ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಂಡ್ಯದ ಮುಸ್ಕಾನ್ ಗೆ ಅಲ್ ಖೈದಾ ಮುಖ್ಯಸ್ಥನ ಶಬ್ಬಾಸ್ ಗಿರಿ!

ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದಕ್ಕೆ ಇದೀಗ ಉಗ್ರ ಸಂಘಟನೆ ಅಲ್ ಖೈದಾ ಎಂಟ್ರಿ ಕೊಟ್ಟಿದ್ದು, ಉಗ್ರ ಸಂಘಟನೆಯ ಮುಖ್ಯಸ್ಥ, ಮೋಸ್ಟ್ ವಾಂಟೆಡ್ ಉಗ್ರ ಅಯ್ಮಾನ್ ಅಲ್ ಜವಾಹಿರಿ, ಮಂಡ್ಯದಲ್ಲಿ ಹಿಜಾಬ್ ವಿರೋಧಿಸಿ ಜೈ ಶ್ರೀರಾಮ...

Published: 06th April 2022 03:02 PM  |   Last Updated: 06th April 2022 03:02 PM   |  A+A-


mandya

ಮುಸ್ಕಾನ್ ಖಾನ್ - ಅಲ್ ಖೈದಾ ಮುಖ್ಯಸ್ಥ

Online Desk

ಬೆಂಗಳೂರು: ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದಕ್ಕೆ ಇದೀಗ ಉಗ್ರ ಸಂಘಟನೆ ಅಲ್ ಖೈದಾ ಎಂಟ್ರಿ ಕೊಟ್ಟಿದ್ದು, ಉಗ್ರ ಸಂಘಟನೆಯ ಮುಖ್ಯಸ್ಥ, ಮೋಸ್ಟ್ ವಾಂಟೆಡ್ ಉಗ್ರ ಅಯ್ಮಾನ್ ಅಲ್ ಜವಾಹಿರಿ, ಮಂಡ್ಯದಲ್ಲಿ ಹಿಜಾಬ್ ವಿರೋಧಿಸಿ ಜೈ ಶ್ರೀರಾಮ ಘೋಷಣೆಗೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಅವರನ್ನು ಹಾಡಿ ಹೊಗಳಿದ್ದಾರೆ.

ಮುಸ್ಕಾನ್ ಖಾನ್ ಅವರನ್ನು ಶ್ಲಾಘಿಸಿ 9 ನಿಮಿಷಗಳ ವೀಡಿಯೊವನ್ನು ಬಿಡುಗಡೆ ಮಾಡಿರುವ ಜವಾಹಿರಿ, ಹಿಜಾಬ್ ನಿಷೇಧದ ವಿರುದ್ಧ ಧ್ವನಿ ಎತ್ತುವಂತೆ ಭಾರತೀಯ ಮುಸ್ಲಿಮರಿಗೆ ಕರೆ ನೀಡಿದ್ದಾನೆ.

ಇದನ್ನು ಓದಿ: 'ಹಲಾಲ್ ಕಟ್, ಹಿಜಾಬ್ ಬಗ್ಗೆ ನಿಮ್ಮ ನಿಲುವು ಸ್ಪಷ್ಟಪಡಿಸಿ': ವಿಪಕ್ಷಗಳಿಗೆ ಬಿಜೆಪಿ ಸವಾಲು

ವಿಡಿಯೋದಲ್ಲಿ ಭಾರತದ ಹಿಂದೂ ಪ್ರಜಾಪ್ರಭುತ್ವದಲ್ಲಿ ಮುಸ್ಲಿಮರು ಕಿರುಕುಳಕ್ಕೆ ಒಳಗಾಗಿದ್ದು, ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಂಡ್ಯದ ಮುಸ್ಕಾನ್ ಭಾರತದ ಮಹಾನ್ ಮಹಿಳೆ(ನೋಬಲ್ ವುಮೆನ್ ಆಫ್ ಇಂಡಿಯಾ) ಎಂದ ಕರೆದಿದ್ದಾನೆ. ಅಲ್ಲದೆ ಮುಸ್ಕಾನ್ ನನ್ನು ಹೊಗಳಿ ಕವನ ಓದಿದ್ದಾನೆ .

ಸಾಮಾಜಿಕ ಮಾಧ್ಯಮದ ಮೂಲಕ ಮುಸ್ಕಾನ್ ಬಗ್ಗೆ ತಿಳಿದಿದೆ ಎಂದು ವಿಡಿಯೋದಲ್ಲಿ ಜವಾಹಿರಿ ಹೇಳಿದ್ದಾನೆ. ಈ ಸಹೋದರಿ ತಕ್ಬೀರ್ ಧ್ವನಿಯನ್ನು ಎತ್ತುವ ಮೂಲಕ ನನ್ನ ಹೃದಯವನ್ನು ಗೆದ್ದಿದ್ದಾಳೆ ಎಂದು ಉಗ್ರ ಹೇಳಿದ್ದಾನೆ.

ಜವಾಹಿರಿಯ ಈ ವೀಡಿಯೊವನ್ನು ಅಲ್ ಖೈದಾದ ಅಧಿಕೃತ ಶಬಾಬ್ ಮೀಡಿಯಾ ಬಿಡುಗಡೆ ಮಾಡಿದೆ. ಒಸಾಮಾ ಬಿನ್ ಲಾಡೆನ್ ನಂತರ ಅಲ್ ಖೈದಾ ನಾಯಕನಾದ ಜವಾಹಿರಿ ಕರ್ನಾಟಕ ಕಾಲೇಜು ವಿದ್ಯಾರ್ಥಿ ಮುಸ್ಕಾನ್ ಖಾನ್ ನನ್ನು ಮುಕ್ತಕಂಠದಿಂದ ಹೊಗಳಿದ್ದಾನೆ. ಬಿಡುಗಡೆ ಮಾಡಿದ ವಿಡಿಯೋಗೆ ನೋಬಲ್ ವುಮನ್ ಆಫ್ ಇಂಡಿಯಾ ಎಂದು ಶೀರ್ಷಿಕೆ ನೀಡಲಾಗಿದೆ.


Stay up to date on all the latest ರಾಜ್ಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments(2)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • madhava rao

    ಆ ಭಯೋತ್ಪಾದಕನಿಗೆ ಆಕೆಯ ಮೇಲೆ ಅಷ್ಟೊಂದು ಮಮತೆ ಇದ್ದರೆ ಆಕೆಯನ್ನು ತನ್ನ ಸಂಘಟನೆಗೆ ಸೇರಿಸಿಕೊಂಡು ಭಯೋತ್ಪಾದನೆ ಕೃತ್ಯಗಳಿಗೆ ಬಳಸಿಕೊಳ್ಳಬಹುದು.
    4 months ago reply
    • Ravi

      Well said bro
      4 months ago reply
flipboard facebook twitter whatsapp