ಯುವಾಗ ಅದರ ಮಲತ್ಯಾಜ್ಯವನ್ನು ಶುಚಿಗೊಳಿಸಲು ತಮ್ಮೊಂದಿಗೆ ಪರಿಸರಸ್ನೇಹಿ ಬ್ಯಾಗನ್ನು(ಬಯೊ ಬ್ಯಾಗ್) ಇಟ್ಟುಕೊಂಡಿರಬೇಕು ಎನ್ನುವ ರಾಜ್ಯ ಸರ್ಕಾರದ ಸುತ್ತೋಲೆಯನ್ನು ಜಾರಿಗೊಳಿಸಲು ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ಕ್ಯೂಪಾ (Compassion Unlimited Plus Action) ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಬಿಬಿಎಂಪಿ ಆಯುಕ್ತರು ಹಾಗೂ ತೋಟಗಾರಿಕಾ ಇಲಾಖೆಯ ಕಾರ್ಯದರ್ಶಿಗಳಿಗೆ ನೋಟೀಸ್ ನೀಡಿದೆ.

ಸಾಕುಪ್ರಾಣಿಗಳನ್ನು ಶುಚಿಯಾಗಿಡುವುದು ಮಾಲೀಕರ ಜವಾಬ್ದಾರಿ. ಸಾಕುಪ್ರಾಣಿ ಪಕ್ಕದಮನೆಯ ಲಾನ್ ಅಥವ ಯಾವುದೇ ಪ್ರದೇಶದಲ್ಲಿ ಶೌಚ ಮಾಡಿದರೆ ಅದನ್ನು ಸ್ವಚ್ಛ ಮಾಡುವುದು ಕೂಡಾ ಪ್ರಾಣಿ ಮಾಲೀಕರ ಜವಾಬ್ದಾರಿ ಎಂದು 2020ರಲ್ಲಿ ಹೊರಡಿಸಿದ್ದ ಸುತ್ತೋಲೆಯಲ್ಲಿ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com