ಬೆಂಗಳೂರು: ಪರಿಸರಸ್ನೇಹಿ ಯುಲು ಇ- ಬೈಕ್ ಜೊತೆಗಿನ ಒಪ್ಪಂದ ಕೈಬಿಟ್ಟ ಅಂಚೆ ಇಲಾಖೆ
ಬೆಂಗಳೂರು ಅಂಚೆ ಇಲಾಖೆ ಪತ್ರಗಳನ್ನು ಬಟವಾಡೆ ಮಾಡಲು ಅಂಚೆ ನೌಕರರು ಪರಿಸರಸ್ನೇಹಿ e- ಬೈಕ್ ಗಳನ್ನು ಬಳಕೆ ಮಾಡುವ ಕುರಿತಾಗಿ ಯುಲು ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು.
Published: 04th April 2022 10:36 AM | Last Updated: 04th April 2022 10:37 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು ಅಂಚೆ ಇಲಾಖೆ ಪತ್ರಗಳನ್ನು ಬಟವಾಡೆ ಮಾಡಲು ಅಂಚೆ ನೌಕರರು ಪರಿಸರಸ್ನೇಹಿ e- ಬೈಕ್ ಗಳನ್ನು ಬಳಕೆ ಮಾಡುವ ಕುರಿತಾಗಿ ಯುಲು ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಆ ಒಪ್ಪಂದವನ್ನು ಅಂಚೆ ಇಲಾಖೆ ಕೈಬಿಟ್ಟಿದೆ.
ಇದನ್ನೂ ಓದಿ: ಮೂಡಿಗೆರೆ: ಹೊಯ್ಸಳ ವಂಶದ ನಾಲ್ಕನೇ ಅರಸ ವಿಷ್ಣುವರ್ಧನ ಸಮಾಧಿ ಪತ್ತೆ
ಅಂಚೆ ಇಲಾಖೆಯು ಪರೀಕ್ಷಾರ್ಥವಾಗಿ ಜೆ.ಪಿ ನಗರ ವ್ಯಾಪ್ತಿಯಲ್ಲಿ ಯುಲು e ಬೈಕ್ ಗಳನ್ನು ಬಳಸಿತ್ತು. ಪ್ರತಿ ಯುಲು e ಬೈಕ್ ಗೆ ತಿಂಗಳಿಗೆ 5,500 ಖರ್ಚು ತಗುಲಿತ್ತು. ಆದರೆ ಈ ಹಿಂದೆ ಇಂಧನಚಾಲಿತ ಟೂವೀಲರ್ ಬಳಸಿದಾಗ ಆಗುತ್ತಿದ್ದ ಖರ್ಚು ವೆಚ್ಚ 1,500ರೂ. ಯುಲು ಇ ಬೈಕ್ ಉಪಯೋಗ ದುಬಾರಿಯಾಗಿದ್ದರಿಂದ ಒಪ್ಪಂದವನ್ನು ಕೈಬಿಡಬೇಕಾಯಿತು ಎಂದು ಅಂಚೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ನೈಸ್ ಸಂಸ್ಥೆ ಸುಪ್ರೀಕೋರ್ಟ್ ಆದೇಶ ಪಾಲಿಸುತ್ತಿದೆಯೇ ಖಚಿತಪಡಿಸಿಕೊಳ್ಳಿ: ಸರ್ಕಾರಕ್ಕೆ ದೇವೇಗೌಡ ಪತ್ರ
6 ತಿಂಗಳ ಹಿಂದೆ ಅಂಚ ಇಲಾಖೆ ಯುಲು ಎ-ಬೈಕ್ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ದೇಶದಲ್ಲೇ ಈ ಬಗೆಯ ಪ್ರಯೋಗ ಕೈಗೊಂಡ ಮೊದಲ ಸರ್ಕಾರಿ ಸಂಸ್ಥೆ ಎನ್ನುವ ಹೆಸರಿಗೆ ಪಾತ್ರವಾಗಿತ್ತು.
ಇದನ್ನೂ ಓದಿ: ಮೈಸೂರು: ಸಾಹಿತಿ ದೇವನೂರು ಮಹಾದೇವ ನೇತೃತ್ವದಲ್ಲಿ ಮುಸ್ಲಿಂರ ಅಂಗಡಿಯಿಂದ ಮಾಂಸ ಖರೀದಿ