
ಶುಕ್ರವಾರ ನಸುಕಿನ ಜಾವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ ಭೀಕರ ಅಪಘಾತ
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಶುಕ್ರವಾರ ನಸುಕಿನ ಜಾವ ಕೂಡ ರಸ್ತೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ.
ಎಸ್ ಯುವಿಯಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಸೀಬಾರ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟ್ರಕ್ ಗೆ ಡಿಕ್ಕಿ ಹೊಡೆದು ಶಿವರಾಮ್ ಮತ್ತು ಚೇತನ್ ಕುಮಾರ್ ಎಂಬ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ವಾಮಿ ಎಂಬುವವರು ಗಾಯಗೊಂಡಿದ್ದು ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Two people travelling in an SUV were killed when their vehicle hit a truck at Seebara of #Chitradurga on #NH48 Friday. Dead are #Bengaluru residents Shivaram (45), Chetan Kumar (30). Injured Swamy (50) is undergoing treatment at #Chitradurga.@XpressBengaluru @KannadaPrabha pic.twitter.com/95sYeenIVg
— Subash_TNIE (@S27chandr1_TNIE) April 1, 2022
ನಿನ್ನೆಯಷ್ಟೇ ಜಿಲ್ಲೆಯಲ್ಲಿ ಲಾರಿ-ಆಟೋ ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದರು.
ಇದನ್ನೂ ಓದಿ: ಚಿತ್ರದುರ್ಗ: ಲಾರಿ-ಆಟೋ ಭೀಕರ ಅಪಘಾತ; ಮೂವರ ಸಾವು