ಮೈಸೂರು: ಸಾಹಿತಿ ದೇವನೂರು ಮಹಾದೇವ ನೇತೃತ್ವದಲ್ಲಿ ಮುಸ್ಲಿಂರ ಅಂಗಡಿಯಿಂದ ಮಾಂಸ ಖರೀದಿ
ಹಲಾಲ್ ಮಾಂಸ ಬಹಿಷ್ಕಾರ ಅಭಿಯಾನಕ್ಕೆ ಸೆಡ್ಡು ಹೊಡೆದು ಮೈಸೂರಿನಲ್ಲಿ ಸಾಹಿತಿ ದೇವನೂರು ಮಹಾದೇವ ನೇತೃತ್ವದಲ್ಲಿ ಭಾನುವಾರ ಮುಸ್ಲಿಂರ ಅಂಗಡಿಯಿಂದ ಮಾಂಸ ಖರೀದಿಸಲಾಯಿತು.
Published: 03rd April 2022 01:15 PM | Last Updated: 03rd April 2022 02:13 PM | A+A A-

ದೇವನೂರು ಮಹಾದೇವ
ಮೈಸೂರು: ಹಲಾಲ್ ಮಾಂಸ ಬಹಿಷ್ಕಾರ ಅಭಿಯಾನಕ್ಕೆ ಸೆಡ್ಡು ಹೊಡೆದು ಮೈಸೂರಿನಲ್ಲಿ ಸಾಹಿತಿ ದೇವನೂರು ಮಹಾದೇವ ನೇತೃತ್ವದಲ್ಲಿ ಭಾನುವಾರ ಮುಸ್ಲಿಂರ ಅಂಗಡಿಯಿಂದ ಮಾಂಸ ಖರೀದಿಸಲಾಯಿತು.
ಇದನ್ನೂ ಓದಿ: ಹೊಸ ತೊಡಕು: ಹಲಾಲ್ ಬಹಿಷ್ಕಾರ, ಜಟ್ಕಾ ಕಟ್ ಮಾಂಸಕ್ಕೆ ಹೆಚ್ಚಾದ ಬೇಡಿಕೆ!
ಸಕಲೆಂಟು ಜಾತಿ ಸಹಬಾಳ್ವೆ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ ಮೈಸೂರಿನ ಶಾಂತಿ ನಗರದಲ್ಲಿರುವ ಮುಸ್ಲಿಂ ಅಂಗಡಿಯಲ್ಲಿ ಶಾಂತಿ ಸೌಹಾರ್ದತೆ, ಸಹಬಾಳ್ವೆಯ ಸಂದೇಶ ಸಾರುವ ಕಾರಣಕ್ಕಾಗಿ ಮಾಂಸ ಖರೀದಿಸುವ ಕಾರ್ಯಕ್ರಮ ನಡೆಯಿತು.
ಯುಗಾದಿಯ ಹೊಸ ತೊಡಕು ಹಿನ್ನೆಲೆಯಲ್ಲಿಅಜೀಜ್ ಸೇಠ್ ಮುಖ್ಯ ರಸ್ತೆಯಲ್ಲಿನ ಸೈಯ್ಯದ್ ರಿಜ್ವಾನ್ ಅವರ ಕರ್ನಾಟಕ ಮಟನ್ ಅಂಡ್ ಚಿಕನ್ ಸ್ಟಾಲ್ ನಲ್ಲಿ ಮಾಂಸ ಖರೀದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೇವನೂರ ಮಹಾದೇವ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ದ್ವೇಷ ಹೆಚ್ಚಿಸಿ ಜನ ಸಮುದಾಯಗಳನ್ನು ಒಡೆಯಲು ಸರ್ಕಾರವೇ ಕುಮ್ಮಕ್ಕು ನೀಡಿದೆ ಎಂದು ಆರೋಪಿಸಿದರು.