2020-21ನೇ ಸಾಲಿನ ಏಕಲವ್ಯ, ಕ್ರೀಡಾರತ್ನ, ಕ್ರೀಡಾ ಪೋಷಕ ಪ್ರಶಸ್ತಿ ಪ್ರಕಟ

ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನೀಡುವ 2020-21ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ, ಕ್ರೀಡಾರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು...

Published: 04th April 2022 03:55 PM  |   Last Updated: 04th April 2022 03:55 PM   |  A+A-


Karnataka government announced Ekalavya Awards for 16 sportspersons

ಸಾಂದರ್ಭಿಕ ಚಿತ್ರ

Online Desk

ಬೆಂಗಳೂರು: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನೀಡುವ 2020-21ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ, ಕ್ರೀಡಾರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರೇಷ್ಮೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಸೋಮವಾರ ಘೋಷಿಸಿದ್ದಾರೆ.

ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಚಿವ ಡಾ.ನಾರಾಯಣಗೌಡ ಅವರು, ಕ್ರೀಡಾ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ ಕ್ರೀಡಾಪಟುಗಳು ಹಾಗೂ ತರಬೇತುದಾರರಿಗೆ ಕೊಡಲ್ಪಡುವ ಕ್ರೀಡಾಪಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಏಕಲವ್ಯ ಪ್ರಶಸ್ತಿಗೆ 15, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ 14, ಕರ್ನಾಟಕ ಕ್ರೀಡಾಪೋಷಕ ಪ್ರಶಸ್ತಿಗೆ 10 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ.

2020-21 ನೇ ಸಾಲಿನಲ್ಲಿ ಏಕಲವ್ಯ ಪ್ರಶಸ್ತಿಗೆ 151, ಕರ್ನಾಟಕ ಕ್ರೀಡಾರತ್ನ 53, ಕ್ರೀಡಾ ಪೋಷಕ 25 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ 28 ಅರ್ಜಿಗಳು ಸ್ವೀಕೃತವಾಗಿದ್ದವು. ಇದರಲ್ಲಿ ಪ್ರಶಸ್ತಿ ಆಯ್ಕೆಗೆ ನೇಮಿಸಲಾಗಿದ್ದ ತಜ್ಞರ ಸಮಿತಿ ಪರಿಶೀಲನೆ ನಡೆಸಿ ಅರ್ಹರನ್ನು ಆಯ್ಕೆ ಮಾಡಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಪ್ರಶಸ್ತಿ ಪ್ರದಾನ ದಿನಾಂಕವನ್ನು ನಿಗದಿಮಾಡಿ ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.

ಏಕಲವ್ಯ ಪ್ರಶಸ್ತಿ ಪುರಸ್ಕೃತರಿಗೆ ಏಕಲವ್ಯನ ಕಂಚಿನ ಪ್ರತಿಮೆ, ಸಮವಸ್ತ್ರ, 2 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಫಲಕ, ಸಮವಸ್ತ್ರ, 1 ಲಕ್ಷ ನಗದು ಬಹುಮಾನ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಫಲಕ, ಸಮವಸ್ತ್ರ, 1 ಲಕ್ಷ ರೂ.ನಗದು ಪುರಸ್ಕಾರ ಮತ್ತು ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪತ್ರ ಮತ್ತು 5 ಲಕ್ಷ ನಗದು ಪುರಸ್ಕಾರ ಸಿಗಲಿದೆ.

ಏಕಲವ್ಯ ಪ್ರಶಸ್ತಿ
ಜೀವನ್ ಕೆಎಸ್ - ಅಥ್ಲೆಟಿಕ್ಸ್
ನಿತಿನ್ - ನೆಟ್ ಬಾಲ್
ಅಶ್ವಿನಿ ಭಟ್ - ಬ್ಯಾಡ್ಮಿಂಟನ್ 
ಜಿ ತರುಣ್ ಕೃಷ್ಣಪ್ರಸಾದ್ - ರೋಯಿಂಗ್
ಲೋಪಮುದ್ರಾ ತಿಮ್ಮಯ್ಯ - ಬ್ಯಾಸ್ಕೆಟ್ ಬಾಲ್ 
ಲಿಖಿತ್ ಎಸ್​ಪಿ - ಈಜು 
ಕರುಣ್ ನಾಯರ್ - ಕ್ರಿಕೆಟ್ 
ಅನರ್ಘ್ಯ ಮಂಜುನಾಥ್ - ಟೇಬಲ್ ಟೆನ್ನಿಸ್ 
ದಾನಮ್ಮ ಚಿಚಖಂಡಿ - ಸೈಕ್ಲಿಂಗ್ 
ಅಶ್ವಲ್ ರೈ - ವಾಲಿಬಾಲ್ 
ವಸುಂಧರಾ ಎಂ ಎನ್ - ಜುಡೋ 
ಪ್ರಧಾನ್ ಸೋಮಣ್ಣ - ಹಾಕಿ 
ಪ್ರಶಾಂತ್ ಕುಮಾರ್ ರೈ  - ಕಬಡ್ಡಿ
ರಾಧಾ ವಿ - ಪ್ಯಾರಾ ಅಥ್ಲೆಟಿಕ್ಸ್ 
ಮುನೀರ್ ಬಾಷಾ - ಖೋಖೋ

ಕ್ರೀಡಾ ರತ್ನ ಪ್ರಶಸ್ತಿ
ಪೂಜಾ ಗಾಲಿ - ಆಟ್ಯಾ-ಪಾಟ್ಯಾ 
ಬಿಎನ್ ಕಿರಣ್ ಕುಮಾರ್ - ಬಾಲ್ ಬ್ಯಾಡ್ಮಿಂಟನ್ 
ಗೋಪಾಲ ನಾಯ್ಕ್- ಕಂಬಳ
ದೀಕ್ಷಾ ಕೆ - ಖೋಖೋ 
ಶಿವಯೋಗಿ ಬಸಪ್ಪ ಬಾಗೇವಾಡಿ - ಗುಂಡುಕಲ್ಲು ಎತ್ತುವುದು 
ಲಕ್ಷ್ಮೀ ಬಿರೆಡೆಕರ್ - ಕುಸ್ತಿ 
ಪಿ ಗೋಪಾಲಕೃಷ್ಣ - ಯೋಗ 
ರಾಘವೇಂದ್ರ ಎಸ್ ಹೊಂಡದಕೇರಿ - ಪವರ್ ಲಿಫ್ಟಿಂಗ್ 
ಸಿದ್ದಪ್ಪ ಪಾಂಡಪ್ಪ ಹೊಸಮನಿ - ಸಂಗ್ರಾಣಿ ಕಲ್ಲು ಎತ್ತುವುದು 
ಸೂರಜ್ ಎಸ್ ಅಣ್ಣಿಕೇರಿ - ಕುಸ್ತಿ 
ಶಶಾಂಕ್ ಬಿಎಂ - ಪ್ಯಾರಾ ಈಜು 
ಡಿ ನಾಗರಾಜು - ಯೋಗ 
ಶ್ರೀವರ್ಷಿಣಿ - ಜಿಮ್ನ್ಯಾಸ್ಟಿಕ್ 
ಅವಿನಾಶ್ ನಾಯ್ಕ - ಜುಡೋ

ಕ್ರೀಡಾ ಪೋಷಕ ಪ್ರಶಸ್ತಿ
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಟ್ರಸ್ಟ್ ಉಜಿರೆ, ಬೆಂಗಳೂರು ನಗರ ಜಿಲ್ಲೆಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ, ಬೆಂಗಳೂರು ನಗರ ಜಿಲ್ಲೆಯ ಆರ್ ವಿ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು ನಗರ ಜಿಲ್ಲೆಯ ಹೂಡಿ ಸ್ಪೋರ್ಟ್ಸ್ ಕ್ಲಬ್, ಧಾರವಾಡ ಜಿಲ್ಲೆಯ ಬಾಲ ಮಾರುತಿ ಸಂಸ್ಥೆ, ಬೆಂಗಳೂರು ನಗರ ಜಿಲ್ಲೆ ಎಮಿನೆಂಟ್ ಶೂಟಿಂಗ್ ಹಬ್, ದಕ್ಷಿಣ ಕನ್ನಡ ಜಿಲ್ಲೆಯ ಬಾಲಾಂಜನೇಯ ಜಿಮ್ನಾಶಿಯಂ (ರಿ.) ಮಂಗಳೂರು, ಬೆಂಗಳೂರು ನಗರ ಜಿಲ್ಲೆಯ ಬಸವನಗುಡಿ ಅಕ್ವಾಟಿಕ್ ಸೆಂಟರ್, ಬೆಂಗಳೂರು ನಗರ ಜಿಲ್ಲೆಯ ದ್ರಾವಿಡ್ ಪಡುಕೋಣೆ ಅಕಾಡೆಮಿ, ಮಂಡ್ಯ ಜಿಲ್ಲೆಯ ಪೀಪಲ್ ಎಜುಕೇಷನ್ ಟ್ರಸ್ಟ್ ಆಯ್ಕೆಯಾಗಿದೆ.

ಜೀವಮಾನ ಸಾಧನಾ ಪ್ರಶಸ್ತಿಗೆ ಅಥ್ಲೆಟಿಕ್ಸ್​ನಲ್ಲಿ ಗಾವಂಕರ್ ಜಿವಿ, ಕಯಾಕಿಂಗ್ ಮತ್ತು ಕನೋಯಿಂನಲ್ಲಿ ಕ್ಯಾಪ್ಟನ್ ದಿಲೀಪ್ ಕುಮಾರ್ ಆಯ್ಕೆಯಾಗಿದ್ದಾರೆ.


Stay up to date on all the latest ರಾಜ್ಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp