'ಹಿಂದೂ ಹುಡುಗರು ಆವೇಶದಿಂದ ಘೋಷಣೆ ಕೂಗಿರಬಹುದು, ಅತ್ಯಾಚಾರ ಮಾಡುವ ಮನಸ್ಥಿತಿಯವರಲ್ಲ, ಹೀಗಾಗಿ ಆಕೆ ಬಚಾವಾಗಿದ್ದಾಳೆ'
ಮಂಡ್ಯದ ಮುಸ್ಕಾನ್ ಖಾನ್ ಗೆ ಅಲ್‌ಖೈದಾ ಉಗ್ರ ನಾಯಕ ಹೊಗಳಿದ ವಿಡಿಯೋ ಬಹಿರಂಗವಾದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದು, ಆವತ್ತು ಆಕೆ ಸುರಕ್ಷಿತವಾಗಿ ಮನೆಗೆ ಬರಲು ಕಾರಣ ಅಲ್ಲಿದ್ದ ಹಿಂದೂ ಹುಡುಗರು ಎಂದು ಹೇಳಿದ್ದಾರೆ.
Published: 07th April 2022 08:59 AM | Last Updated: 07th April 2022 09:03 AM | A+A A-

ಸಿ. ಟಿ ರವಿ
ಬೆಂಗಳೂರು: ಮಂಡ್ಯದ ಮುಸ್ಕಾನ್ ಖಾನ್ ಗೆ ಅಲ್‌ಖೈದಾ ಉಗ್ರ ನಾಯಕ ಹೊಗಳಿದ ವಿಡಿಯೋ ಬಹಿರಂಗವಾದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದು, ಆವತ್ತು ಆಕೆ ಸುರಕ್ಷಿತವಾಗಿ ಮನೆಗೆ ಬರಲು ಕಾರಣ ಅಲ್ಲಿದ್ದ ಹಿಂದೂ ಹುಡುಗರು ಎಂದು ಹೇಳಿದ್ದಾರೆ.
ಹಿಂದೂ ಹುಡುಗರ ಜಾಗದಲ್ಲಿ ಮುಸ್ಲಿಂ ಹುಡುಗರು, ಹಿಂದೂ ಹುಡುಗಿ ಇದ್ದಿದ್ದರೆ ಆಕೆ ಸುರಕ್ಷಿತವಾಗಿ ಹೋಗುತ್ತಿರಲಿಲ್ವೇನೋ? ಯಾಕೆಂದರೆ ಹಿಂದೂ ಹುಡುಗರು ಆವೇಶದಿಂದ ಘೋಷಣೆ ಕೂಗಿರಬಹುದು ಆದರೆ ಅತ್ಯಾಚಾರ ಮಾಡುವ ಮನಸ್ಥಿತಿಯವರಲ್ಲ. ಹಾಗಾಗಿ ಆಕೆ ಬಚಾವಾಗಿದ್ದಾಳೆಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಿಜಾಬ್ ಸಮವಸ್ತ್ರಕ್ಕೆ ಮಾತ್ರ ವಿರೋಧ ಇಲ್ಲ ಅನ್ನುವುದು ಗೊತ್ತಾಗಿದೆ. ಸಮಾಜ ಒಡೆಯುವ ಸಂಚು ಇದೆ ಅನ್ನಿಸುತ್ತಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೀಬೇಕು. ಹಿಜಾಬ್ ವಿವಾದದ ಹಿಂದೆ ಬೇರೆಯದೇ ಸಂಚು ಇದೆ ಅನ್ನಿಸುತ್ತದೆ. ನೂರಾರು ಸಂಸ್ಕೃತಿ, ವೈವಿಧ್ಯತೆಯ ರಾಷ್ಟ್ರ ಭಾರತ ವನ್ನು ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.