ಸಿದ್ದಗಂಗಾ ಶ್ರೀಗಳ 115ನೇ ಜಯಂತಿ: ಮಗುವಿಗೆ ಶಿವಮಣಿ ಎಂದು ಹೆಸರಿಟ್ಟ ಮುಸ್ಲಿಂ ದಂಪತಿ
ಸಿದ್ದಗಂಗಾ ಮಠದ ಡಾ ಶಿವಕುಮಾರ ಸ್ವಾಮೀಜಿಗಳ ತ್ರಿವಿಧ ದಾಸೋಹ ಇಡೀ ದೇಶಕ್ಕೆ ಜನಪ್ರಿಯ. ನಡೆದಾಡುವ ದೇವರೆಂದೇ ಜನಪ್ರಿಯರಾದವರು. ಇಂದು ಏಪ್ರಿಲ್ 1 ಅವರ 115ನೇ ಜಯಂತಿ.
Published: 01st April 2022 01:45 PM | Last Updated: 01st April 2022 01:45 PM | A+A A-

ಮಗುವಿಗೆ ಸಿದ್ದಗಂಗಾ ಶ್ರೀಗಳ ಹೆಸರನ್ನಿಟ್ಟ ಮುಸ್ಲಿಂ ದಂಪತಿ
ತುಮಕೂರು: ಸಿದ್ದಗಂಗಾ ಮಠದ ಡಾ ಶಿವಕುಮಾರ ಸ್ವಾಮೀಜಿಗಳ ತ್ರಿವಿಧ ದಾಸೋಹ ಇಡೀ ದೇಶಕ್ಕೆ ಜನಪ್ರಿಯ. ನಡೆದಾಡುವ ದೇವರೆಂದೇ ಜನಪ್ರಿಯರಾದವರು. ಇಂದು ಏಪ್ರಿಲ್ 1 ಅವರ 115ನೇ ಜಯಂತಿ.
ಈ ಸಂದರ್ಭದಲ್ಲಿ ಸಿದ್ದಗಂಗಾ ಮಠದಲ್ಲಿ ಭಕ್ತಿಪೂರ್ವಕ ಕಾರ್ಯಕ್ರಮಗಳು ನಡೆಯುತ್ತಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದಾರೆ. ಇಂದು ಬೆಳಗ್ಗೆ ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮಜಯಂತಿ ಪ್ರಯುಕ್ತ 115 ಮಕ್ಕಳಿಗೆ ನಾಮಕರಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೆಂಗಳೂರಿನ ಶಿವಕುಮಾರ ಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್ ಮಠದ ಆವರಣದಲ್ಲಿ ಆಯೋಜಿಸಿತ್ತು.
ಮುಸ್ಲಿಂ ಮಗುವಿಗೆ ಶ್ರೀಗಳ ಹೆಸರು: ಕಾರ್ಯಕ್ರಮದಲ್ಲಿ ಕ್ಯಾತ್ಸಂದ್ರ ನಿವಾಸಿ ಶಾಹಿಸ್ತಾ ಮತ್ತು ಜಮೀರ್ ದಂಪತಿ ತಮ್ಮ ಮಗುವಿಗೆ ʼಶಿವಮಣಿʼ ಎಂದು ನಾಮಕರಣ ಮಾಡುವ ಮೂಲಕ ಸೌಹಾರ್ದ ಸಾರಿದ್ದು ವಿಶೇಷವಾಗಿತ್ತು. ರಾಜ್ಯದ ನಾನಾ ಭಾಗಗಳಿಂದ ಮಠಕ್ಕೆ ಬಂದಿದ್ದ ಮಕ್ಕಳಿಗೆ ನಾಮಕರಣ ಮಾಡುವುದರ ಜೊತೆಗೆ ಮಕ್ಕಳಿಗೆ ಬೇಕಾದ ತೊಟ್ಟಿಲು, ಹಾಸಿಗೆ ಸೇರಿದಂತೆ ಇತರೆ ಪರಿಕರಗಳನ್ನು ಉಚಿತವಾಗಿ ವಿತರಿಸಲಾಯಿತು.
ಮುಖ್ಯಮಂತ್ರಿ @BSBommai ಅವರು ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಆಯೋಜಿಸಿರುವ ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ ಡಾ: ಶ್ರೀ ಶಿವಕುಮಾರ ಮಹಾಶಿವಯೋಗಿಗಳವರ 115ನೇ ಜಯಂತೋತ್ಸವ ಹಾಗೂ ಗುರುವಂದನಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರದ ಗೃಹ ಹಾಗೂ ಸಹಕಾರ ಸಚಿವ @AmitShah ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.
— CM of Karnataka (@CMofKarnataka) April 1, 2022
1/2 pic.twitter.com/u6G99uronD