ತಂಬಾಕಿನಿಂದ ಮಕ್ಕಳನ್ನು ರಕ್ಷಿಸಲು ‘ಮಾರಾಟಗಾರರ ಪರವಾನಗಿ’ ಜಾರಿಗೆ ಆಗ್ರಹ

ವಿಶ್ವ ಆರೋಗ್ಯ ದಿನದ (ಏಪ್ರಿಲ್ 7) ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಮಕ್ಕಳ ಹಕ್ಕುಗಳ ಪ್ರತಿಪಾದಕರು ಕರ್ನಾಟಕ ಸರ್ಕಾರವು ತಂಬಾಕು ವ್ಯಸನದಿಂದ ಮಕ್ಕಳನ್ನು ರಕ್ಷಿಸಲು ಮತ್ತು ತಂಬಾಕು ಮುಕ್ತ ಪೀಳಿಗೆ’ಯನ್ನು ನಿರ್ಮಿಸುವ ಮೂಲಕ ಅವರ ಭವಿಷ್ಯವನ್ನು ಭದ್ರಪಡಿಸಲು ಮಾರಾಟಗಾರರ ಪರವಾನಗಿಯನ್ನು ಪರಿಚಯಿಸಬೇಕು ಎಂದು ಒತ್ತಾಯಿಸಿದ್ದಾರೆ.

Published: 07th April 2022 06:58 PM  |   Last Updated: 07th April 2022 06:58 PM   |  A+A-


public health and child rights advocates

ಸಾರ್ವಜನಿಕ ಆರೋಗ್ಯ ಮತ್ತು ಮಕ್ಕಳ ಹಕ್ಕುಗಳ ಪ್ರತಿಪಾದಕರ ಸುದ್ದಿಗೋಷ್ಠಿ

Online Desk

ಬೆಂಗಳೂರು: ವಿಶ್ವ ಆರೋಗ್ಯ ದಿನದ (ಏಪ್ರಿಲ್ 7) ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಮಕ್ಕಳ ಹಕ್ಕುಗಳ ಪ್ರತಿಪಾದಕರು ಕರ್ನಾಟಕ ಸರ್ಕಾರವು ತಂಬಾಕು ವ್ಯಸನದಿಂದ ಮಕ್ಕಳನ್ನು ರಕ್ಷಿಸಲು ಮತ್ತು ತಂಬಾಕು ಮುಕ್ತ ಪೀಳಿಗೆ’ಯನ್ನು ನಿರ್ಮಿಸುವ ಮೂಲಕ ಅವರ ಭವಿಷ್ಯವನ್ನು ಭದ್ರಪಡಿಸಲು ಮಾರಾಟಗಾರರ ಪರವಾನಗಿಯನ್ನು ಪರಿಚಯಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಂಬಾಕು ಉತ್ಪನ್ನಗಳ ಮಾರಾಟಕ್ಕಾಗಿ 2013ರಲ್ಲಿ ಮಾರಾಟಗಾರರ ಪರವಾನಗಿಯನ್ನು ಪರಿಚಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದನಂತರ ಭಾರತದಲ್ಲಿ ಅದನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದ ಕರ್ನಾಟಕವು ಮೊದಲ ರಾಜ್ಯವಾಗಿದೆ ಎಂದು ಹೇಳಿದ ತಂಬಾಕು ಮುಕ್ತ ಕರ್ನಾಟಕ ವೇದಿಕೆಯ ಪ್ರತಿನಿಧಿಗಳು, ಭಾರತೀಯ ವೈದ್ಯಕೀಯ ಸಂಘ-ಕರ್ನಾಟಕ ಮತ್ತು ಖಾಸಗಿ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‍ಮೆಂಟ್ ಪ್ರತಿನಿಧಿಗಳು ಇದು ಇನ್ನೂ ಸಾಕಾರಗೊಂಡಿಲ್ಲ ಎಂದು ಹೇಳಿದ್ದಾರೆ. ಮಾರಾಟಗಾರರ ಪರವಾನಗಿ ಇಲ್ಲದ ಕಾರಣ ಮಕ್ಕಳು ತಂಬಾಕು ಕಂಪನಿಗಳ ಅಗ್ಗದ ಮಾರುಕಟ್ಟೆ ತಂತ್ರಕ್ಕೆ ಬಲಿಯಾಗುತ್ತಿದ್ದಾರೆ ಮತ್ತು ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿದ್ದಾರೆ.

ತಂಬಾಕು ಉತ್ಪನ್ನಗಳಾದ ಸಿಗರೇಟ್, ಬೀಡಿ ಮತ್ತು ಜಗಿಯುವ ತಂಬಾಕುಗಳನ್ನು ಮಾರಾಟ ಮಾಡಲು ಬಯಸುವ ಮಾರಾಟಗಾರರು ತಮ್ಮ ನಗರ ಸ್ಥಳೀಯ ಸಂಸ್ಥೆಗಳಿಂದ ‘ವಿಶೇಷ ಪರವಾನಗಿ' ಪಡೆಯಬೇಕು. ಇದು ಒಂದು ಕಡೆ ಸಾಮಾನ್ಯ ವಿದ್ಯಮಾನವಾಗಿರುವ ತಂಬಾಕು ಮಾರಾಟಗಾರರಿಂದ ಉಲ್ಲಂಘನೆಗಳನ್ನು ಪರಿಶೀಲಿಸಲು ಯುಎಲ್‍ಬಿಗಳಿಗೆ ಸಹಾಯ ಮಾಡುತ್ತದೆ ಮತ್ತು ಮತ್ತೊಂದೆಡೆ ಪರವಾನಗಿಗಳನ್ನು ನೀಡಲು ನಾಮಮಾತ್ರವಾಗಿ ಅತ್ಯಲ್ಪ ಶುಲ್ಕ ವಿಧಿಸುವ ಮೂಲಕ ಯುಎಲ್‍ಬಿಗಳು ತಮ್ಮ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

“ಸರ್ಕಾರವು 8ನೇ ಡಿಸೆಂಬರ್ 2020 ರಂದು ಸಾರ್ವಜನಿಕರಿಂದ 30 ದಿನಗಳಲ್ಲಿ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಆಹ್ವಾನಿಸಿ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಅಧಿಸೂಚನೆಯ ಪರ ಮತ್ತು ವಿರೋಧವಾಗಿ ಸರ್ಕಾರಕ್ಕೆ ಸಾವಿರಾರು ಪತ್ರಗಳು ಬಂದಿದ್ದವು. ಈ ಎಲ್ಲಾ ಪತ್ರಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರ, ಸರ್ಕಾರವು ಮಾರಾಟಗಾರರ ಪರವಾನಗಿಯ ಪ್ರಾಮುಖ್ಯತೆ ಮತ್ತು ಇದು ಮಕ್ಕಳು ಮತ್ತು ಯುವಕರನ್ನು ತಂಬಾಕು ಮತ್ತು ವ್ಯಸನಕ್ಕೆ ಪ್ರಾರಂಭಿಸುವುದರಿಂದ ಹೇಗೆ ರಕ್ಷಿಸುತ್ತದೆ ಎಂಬುದನ್ನು ಅರಿಯಿತು. ಆದರೆ, ಒಂದು ವರ್ಷಕ್ಕಿಂತ ಹೆಚ್ಚು ಕಳೆದಿದೆ ಮತ್ತು ಸರ್ಕಾರವು ಅಂತಿಮ ಅಧಿಸೂಚನೆಯನ್ನು ಇನ್ನೂ ಹೊರಡಿಸಿಲ್ಲ’’ ಎಂದು ಖ್ಯಾತ ಕ್ಯಾನ್ಸರ್ ತಜ್ಞ ಮತ್ತು ತಂಬಾಕು ಮುಕ್ತ ಕರ್ನಾಟಕ ವೇದಿಕೆ ಅಧ್ಯಕ್ಷ ಡಾ ರಮೇಶ್ ಬಿಳಿಮಗ್ಗ ಹೇಳಿದರು.

“ಕರ್ನಾಟಕ ಸರ್ಕಾರವು ತಕ್ಷಣವೇ ಮಾರಾಟಗಾರರ ಪರವಾನಗಿಯನ್ನು ಜಾರಿಗೊಳಿಸಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಂಬಾಕು ಲಭ್ಯವಾಗದಂತೆ ಮಾಡಿ ತಂಬಾಕು ಮುಕ್ತ ಪೀಳಿಗೆಯನ್ನು ನಿರ್ಮಿಸಲು ದಾರಿ ಮಾಡಿಕೊಡಬೇಕು. ಅವರು ಕಾನೂನುಬದ್ಧ ವಯಸ್ಸನ್ನು ತಲುಪಿದಾಗ, ಅವರು ತಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲದ ವಿಷಯಗಳನ್ನು ತಪ್ಪಿಸಲು ತರ್ಕಬದ್ಧ ಚಿಂತನೆಯನ್ನು  ಬೆಳೆಸಿಕೊಳ್ಳುತ್ತಾರೆ”, ಎಂದು ಡಾ. ರಮೇಶ್ ಹೇಳಿದರು.

ಕೋಟ್‍ಪಾ ಅಡಿಯಲ್ಲಿ ನಿಯಂತ್ರಕ ಕಾರ್ಯವಿಧಾನದ ಹೊರತಾಗಿಯೂ ಪೆಟ್ಟಿ ಶಾಪ್‍ಗಳು, ಬೀಡಾ ಅಂಗಡಿಗಳು, ಚಿಲ್ಲರೆ ಅಂಗಡಿಗಳು, ಬೇಕರಿಗಳು, ಟೀ ಅಂಗಡಿಗಳು, ಹಾಲಿನ ಬೂತ್‍ಗಳು ಮತ್ತು ಪ್ರಾವಿಷನ್ ಸ್ಟೋರ್‍ಗಳು ಅಪ್ರಾಪ್ತ ವಯಸ್ಕರಿಗೆ ಸಿಗರೇಟ್, ಬೀಡಿ ಮತ್ತು ಜಗಿಯುವ ತಂಬಾಕು ಮುಂತಾದ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ತಂಬಾಕು ಉದ್ಯಮವು ತನ್ನ ಉತ್ಪನ್ನಗಳನ್ನು ಮಾರಾಟದ ಹಂತದಲ್ಲಿ (ಪಿಒಎಸ್) ಪ್ರಕಾಶಿತ ಜಾಹೀರಾತು ಫಲಕಗಳು ಮತ್ತು ಪೋಸ್ಟರ್‍ಗಳೊಂದಿಗೆ ಕಾನೂನುಬಾಹಿರವಾಗಿ ಜಾಹೀರಾತು ಮಾಡುತ್ತಿದೆ. ಪಿಒಎಸ್‍ನಲ್ಲಿ, ತಂಬಾಕು ಉತ್ಪನ್ನಗಳನ್ನು ಮಕ್ಕಳು ಇಷ್ಟಪಡುವ ಬಿಸ್ಕತ್ತುಗಳು, ಮಿಠಾಯಿಗಳು, ಚಿಪ್ಸ್, ತಿಂಡಿಗಳು ಮುಂತಾದ ಸಾಮಾನ್ಯ ತಿನಿಸುಗಳ ಪಕ್ಕದಲ್ಲಿ ಇರಿಸಲಾಗುತ್ತದೆ. ಇದು ತಂಬಾಕು ಕಂಪನಿಗಳು ಮಕ್ಕಳನ್ನು ಆಕರ್ಷಿಸಲು ಬಳಸುವ ತಂತ್ರವಾಗಿದೆ. ಜಾಗತಿಕ ಯುವ ತಂಬಾಕು ಸಮೀಕ್ಷೆ (ಜಿವೈಟಿಎಸ್‌) ಪ್ರಕಾರ ಭಾರತದಲ್ಲಿ ಶೇಕಡಾ 14.6 ಕ್ಕಿಂತ ಹೆಚ್ಚು ಯುವಕರು (13-15 ವರ್ಷ ವಯಸ್ಸಿನವರು) ಯಾವುದಾದರೊಂದು ರೀತಿಯ ತಂಬಾಕನ್ನು ಬಳಸುತ್ತಾರೆ.

ರಾಜ್ಯ ಅಬಕಾರಿ ಇಲಾಖೆಯ ಪರವಾನಗಿ ಮೂಲಕ ಮದ್ಯ ಮಾರಾಟವನ್ನು ನಿಯಂತ್ರಿಸಿದರೆ, ಮದ್ಯಕ್ಕಿಂತ ಹೆಚ್ಚು ಮಾರಕವೆಂದು ಪರಿಗಣಿಸಲಾದ ತಂಬಾಕನ್ನು ಯಾವುದೇ ನಿರ್ಬಂಧವಿಲ್ಲದೆ ಮಾರಾಟ ಮಾಡಲಾಗುತ್ತದೆ. ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ತನ್ನ ಸೂಚನೆಯಂತೆ - - DO No. P – 16012 /14 /2017 –ಖಿಅ ದಿನಾಂಕ 21 ಸೆಪ್ಟೆಂಬರ್ 2017 ರಂದು ತಂಬಾಕು ಉತ್ಪನ್ನಗಳ ಮಾರಾಟವನ್ನು ಸರಿಯಾದ ಅಧಿಕಾರ ಮತ್ತು ತಂಬಾಕು ಮಾರಾಟಗಾರರ ನೋಂದಣಿ ಮೂಲಕ ನಿಯಂತ್ರಿಸಲು ಎಲ್ಲಾ ರಾಜ್ಯಗಳನ್ನು ಕೇಳಿದೆ ಎಂದು ಗಮನಿಸಬೇಕು.

ಭಾರತೀಯ ಮೆಡಿಕಲ್ ಕೌನ್ಸಿಲ್ -ಕರ್ನಾಟಕದ ಕಾರ್ಯದರ್ಶಿ ಡಾ ಪ್ರಸಾದ್ ಎಸ್ ಎಂ ಮಾತನಾಡಿ, ‘‘ಮಕ್ಕಳು ತಂಬಾಕು ಉದ್ಯಮದ ಪ್ರಮುಖ ಗುರಿಯಾಗಿದ್ದಾರೆ. ಸೆಲೆಬ್ರಿಟಿಗಳ ಅನುಮೋದನೆಗಳು, ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಆಕರ್ಷಕ ಪ್ರದರ್ಶನ, ಮಕ್ಕಳಿಗೆ ಕಾಣುವಂತೆ ತಂಬಾಕು ಉತ್ಪನ್ನಗಳನ್ನು ಪ್ರದರ್ಶಿಸುವುದು ಮತ್ತು ಆಟಿಕೆಗಳು, ಸಿಹಿತಿಂಡಿಗಳು, ಸೋಡಾ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‍ಗಳನ್ನು ಮಾರಾಟ ಮಾಡುವ ಅಂಗಡಿಗಳ ಬಳಿ ಅವರು ಅಗ್ಗದ ತಂತ್ರಗಳನ್ನು ಆಶ್ರಯಿಸುತ್ತಾರೆ. ವ್ಯಸನಕಾರಿ ಸ್ವಭಾವದಿಂದಾಗಿ (ನಿಕೋಟಿನ್ ಸೇರಿ ತಂಬಾಕು ಒಳಗೊಂಡಿರುವ 7000 ವಿಷಕಾರಿ ಪದಾರ್ಥಗಳು) ಮಕ್ಕಳು ಬಯಸಿದರೂ ಅಭ್ಯಾಸವನ್ನು ಬಿಡಲು ವಿಫಲರಾಗುತ್ತಾರೆ. ಹದಿಹರೆಯದವರು ತಂಬಾಕು ಸೇವನೆ ಆರಂಭಿಸಿ ಮತ್ತು ಅದಕ್ಕೆ ಸಂಬಂಧಿಸಿದ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿರುವ ಅನೇಕ ತಂಬಾಕು ವ್ಯಸನಿಗಳನ್ನು ನಾವು ನೋಡುತ್ತೇವೆ. ಭಾರತೀಯ ವೈದ್ಯಕೀಯ ವೇದಿಕೆ ಕರ್ನಾಟಕ ಸರ್ಕಾರವನ್ನು ಶೀಘ್ರವಾಗಿ ಮಾರಾಟಗಾರರ ಪರವಾನಗಿಯನ್ನು ಜಾರಿಗೊಳಿಸಲು ಒತ್ತಾಯಿಸುತ್ತದೆ”, ಎಂದು ಹೇಳಿದರು.

ಕರ್ನಾಟಕದಲ್ಲಿ ಖಾಸಗಿ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‍ಮೆಂಟ್ (ಕೆಎಎಂಎಸ್) ಪ್ರಧಾನ ಕಾರ್ಯದರ್ಶಿ ಶ್ರೀ ಶಶಿಕುಮಾರ್ ಮಾತನಾಡಿ, “ಮಕ್ಕಳಿಗೆ ಬಿಡಿಯಾಗಿ ಸಿಗರೇಟ್ ಮತ್ತು ಬೀಡಿಗಳನ್ನು ಮಾರಾಟ ಮಾಡುವ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆದಾಗ್ಯೂ, ಪ್ರಸ್ತುತ ವ್ಯವಸ್ಥೆಯಲ್ಲಿ, ಮಾರಾಟಗಾರರು (ವಿಶೇಷವಾಗಿ ಶಿಕ್ಷಣ ಸಂಸ್ಥೆಗಳ ಸುತ್ತ) ನಿಯಮಗಳನ್ನು ಉಲ್ಲಂಘಿಸಿ ಮತ್ತು ಸಣ್ಣ ದಂಡದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಮಾರಾಟಗಾರರ ಪರವಾನಗಿ ಮೂಲಕ ತಂಬಾಕು ಮಾರಾಟವನ್ನು ಸುವ್ಯವಸ್ಥಿತಗೊಳಿಸಿದರೆ, ಪರವಾನಗಿ ಕಳೆದುಕೊಳ್ಳುವ ಭಯದಿಂದ ಮಾರಾಟಗಾರರು ಕಾನೂನಿಗೆ ಕಟ್ಟುನಿಟ್ಟಾಗಿ ಬದ್ಧರಾಗುತ್ತಾರೆ’’, ಎಂದು ಹೇಳಿದರು.

ಈಗಾಗಲೇ ಹಿಮಾಚಲ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಮಾರಾಟಗಾರರ ಪರವಾನಗಿಯನ್ನು ಜಾರಿಗೆ ತರುವ ಮೂಲಕ ಮಾದರಿಯಾಗಿವೆ.

ತಂಬಾಕು ಮುಕ್ತ ಕರ್ನಾಟಕ ವೇದಿಕೆ ಬಗ್ಗೆ (CFTKF):
ತಂಬಾಕು ಮುಕ್ತ ಕರ್ನಾಟಕ ವೇದಿಕೆ 2001 ರಿಂದ ತಂಬಾಕು ಮುಕ್ತ ಕರ್ನಾಟಕಕ್ಕಾಗಿ ಶ್ರಮಿಸುತ್ತಿರುವ ವ್ಯಕ್ತಿಗಳು, ಸಾರ್ವಜನಿಕ ಆರೋಗ್ಯ ಸಮರ್ಥಕರು, ಆರೋಗ್ಯ ರಕ್ಷಣಾ ಸಂಘಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ಒಂದು ಒಕ್ಕೂಟವಾಗಿದೆ. ವಿಶೇಷವಾಗಿ ತಂಬಾಕು ಸೇವನೆಯ ಪ್ರವೃತ್ತಿಗಳು ಮಕ್ಕಳಲ್ಲಿ ಮತ್ತು ಕೃಷಿ ಸಮಾಜದ ಆರೋಗ್ಯ ಮತ್ತು ಅಭಿವೃದ್ಧಿಗೆ ಅಪಾಯವನ್ನುಂಟುಮಾಡುತ್ತದೆ. ವರ್ಷವಿಡೀ ತಂಬಾಕು ನಿಯಂತ್ರಣ ಚಟುವಟಿಕೆಗಳನ್ನು ಕಾಯ್ದುಕೊಳ್ಳಲು ಸಿಎಫ್‍ಟಿಎಫ್‍ಕೆ ಅನ್ನು ರಚಿಸಲಾಗಿದೆ. ನಾವು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಮತ್ತು ಕಾಲಕಾಲಕ್ಕೆ ತಂಬಾಕು ಪೂರೈಕೆಯಲ್ಲಿನ ಪ್ರವೃತ್ತಿಯನ್ನು ಪರಿಶೀಲಿಸಲು ನೀತಿ ನಿರೂಪಕರಿಗೆ ಜ್ಞಾಪಕ ಪತ್ರಗಳನ್ನು ಸಲ್ಲಿಸುತ್ತಿದ್ದೇವೆ. ಬೆಂಗಳೂರಿನ ವಿವಿಧ ಶಾಲಾ-ಕಾಲೇಜುಗಳನ್ನು ಒಟ್ಟುಗೂಡಿಸಿ ತಂಬಾಕು ವಿರುದ್ಧ ವಿದ್ಯಾರ್ಥಿ ಉಪಕ್ರಮವನ್ನು ರಚಿಸಲಾಗಿದೆ. ಭವಿಷ್ಯದ ಪೀಳಿಗೆಯನ್ನು ತಂಬಾಕು ಉದ್ಯಮದ ತಂತ್ರಗಳಿಗೆ ಬಲಿಯಾಗದಂತೆ ರಕ್ಷಿಸಲು ಮತ್ತು ಧೂಮಪಾನಿಗಳಲ್ಲದವರ ಆರೋಗ್ಯವನ್ನು ಕಾಪಾಡಲು, ಅಸ್ತಿತ್ವದಲ್ಲಿರುವ ತಂಬಾಕು ನಿಯಂತ್ರಣ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ಹೊಸ ಶಾಸನವನ್ನು ರೂಪಿಸಲು ನಾವು ನಿರಂತರವಾಗಿ ಸರ್ಕಾರದೊಂದಿಗೆ ತೊಡಗಿಸಿಕೊಂಡಿದ್ದೇವೆ.
 


Stay up to date on all the latest ರಾಜ್ಯ news
Poll
CM Basavaraja Bommai is press meet

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಕಾಲ ಸನ್ನಿಹಿತ ಎಂಬ ಭಾವನೆ ಇದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp