ಡಿಜೆ ಹಳ್ಳಿ ರೇಪ್ ಕೇಸ್: ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಕಾಲಿಗೆ ಶೂಟ್ ಮಾಡಿ ಬಂಧಿಸಿದ ಪೊಲೀಸರು!
ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಡಿಜೆ ಹಳ್ಳಿ ರೇಪ್ ಪ್ರಕರಣದ ಆರೋಪಿ ಮೊಹಮ್ಮದ್ ಅವೇಜ್ ನನ್ನು ಬಂಧಿಸಲು ಯತ್ನಿಸಿದ ಪೊಲೀಸ್ ಪೇದೆ ಮೇಲೆ ದಾಳಿ ನಡೆಸಿದ ನಂತರ ಆತನ ಕಾಲಿಗೆ ಶೂಟ್ ಮಾಡಿ ಬಂಧಿಸಲಾಗಿದೆ.
Published: 04th April 2022 09:00 AM | Last Updated: 04th April 2022 09:00 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಡಿಜೆ ಹಳ್ಳಿ ರೇಪ್ ಪ್ರಕರಣದ ಆರೋಪಿ ಮೊಹಮ್ಮದ್ ಅವೇಜ್ ನನ್ನು ಬಂಧಿಸಲು ಯತ್ನಿಸಿದ ಪೊಲೀಸ್ ಪೇದೆ ಮೇಲೆ ದಾಳಿ ನಡೆಸಿದ ನಂತರ ಆತನ ಕಾಲಿಗೆ ಶೂಟ್ ಮಾಡಿ ಬಂಧಿಸಲಾಗಿದೆ.
ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡ ನಂತರ ನಾಪತ್ತೆಯಾಗಿದ್ದ 22 ವರ್ಷದ ರೌಡಿ ಶೀಟರ್ ವೈಯಾಲಿಕಾವಲ್ ನಲ್ಲಿ ಇರುವ ಬಗ್ಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ಶನಿವಾರ ಬೆಳಗ್ಗೆ ಇನ್ಸ್ ಪೆಕ್ಟರ್ ಕಿರಣ್ ಕುಮಾರ್ ನೇತೃತ್ವದ ತಂಡ ಆತನನ್ನು ಬಂಧಿಸಲು ತೆರಳಿತ್ತು. ಈ ಸಂದರ್ಭದಲ್ಲಿ ಶರಣಾಗುವಂತೆ ಹೇಳಿದರೂ, ಆರೋಪಿ ಅವೇಜ್ ಡ್ರ್ಯಾಗರ್ ನೊಂದಿಗೆ ಕಾನ್ಸ್ ಟೇಬಲ್ ಅರುಣ್ ಕುಮಾರ್ ಮೇಲೆ ದಾಳಿ ನಡೆಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಎಚ್ಚರಿಕೆಯ ಹೊರತಾಗಿಯೂ ಆತನ ಅಲ್ಲಿಂದ ಓಡಲು ಶುರು ಮಾಡಿದ ನಂತರ ಆತನ ಕಾಲಿಗೆ ಇನ್ಸ್ ಪೆಕ್ಟರ್ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ಹಾಗೂ ಪೊಲೀಸ್ ಕಾನ್ಸ್ ಟೇಬಲ್ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ಆಗಿದ್ದ ಪತಿ ಕೆಲಸಕ್ಕೆ ಹೋಗಿದ್ದ ಮೇಲೆ ಮನೆಗೆ ನುಗ್ಗಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅವೇಜ್ ನನ್ನು ಬಂಧಿಸಲಾಗಿತ್ತು. ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿರುವ ಅವೇಜ್ ವಿರುದ್ಧ 28 ಪ್ರಕರಣಗಳಿದ್ದು, ನಗರದಿಂದ ಗಡಿಪಾರು ಮಾಡಲಾಗಿತ್ತು.