ನಾವು ಭಾರತದಲ್ಲಿ ನೆಮ್ಮದಿಯಿಂದ ಇದ್ದೇವೆ; ಅಲ್ ಖೈದಾ ಮೆಚ್ಚುಗೆಗೆ ವಿದ್ಯಾರ್ಥಿನಿ ಮುಸ್ಕಾನ್ ತಂದೆಯ ಪ್ರತಿಕ್ರಿಯೆ
ಮಂಡ್ಯದಲ್ಲಿ ಹಿಜಾಬ್ ಪರ-ವಿರುದ್ಧ ಪ್ರತಿಭಟನೆ ವೇಳೆ ಜೈ ಶ್ರೀರಾಮ್ ಘೋಷಣೆಗೆ ಪ್ರತಿಯಾಗಿ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಎಂಬ ವಿದ್ಯಾರ್ಥಿನಿಯ ಬಗ್ಗೆ ಅಲ್ ಖೈದಾ ಮೆಚ್ಚುಗೆ ವ್ಯಕ್ತಪಡಿಸಿದ್ದರ ಬಗ್ಗೆ ಆಕೆಯ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.
Published: 06th April 2022 10:24 PM | Last Updated: 07th April 2022 01:36 PM | A+A A-

ಹಿಜಾಬ್ ಪ್ರತಿಭಟನೆ
ಮಂಡ್ಯ: ಮಂಡ್ಯದಲ್ಲಿ ಹಿಜಾಬ್ ಪರ-ವಿರುದ್ಧ ಪ್ರತಿಭಟನೆ ವೇಳೆ ಜೈ ಶ್ರೀರಾಮ್ ಘೋಷಣೆಗೆ ಪ್ರತಿಯಾಗಿ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಎಂಬ ವಿದ್ಯಾರ್ಥಿನಿಯ ಬಗ್ಗೆ ಅಲ್ ಖೈದಾ ಮೆಚ್ಚುಗೆ ವ್ಯಕ್ತಪಡಿಸಿದ್ದರ ಬಗ್ಗೆ ಆಕೆಯ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.
ಉಗ್ರ ಸಂಘಟನೆಯ ಶಹಬ್ಬಾಸ್ ಗಿರಿಯನ್ನು ತಪ್ಪು ಎಂದು ಹೇಳಿರುವ ಮುಸ್ಕಾನ್ ತಂದೆ, ತಾವು ತಮ್ಮ ಕುಟುಂಬದವರು ಭಾರತದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಂಡ್ಯದ ಮುಸ್ಕಾನ್ ಗೆ ಅಲ್ ಖೈದಾ ಮುಖ್ಯಸ್ಥನ ಶಬ್ಬಾಸ್ ಗಿರಿ!
ಈ ರೀತಿಯ ಘಟನೆಗಳು ಕುಟುಂಬದಲ್ಲಿ ಶಾಂತಿಯನ್ನು ಹದಗೆಡಿಸುತ್ತದೆ. ಅಲ್ ಖೈದಾ ಉಗ್ರ ಸಂಘಟನೆ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಯಾವುದೇ ರೀತಿಯ ತನಿಖೆಯನ್ನು ನಡೆಸಬಹುದಾಗಿದೆ. ಆ ವಿಡಿಯೋ ಬಗ್ಗೆ ನಮಗೆ ಏನು ತಿಳಿದಿಲ್ಲ. ಇದೇ ಮೊದಲ ಬಾರಿಗೆ ಮುಸ್ಕಾನ್ ಬಗ್ಗೆ ಅಲ್ ಖೈದಾ ಉಗ್ರ ಸಂಘಟನೆ ಮಾತನಾಡಿರುವ ವಿಡಿಯೋ ನೋಡುತ್ತೇವೆ, ಅರೇಬಿಕ್ ನಲ್ಲಿ ಅವರೇನೋ ಹೇಳಿದ್ದಾರೆ. ಭಾರತದಲ್ಲಿ ನಾವೆಲ್ಲರೂ ನಂಬಿಕೆ, ಭ್ರಾತೃತ್ವದಲ್ಲಿ ನೆಲೆಸಿದ್ದೇವೆ"ಎಂದು ಮೊಹಮ್ಮದ್ ಹುಸೇನ್ ಖಾನ್ ಜವಾಹಿರಿಯ ವಿಡಿಯೋ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.