ಬೆಂಗಳೂರು: ಪಾಪಣ್ಣ ಅಂಗಡಿ ಮುಂದೆ ತಡರಾತ್ರಿ 2 ಗಂಟೆಯಿಂದ ಜನವೋ ಜನ!
ಈ ಬಾರಿ ಕೊರೋನಾ ಇಳಿಮುಖವಾಗಿರುವುದರಿಂದ ಯುಗಾದಿ ಹೊಸ ತೊಡಕಿನ ಸಂಭ್ರಮಾಚರಣೆ ಹೆಚ್ಚಾಗಿದೆ. ಅದರಲ್ಲೂ ಮಾಂಸ ಪ್ರಿಯರಿಗೆ ಭಾನುವಾರ ಹಬ್ಬದ ಸಡಗರವನ್ನು ಮತ್ತಷ್ಟು ಹೆಚ್ಚಿಸಿದ್ದು, ಮಾಂಸ ಖರೀದಿಗೆ ಮುಗಿ ಬಿದಿದ್ದಾರೆ.
Published: 03rd April 2022 09:29 AM | Last Updated: 03rd April 2022 09:33 AM | A+A A-

ಪಾಪಣ್ಣ ಮಾಂಸದ ಅಂಗಡಿ
ಬೆಂಗಳೂರು: ಈ ಬಾರಿ ಕೊರೋನಾ ಇಳಿಮುಖವಾಗಿರುವುದರಿಂದ ಯುಗಾದಿ ಹೊಸ ತೊಡಕಿನ ಸಂಭ್ರಮಾಚರಣೆ ಹೆಚ್ಚಾಗಿದೆ. ಅದರಲ್ಲೂ ಮಾಂಸ ಪ್ರಿಯರಿಗೆ ಭಾನುವಾರ ಹಬ್ಬದ ಸಡಗರವನ್ನು ಮತ್ತಷ್ಟು ಹೆಚ್ಚಿಸಿದ್ದು, ಮಾಂಸ ಖರೀದಿಗೆ ಮುಗಿ ಬಿದಿದ್ದಾರೆ.
ಯುಗಾದಿ ಹೊಸ ತೊಡಕು ಹಿನ್ನೆಲೆಯಲ್ಲಿ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪಾಪಣ್ಣ ಮಾಂಸದ ಅಂಗಡಿ ಮುಂದೆ ತಡರಾತ್ರಿ 2 ಗಂಟೆಯಿಂದಲೂ ಜನ ಸೇರಿದ್ದು ಕಂಡುಬಂದಿತು. ಬೆಳಗ್ಗೆ 8 ಗಂಟೆಯಾದರೂ ಗ್ರಾಹಕರ ಸಂಖ್ಯೆ ಕಡಿಮೆಯಾಗಲಿಲ್ಲ. ಮಾಂಸಕ್ಕಾಗಿ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದ ಗ್ರಾಹಕರು, ತಾಸು ಗಟ್ಟಲೇ ನಿಂತು ಮಾಂಸ ಖರೀದಿಸಿದರು.
ಇದನ್ನೂ ಓದಿ: ಹೊಸ ತೊಡಕು: ಹಲಾಲ್ ಬಹಿಷ್ಕಾರ, ಜಟ್ಕಾ ಕಟ್ ಮಾಂಸಕ್ಕೆ ಹೆಚ್ಚಾದ ಬೇಡಿಕೆ!
ಈ ಅಂಗಡಿಯಲ್ಲಿ ಉತ್ತಮ ಗುಣಮಟ್ಟದ ಮಾಂಸ ದೊರೆಯುವುದರಿಂದ ಪ್ರತಿವರ್ಷವೂ ಇಲ್ಲಿಗೆ ಬಂದು ಮಾಂಸ ಖರೀದಿಸುವುದಾಗಿ ಗ್ರಾಹಕರು ತಿಳಿಸಿದರು. ಇಲ್ಲಿ ಹಲಾಲ್, ಜಟ್ಕಾ ಕಟ್ ಎನ್ನದೇ ಗ್ರಾಹಕರು ತಮ್ಮಗೆ ಬೇಕಾದ ಮಾಂಸವನ್ನು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಗ್ರಾಹಕರು ಪ್ರತಿವರ್ಷಕ್ಕಿಂತ ಈ ವರ್ಷ ಹೆಚ್ಚು ಮಾಂಸ ಖರೀದಿಸುತ್ತಿದ್ದಾರೆ. ಕೆಜಿ ಮಾಂಸವನ್ನು 800 ರೂಪಾಯಿಯಂತೆ ಮಾರುತ್ತಿದ್ದೇವೆ ಎಂದು ಪಾಪಣ್ಣ ತಿಳಿಸಿದರು.