
ಜಟ್ಕಾ ಕಟ್ ಮಾಂಸದ ಅಂಗಡಿ
ಬೆಂಗಳೂರು: ಯುಗಾದಿ ಹೊಸ ತೊಡಕು ಹಿನ್ನೆಲೆಯಲ್ಲಿ ಬೆಳಂಬೆಳ್ಳಿಗೆ ಜನರು ಮಾಂಸ ಖರೀದಿಗೆ ಮುಗಿ ಬಿದಿದ್ದು, ಖರೀದಿ ಭರಾಟೆ ಬಿರುಸಾಗಿ ಸಾಗಿದೆ. ರಾಜ್ಯದ ಹಲವೆಡೆ ಹಲಾಲ್ ಮಾಂಸವನ್ನು ಹಿಂದೂ ಪರ ಸಂಘಟನೆಗಳು ಬಹಿಷ್ಕರಿಸಿರುವುದರಿಂದ ಈ ಮಾಂಸದ ಅಂಗಡಿಗಳ ಬಳಿ ಜನರ ಸಂಖ್ಯೆ ವಿರಳವಾಗಿದ್ದು, ಹಿಂದೂ ಮಾಂಸದ ಅಂಗಡಿಗಳ ಮುಂದೆ ಜನರು ಕ್ಯೂ ಕಂಡುಬರುತ್ತಿದೆ.
ಬೆಂಗಳೂರಿನ ಮೈಸೂರು ರಸ್ತೆ, ಯಶವಂತಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಹಲಾಲ್ ಮಾಂಸದ ಅಂಗಡಿಗಳ ಮುಂದೆ ಜನ ದಟ್ಟಣೆ ಕಂಡುಬರಲಿಲ್ಲ. ಆದರೆ, ಹಿಂದೂ ಮಾಂಸದ ಅಂಗಡಿಗಳ ಮುಂದೆ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು.
ಇದನ್ನೂ ಓದಿ: ಹಲಾಲ್ v/s ಜಟ್ಕಾ ಕಟ್ ವಿವಾದ ಮಧ್ಯೆ ಪಶು ಸಂಗೋಪನಾ ಇಲಾಖೆಯಿಂದ ಮಹತ್ವದ ಆದೇಶ
ಹಲಾಲ್ ಮಾಂಸ ವಿರೋಧಿಸಿ ಜಟ್ಕಾ ಕಟ್ ಮಾಂಸ ಮಾರಾಟಕ್ಕೆ ಬೆಂಗಳೂರಲ್ಲಿ ಬಜರಂಗದಳ ಮುಂದಾಗಿದೆ. ಈ ಸಂಘಟನೆಯ ಕಾರ್ಯಕರ್ತರು ಮಾಂಸವನ್ನು ಡೆಲಿವರಿ ಮಾಡುತ್ತಿದ್ದಾರೆ. ಆನ್ ಲೈನ್ ಆನ್ ಲೈನ್ ನಲ್ಲಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಾಂಸವನ್ನೂ ಪೂರೈಸಲಾಗುತ್ತಿದೆ.
ಈ ಮಧ್ಯೆ ಬೆಂಗಳೂರಿನ ಶಿವಾಜಿನಗರ ಮತ್ತಿತರ ಕಡೆಗಳಲ್ಲಿ ಹಲಾಲ್ ಮಾಂಸ ಬಹಿಷ್ಕಾರ ಕಂಡುಬರಲಿಲ್ಲ. ಹಲಾಲ್, ಜಟ್ಕಾ ಕಟ್ ಎನ್ನದೇ ಗ್ರಾಹಕರು, ತಮ್ಮಗಿಷ್ಟವಾದ ಮಾಂಸವನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂದಿತು.