ಅಧಿಕ ಶುಲ್ಕ ಹಿನ್ನಲೆ: ಯುಲು ಎಲೆಕ್ಟ್ರಿಕ್ ಬೈಕ್ ಬಳಕೆ ಪ್ರಸ್ತಾಪ ಕೈಬಿಟ್ಟ ಬೆಂಗಳೂರು ಅಂಚೆ ಕಚೇರಿ
ಈ ಹಿಂದೆ ಪರಿಸರ ಸ್ನೇಹಿ ಯುಲು ಎಲೆಕ್ಟ್ರಿಕ್ ಬೈಕ್ ಬಳಕೆ ಮೂಲಕ ಸುದ್ದಿಯಾಗಿದ್ದ ಬೆಂಗಳೂರು ಅಂಚೆ ಕಚೇರಿ ಇದೀಗ ಆ ಪ್ರಸ್ತಾವನೆಯನ್ನು ಕೈ ಬಿಟ್ಟಿದೆ.
Published: 01st April 2022 02:41 PM | Last Updated: 01st April 2022 02:41 PM | A+A A-

ಅಂಚೆ ಇಲಾಖೆಯಿಂದ ಯುಲು ಬೈಕ್ ಬಳಕೆ
ಬೆಂಗಳೂರು: ಈ ಹಿಂದೆ ಪರಿಸರ ಸ್ನೇಹಿ ಯುಲು ಎಲೆಕ್ಟ್ರಿಕ್ ಬೈಕ್ ಬಳಕೆ ಮೂಲಕ ಸುದ್ದಿಯಾಗಿದ್ದ ಬೆಂಗಳೂರು ಅಂಚೆ ಕಚೇರಿ ಇದೀಗ ಆ ಪ್ರಸ್ತಾವನೆಯನ್ನು ಕೈ ಬಿಟ್ಟಿದೆ.
ಹೌದು.. ನಗರದಾದ್ಯಂತ ಅಂಚೆ ಪತ್ರಗಳು ಮತ್ತು ಪಾರ್ಸೆಲ್‌ಗಳನ್ನು ತಲುಪಿಸಲು ಪರಿಸರ ಸ್ನೇಹಿ ಯುಲು ಇ-ಬೈಕ್‌ಗಳನ್ನು ಬಳಸುವ ಬೆಂಗಳೂರು ಅಂಚೆ ಇಲಾಖೆ ಪ್ರಸ್ತಾವನೆಯನ್ನು ಕೈಬಿಡಲಾಗಿದೆ. ಕಳೆದ ವರ್ಷ ಅಕ್ಟೋಬರ್ 14 ರಂದು ಜೆಪಿ ನಗರದ ಉಪ ಅಂಚೆ ಕಚೇರಿಯಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾದ ಈ ಯೋಜನೆಯನ್ನು ಇದೀಗ ಕೈ ಬಿಡಲಾಗಿದೆ. ಈ ಹಿಂದೆ ಯೋಜನೆ ಆರಂಭಿಸಿದ್ದಾಗ ಇದು ಯಶಸ್ವಿಯಾದರೆ ಬೆಂಗಳೂರಿನಾದ್ಯಂತ ವಿಸ್ತರಿಸಲಾಗುತ್ತದೆ ಎಂದು ಅಂಚೆ ಇಲಾಖೆ ಹೇಳಿತ್ತು. ಆದರೆ ಇದೀಗ ಈ ಬೈಕ್ ಸೇವೆಯ ಶುಲ್ಕ ಅಧಿಕವಾಗಿರುವುದು ಇಲಾಖೆಗೆ ದುಬಾರಿಯಾಗುತ್ತಿದೆ. ಹೀಗಾಗಿ ಇಲಾಖೆ ಈ ಪ್ರಸ್ತಾವನೆಯನ್ನು ಕೈಬಿಟ್ಟಿದೆ ಎನ್ನಲಾಗಿದೆ.
ಇದನ್ನೂ ಓದಿ: ದೇಶದಲ್ಲೇ ಮೊದಲು: ಇ-ಬೈಕ್ ಮೂಲಕ ಅಂಚೆ ಸಿಬ್ಬಂದಿಗಳಿಂದ ಡೆಲಿವರಿ!
ಈ ಬಗ್ಗೆ ಮಾತನಾಡಿರುವ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, "ನಾವು ವೆಚ್ಚವನ್ನು ವಿವರವಾಗಿ ರೂಪಿಸಿದ್ದೇವೆ. ವಿತರಣಾ ವ್ಯಕ್ತಿಗೆ ತಿಂಗಳಿಗೆ ಯುಲು ವಾಹನವನ್ನು ಬಳಸುವುದರಿಂದ ತಿಂಗಳಿಗೆ ಸುಮಾರು 5500 ರೂ.ವೆಚ್ಚವಾಗುತ್ತದೆ. ಇದೇ ಸಾಮಾನ್ಯ ಪದ್ಧತಿಯಂತೆ ಕಾರ್ಯ ನಿರ್ವಹಿಸಿದರೆ ಇದರ ಇಂಧನ ವೆಚ್ಚ 1500ರೂ ಆಗಿರಲಿದೆ. ಇದು ನಮಗೆ ಆರ್ಥಿಕವಾಗಿ ಲಾಭದಾಯಕವಲ್ಲ. ಆದ್ದರಿಂದ ನಾವು ನಮ್ಮ ವಿತರಣೆಗಳನ್ನು ಕೈಗೊಳ್ಳಲು ಬೇರೆ ಕೆಲವು ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ನೋಡುತ್ತಿದ್ದೇವೆ. ಪಾಯಿಂಟ್ ಟು ಪಾಯಿಂಟ್‌ಗೆ ಪ್ರಯಾಣಿಸಲು ಒಂದೆರಡು ಗಂಟೆಗಳ ಕಾಲ ಅಗತ್ಯವಿರುವ ಇತರೆ ಯುಲು ಬಳಕೆದಾರರಿಗೆ ಭಿನ್ನವಾಗಿ, ನಮ್ಮ ವಿತರಣಾ ಸಿಬ್ಬಂದಿಗೆ ದಿನಕ್ಕೆ 6 ರಿಂದ 8 ಗಂಟೆಗಳ ಕಾಲ ಈ ಬೈಕ್ ಬೇಕಾಗಬಹುದು. ಹೀಗಾಗಿ ಬೈಕ್ ಶುಲ್ಕ ಮತ್ತು ಬ್ಯಾಟರಿ ರೀಚಾರ್ಜ್‌ನಲ್ಲಿ ಉಂಟಾದ ಶುಲ್ಕಗಳ ಜೊತೆಗೆ ಇದು ನಮಗೆ ದುಬಾರಿಯಾಗಿದೆ" ಎಂದು ಅವರು ಹೇಳಿದರು.
ಇದೇ ವಿಚಾರವಾಗಿ ಮಾತನಾಡಿದ ಯುಲು ವಕ್ತಾರರು, ಅಂಚೆ ಇಲಾಖೆ ಆರ್ಥಿಕ ರಚನೆಯನ್ನು ಕೆಲಸ ಮಾಡುವುದು ಅಂಚೆ ಇಲಾಖೆಗೆ ಬಿಟ್ಟದ್ದು. ನಾವು ಇನ್ನೂ ಇಲಾಖೆಯೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಎಂದು ಹೇಳಿದರು.
ಇನ್ನು ಅಂಚೆ ವಿತರಣಾ ಪುರುಷರು ಮತ್ತು ಮಹಿಳೆಯರಿಗೆ ಇಲಾಖೆ ಮಾಸಿಕ ಸಾರಿಗೆ ಭತ್ಯೆಯಾಗಿ ರೂ 1,500 ನೀಡಲಾಗುತ್ತದೆ ಮತ್ತು ಅದೇ ಕೆಲಸಕ್ಕಾಗಿ ಗ್ರಾಮೀಣ ದಕ್ ಸೇವಕರಿಗೆ ರೂ 1063 ನೀಡಲಾಗುತ್ತದೆ. ಆರು ತಿಂಗಳ ಹಿಂದೆ 15 ಅಂಚೆ ವಿತರಣಾ ಸಿಬ್ಬಂದಿಯೊಂದಿಗೆ ಈ ಸೇವೆ ಪ್ರಾರಂಭಿಸಿದಾಗ, ಬೆಂಗಳೂರು ಅಂಚೆ ಪ್ರದೇಶಕ್ಕೆ ವಾಹನಗಳನ್ನು ಒದಗಿಸಲಾಯಿತು ಮತ್ತು ವಿತರಣೆಗಾಗಿ ಇ-ಸ್ನೇಹಿ ವಾಹನಗಳನ್ನು ಬಳಸಿದ ದೇಶದಲ್ಲೇ ಮೊದಲನೆಯ ಶಾಖೆ ಎಂಬ ಕೀರ್ತಿಗೂ ಇದು ಭಾಜನವಾಗಿತ್ತು.