ಧಾರ್ಮಿಕ ಕೇಂದ್ರಗಳಲ್ಲಿನ ಧ್ವನಿವರ್ಧಕಗಳ ಶಬ್ದ ಮಿತಿಯನ್ನು ಪರಿಶೀಲಿಸಿ: ಡಿಜಿ-ಐಜಿಪಿ ಪ್ರವೀಣ್ ಸೂದ್ ಆದೇಶ
ರಾಜ್ಯದಲ್ಲಿರುವ ಧಾರ್ಮಿಕ ಸಂಸ್ಥೆಗಳು, ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಲ್ಲಾ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.
Published: 07th April 2022 08:38 AM | Last Updated: 07th April 2022 01:37 PM | A+A A-

ಪ್ರವೀಣ್ ಸೂದ್
ಬೆಂಗಳೂರು: ರಾಜ್ಯದಲ್ಲಿರುವ ಧಾರ್ಮಿಕ ಸಂಸ್ಥೆಗಳು, ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಲ್ಲಾ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.
ಮೊನ್ನೆ ಮಂಗಳವಾರ ಎಲ್ಲಾ ಪೊಲೀಸ್ ಆಯುಕ್ತರು, ಐಜಿಪಿಗಳು ಮತ್ತು ಎಸ್ಪಿಗಳಿಗೆ ಮೆಮೊ ಹೊರಡಿಸಿರುವ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್, ಹೈಕೋರ್ಟ್ ನಲ್ಲಿ ಶಬ್ದ ಮಾಲಿನ್ಯ ಬಗ್ಗೆ ಸಲ್ಲಿಸಿರುವ ರಿಟ್ ಅರ್ಜಿಯನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹೇಳಿದ್ದಾರೆ. ಶಬ್ದ ಮಾಲಿನ್ಯ (ಅನುಮತಿ ಮತ್ತು ನಿಯಂತ್ರಣ) ನಿಯಮ 2000ವನ್ನು ಉಲ್ಲಂಘಿಸುವ ಧಾರ್ಮಿಕ ಕೇಂದ್ರಗಳು, ಪಬ್ ಗಳು, ನೈಟ್ ಕ್ಲಬ್ ಗಳು ಅಥವಾ ಇತರ ಯಾವುದೇ ಸಂಘ-ಸಂಸ್ಥೆಗಳು, ಕಾರ್ಯಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಬಹುದೆಂದು ಸೂಚಿಸಲಾಗಿದೆ ಎಂದು ಪ್ರವೀಣ್ ಸೂದ್ ಹೇಳಿದ್ದಾರೆ.
ಇದನ್ನೂ ಓದಿ: ನಾವು ಭಾರತದಲ್ಲಿ ನೆಮ್ಮದಿಯಿಂದ ಇದ್ದೇವೆ; ಅಲ್ ಖೈದಾ ಮೆಚ್ಚುಗೆಗೆ ವಿದ್ಯಾರ್ಥಿನಿ ಮುಸ್ಕಾನ್ ತಂದೆಯ ಪ್ರತಿಕ್ರಿಯೆ
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಆದೇಶದ ಮೇರೆಗೆ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಧಾರ್ಮಿಕ ಸ್ಥಗಳಲ್ಲಿ ಹಾಕಿರುವ ಧ್ವನಿವರ್ಧಕಗಳ ಶಬ್ದ ಮಟ್ಟವನ್ನು ತಪಾಸಣೆ ಮಾಡಲು ಆರಂಭಿಸಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಒದಗಿಸಿರುವ ಸಾಧನಗಳಿಂದ ಶಬ್ದದ ಮಟ್ಟವನ್ನು ತಪಾಸಣೆ ಮಾಡುತ್ತಿದ್ದು ಅದು ಅನುಮತಿಯ ಮಿತಿಯಲ್ಲಿದೆಯೇ ಎಂದು ತಪಾಸಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹಿಜಾಬ್ ನಿಂದ ಆಜಾನ್ ಗೆ: ಮಸೀದಿಯಲ್ಲಿ ಧ್ವನಿವರ್ಧಕ ನಿರ್ಬಂಧಿಸಲು ಏ.13ರವರೆಗೆ ಸರ್ಕಾರಕ್ಕೆ ಹಿಂದೂಪರ ಸಂಘಟನೆಗಳ ಗಡುವು