ಬೆಂಗಳೂರು: ಬಹುತೇಕ ಗುಂಡಿ ಸಮಸ್ಯೆ ಬಗೆಹರಿದರೂ, ಸಮತಟ್ಟಾಗಿಲ್ಲದ ರಸ್ತೆಗಳಿಂದ ಅಪಾಯ ತಪ್ಪಿದ್ದಲ್ಲ!
ಹೈಕೋರ್ಟ್ ನಿರ್ದೇಶನ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದಂತೆ ನಗರದಲ್ಲಿನ ಬಹುತೇಕ ರಸ್ತೆ ಗುಂಡಿಗಳು ಮುಚ್ಚಲ್ಪಟ್ಟಿವೆ. ಆದಾಗ್ಯೂ, ರಸ್ತೆಗಳು ಇನ್ನೂ ಸಮತಟ್ಟಾಗಿಲ್ಲದ ಕಾರಣ ವಾಹನ ಸವಾರರು ಮತ್ತು ಚಾಲಕರು ಸುಗಮ ಪ್ರಯಾಣದಿಂದ ವಂಚಿತರಾಗುತ್ತಿದ್ದಾರೆ.
Published: 04th April 2022 11:08 AM | Last Updated: 04th April 2022 01:42 PM | A+A A-

ರಸ್ತೆಗಳ ಸಾಂದರ್ಭಿಕ ಚಿತ್ರ
ಬೆಂಗಳೂರು: ಹೈಕೋರ್ಟ್ ನಿರ್ದೇಶನ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದಂತೆ ನಗರದಲ್ಲಿನ ಬಹುತೇಕ ರಸ್ತೆ ಗುಂಡಿಗಳು ಮುಚ್ಚಲ್ಪಟ್ಟಿವೆ. ಆದಾಗ್ಯೂ, ರಸ್ತೆಗಳು ಇನ್ನೂ ಸಮತಟ್ಟಾಗಿಲ್ಲದ ಕಾರಣ ವಾಹನ ಸವಾರರು ಮತ್ತು ಚಾಲಕರು ಸುಗಮ ಪ್ರಯಾಣದಿಂದ ವಂಚಿತರಾಗುತ್ತಿದ್ದಾರೆ.
ರಸ್ತೆಗಳು ಉಬ್ಬುಗಳು, ಸಮವಾಗಿಲ್ಲದ ಕಾರಣ ಬೆನ್ನು ನೋವಿನ ಸಮಸ್ಯೆ ಉಂಟಾಗುತ್ತಿದೆ. ಅನೇಕ ಮಂದಿ ಬೆನ್ನು, ಕುತ್ತಿಗೆ ಮತ್ತು ಭುಜದ ನೋವಿನಿಂದ ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ. ಬಿಬಿಎಂಪಿಯಿಂದ ರಸ್ತೆ ಗುಂಡಿಗಳು ಮುಚ್ಚಲ್ಪಟ್ಟಿವೆ. ಆದರೆ, ಅವುಗಳ ಸ್ಥಿತಿ ಹಾಗೆಯೇ ಇದೆ. ಗುಂಡಿ ಮುಚ್ಚಲು ತೇಪೆ ಹಾಕುವ ಕೆಲಸ ಮಾಡಲಾಗಿದೆ. ಆದರೆ, ಅವುಗಳು ಸಮವಾಗಿಲ್ಲ ಎಂದು ಹೊರಮಾವುವಿನ ಪ್ರಯಾಣಿಕರಾದ ಲಕ್ಷ್ಮಿ ಅವರು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹೈಕೋರ್ಟ್ ನೀಡಿದ ಗಡುವಿನಂತೆ ತರಾತುರಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಆಗಿದೆ. ಆದರೂ ಬೀದಿ ದೀಪಗಳು ಇಲ್ಲದಿದ್ದರೆ ಅಥವಾ ಸರಿಯಾಗಿ ಬೆಳಕು ಕಾಣದಿದ್ದರೆ ವಾಹನ ಸವಾರರು ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ.
ಈ ಸಂಬಂಧ ಬಿಬಿಎಂಪಿ ಇಂಜಿನಿಯರ್ ಅಥವಾ ವಾರ್ಡ್ ಸಮಿತಿಗೆ ದೂರು ಸಲ್ಲಿಸಿದರೆ, ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಏನು ಆದೇಶ ನೀಡಲಾಗಿದೆಯೇ ಅದನ್ನು ಮಾತ್ರ ಮಾಡಿರುವುದಾಗಿ ಹೇಳುತ್ತಿರುವುದಾಗಿ ನಾಗರಿಕರು ತಿಳಿಸಿದರು. ನಾವು ಮಾಡುವ ಕೆಲಸವನ್ನು ಜನರು ಮೆಚ್ಚುವುದಿಲ್ಲ, ಸರ್ಕಾರ ಹಾಗೂ ಹೈಕೋರ್ಟ್ ನಿರ್ದೇಶನದಂತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಬಿಬಿಎಂಪಿ ಇಂಜಿನಿಯರ್ ಒಬ್ಬರು ಹೇಳಿದರು.