ದೇಶದಲ್ಲಿಯೇ ಇದೇ ಮೊದಲು: 4 ಸಾವಿರ ಎಕರೆ ಭೂಮಿಯಲ್ಲಿ ಸಾವಯವ ಕೃಷಿ; ರಾಜ್ಯ ಸರ್ಕಾರದಿಂದ ಅಧ್ಯಯನ
ದೇಶದಲ್ಲಿಯೇ ಮೊದಲ ಬಾರಿಗೆ ಸಾವಯವ ಕೃಷಿಯತ್ತ ಗಮನ ಹರಿಸಿರುವ ರಾಜ್ಯ ಸರ್ಕಾರ, ಯಾವುದೇ ರಾಸಾಯನಿಕ ಮತ್ತು ಕ್ರಿಮಿನಾಶಕ ಬಳಸದೆ ರಾಜ್ಯದ ನಾಲ್ಕು ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ತಲಾ 1, 000 ಎಕರೆಯಂತೆ 4,000 ಎಕರೆ ಭೂಮಿಯಲ್ಲಿ ಬೆಳೆ ಬೆಳೆಯಲು ಮುಂದಾಗಿದೆ.
Published: 04th April 2022 07:42 AM | Last Updated: 04th April 2022 01:40 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ದೇಶದಲ್ಲಿಯೇ ಮೊದಲ ಬಾರಿಗೆ ಸಾವಯವ ಕೃಷಿಯತ್ತ ಗಮನ ಹರಿಸಿರುವ ರಾಜ್ಯ ಸರ್ಕಾರ, ಯಾವುದೇ ರಾಸಾಯನಿಕ ಮತ್ತು ಕ್ರಿಮಿನಾಶಕ ಬಳಸದೆ ರಾಜ್ಯದ ನಾಲ್ಕು ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ತಲಾ 1, 000 ಎಕರೆಯಂತೆ 4,000 ಎಕರೆ ಭೂಮಿಯಲ್ಲಿ ಬೆಳೆ ಬೆಳೆಯಲು ಮುಂದಾಗಿದೆ.
ರಾಸಾಯನಿಕ ಮುಕ್ತ ತರಕಾರಿಗಳು ಮತ್ತು ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಬೆಂಗಳೂರು, ಧಾರವಾಡ, ರಾಯಚೂರು ಮತ್ತು ಶಿವಮೊಗ್ಗ ಕೃಷಿ ವಿಜ್ಞಾನ ವಿವಿಗಳಲ್ಲಿ ಈ ಮುಂಗಾರು ಮುನ್ನ ರಾಸಾಯನಿಕ ಮುಕ್ತ ಕೃಷಿ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಒಂದು ಬಾರಿ ಇದು ಯಶಸ್ವಿಯಾದಲ್ಲಿ ಸಾವಯವ ಕೃಷಿ ಮಾದರಿಯನ್ನು ರೈತರಿಗೆ ತಿಳಿಸಲಾಗುತ್ತದೆ.
ಈ ವಿಶ್ವವಿದ್ಯಾಲಯಗಳಲ್ಲಿ ಭೂಮಿ ಲಭ್ಯವಿದ್ದು, ಪ್ರತಿ ಕ್ಯಾಂಪಸ್ ನಲ್ಲಿ ತಲಾ 1 ಸಾವಿರ ಎಕರೆ ಭೂಮಿಯಲ್ಲಿ ಸಾವಯವ ಕೃಷಿ ಕೈಗೊಳ್ಳಲಾಗುವುದು, ವಲಯ ಆಧಾರಿತ ಬೆಳೆಗಳತ್ತ ಗಮನ ಹರಿಸಲಾಗುವುದು ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಸಾವಯವ ಕೃಷಿಯಿಂದ ಭೂಮಿಯ ಫಲವತತ್ತೆ , ಉತ್ಪಾದನೆ ಹೆಚ್ಚಾಗಲಿದ್ದು, ಕಾರ್ಬನ್ ಅಂಶ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಮಾಜಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.