ಹುಲಿ ಕಂಡ ಪ್ರದೇಶಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ: ಕ್ರಮಕ್ಕೆ ಕಾರ್ಯಕರ್ತರ ಆಗ್ರಹ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾದ ಮಾಹಿತಿ ಪ್ರಚಾರ ಪಡೆದುಕೊಳ್ಳುವುದು ಹೊಸತೇನು ಅಲ್ಲ. ಆದರೆ ಈಗ ಅದೇ ಸಮಸ್ಯೆ ವನ್ಯಜೀವಿಗಳು ಕಾಣಿಸಿಕೊಳ್ಳುವ ಪ್ರದೇಶಗಳ ಕುರಿತಾದ ಮಾಹಿತಿಗೂ ಹರಡಲು ಪ್ರಾರಂಭವಾಗಿದೆ.
Published: 07th April 2022 04:02 AM | Last Updated: 07th April 2022 01:36 PM | A+A A-

ವಿಡಿಯೋದಲ್ಲಿ ಸೆರೆಯಾದ ಹುಲಿ
ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾದ ಮಾಹಿತಿ ಪ್ರಚಾರ ಪಡೆದುಕೊಳ್ಳುವುದು ಹೊಸತೇನು ಅಲ್ಲ. ಆದರೆ ಈಗ ಅದೇ ಸಮಸ್ಯೆ ವನ್ಯಜೀವಿಗಳು ಕಾಣಿಸಿಕೊಳ್ಳುವ ಪ್ರದೇಶಗಳದ ಮಾಹಿತಿಗೂ ಹರಡಲು ಪ್ರಾರಂಭವಾಗಿದೆ.
ಮಧ್ಯಪ್ರದೇಶದ ಪೆಂಚ್ ಟೈಗರ್ ರಿಸರ್ವ್ ನಲ್ಲಿ ಹುಲಿಯೊಂದು ರಸ್ತೆ ದಾಟುತ್ತಿದ್ದ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಈ ಕುರಿತ ತಪ್ಪಾದ ಮಾಹಿತಿ ಈಗ ಕರ್ನಾಟಕ ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಇದೇ ವಿಡಿಯೋವನ್ನು ಮೊದಲು ಸಾಮಜಿಕ ಜಾಲತಾಣಗಳ ಗುಂಪುಗಳಲ್ಲಿ ಈ ಹುಲಿ ಕಂಡಿದ್ದು ದಾಂಡೆಲಿ-ಖಾನಾಪುರ ರಸ್ತೆಯಲ್ಲಿ ಎಂದು ಹೇಳಿ ವೈರಲ್ ಮಾಡಲಾಗಿತ್ತು. ಹುಲಿ ಮತ್ತು ರಸ್ತೆಯನ್ನು ಮೆಚ್ಚಿ ಹಲವು ಜನರು ಅದನ್ನು ಹಂಚಿಕೊಂಡಿದ್ದರು. ಆದರೆ ಆ ಬಳಿಕ ವಿವರಗಳನ್ನು ಪರಿಶೀಲಿಸಿದಾಗ ತಿಳಿದುಬಂದಿದ್ದೇನೆಂದರೆ ವಿಡಿಯೋದಲ್ಲಿರುವ ರಸ್ತೆಯನ್ನು ವಿಡಿಯೋಗೆ ಸೇರಿಸಲಾಗಿದೆ. ಮೂಲ ವಿಡಿಯೋದಲ್ಲಿ ಅದು ಇಲ್ಲ ಎಂಬುದು ವಿಷಯವಾಗಿತ್ತು.
ಇಂಥಹ ಅನೇಕ ಹುಲಿಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಪ್ರದೇಶ, ಸ್ಥಗಳ ಬಗ್ಗೆ ತಪ್ಪು ಮಾಹಿತಿ ನೀಡಿ ಹಂಚಲಾಗುತ್ತಿದೆ.
ಕೆಲವು ತಿಂಗಳ ಹಿಂದೆ ಉತ್ತರ ಭಾರತದ ಮೂಲದ ಚಿಕ್ಕಮಗಳೂರಿನಲ್ಲಿ ಹೋಮ್ ಸ್ಟೇಯ ಮಾಲಿಕನೋರ್ವ ತನಗೆ ಸೇರಿದ ಪ್ರದೇಶದಲ್ಲಿ ಈ ದೃಶ್ಯಗಳು ಸೆರೆಯಾಗಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ. ಈ ವಿಷಯವಾಗಿ ಸ್ಥಳೀಯ ಅಧಿಕಾರಿಗಳು ಹಾಗೂ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರು ಆತನನ್ನು ವಿಚಾರಣೆಗೆ ಕರೆಸಿದ ಬಳಿಕ ಆ ಪೋಸ್ಟ್ ನ್ನು ಆತ ಡಿಲೀಟ್ ಮಾಡಿದ್ದ.
ವನ್ಯಜೀವಿಗಳ ವಿಡಿಯೋಗಳೊಂದಿಗೆ ತಪ್ಪು ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ. ಅದು ಹುಲಿಯೇ ಇರಲಿ, ಆನೆ, ಹಾವು ರಕ್ಷಣೆ ಏನೇ ಇರಲಿ. ಇದಕ್ಕೆ ಸಂಬಂಧಿಸಿದ ಹಲವು ವಿಷಯಗಳು ತಪ್ಪಾದ ಮಾಹಿತಿಯನ್ನು ಹೊಂದಿರುವ ವಿಡಿಯೋಗಳಾಗಿರುತ್ತವೆ. ಅರಣ್ಯ ಇಲಾಖೆ ವಾಸ್ತವಾಂಶ ತಿಳಿಸುವ ತಂಡವನ್ನು ರಚಿಸಬೇಕು, ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡದಂತೆ ಎಚ್ಚರ ವಹಿಸಬೇಕು" ಎಂದು ವನ್ಯಜೀವಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.