ಗೋಮಾಂಸ ನಿಷೇಧ ನಂತರ ಹಲಾಲ್ ಕಟ್ ಮಾಂಸ ನಿಷೇಧದಿಂದ ರೈತರಿಗೆ ಮತ್ತಷ್ಟು ಸಂಕಷ್ಟ: ತಜ್ಞರ ಅಭಿಮತ
ಹಲಾಲ್ ಕಟ್ ಮಾಂಸವನ್ನು ಸೇವಿಸಬೇಡಿ, ನಿಷೇಧ ಮಾಡಿ ಎಂದು ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿರುವುದು ಗೋ ಮಾಂಸ ಸೇವನೆ ನಿಷೇಧ ಮಾಡಿದ್ದಕ್ಕೆ ಉಂಟಾದ ಪರಿಸ್ಥಿತಿಯಂತೆ ಮತ್ತೊಂದು ಸನ್ನಿವೇಶ ಎದುರಾಗುತ್ತದೆ.
Published: 08th April 2022 09:28 AM | Last Updated: 08th April 2022 01:40 PM | A+A A-

ಹಲಾಲ್ ಕಟ್
ಬೆಂಗಳೂರು: ಹಲಾಲ್ ಕಟ್ ಮಾಂಸವನ್ನು ಸೇವಿಸಬೇಡಿ, ನಿಷೇಧ ಮಾಡಿ ಎಂದು ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿರುವುದು ಗೋ ಮಾಂಸ ಸೇವನೆ ನಿಷೇಧ ಮಾಡಿದ್ದಕ್ಕೆ ಉಂಟಾದ ಪರಿಸ್ಥಿತಿಯಂತೆ ಮತ್ತೊಂದು ಸನ್ನಿವೇಶ ಎದುರಾಗುತ್ತದೆ.
ಹಲಾಲ್ ಕಟ್ ಮಾಂಸಕ್ಕೆ ನಿಷೇಧ ಹೇರಿದರೆ ರೈತರ ಮೇಲೆ ತೀವ್ರ ಹೊಡೆತ ಬೀಳಲಿದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಸಾರ್ವಜನಿಕ ಆರೋಗ್ಯ ಸಂಶೋಧಕ ಡಾ ಸಿಲ್ವಿಯಾ ಕರ್ಪಗಮ್ ಅವರು ಕರ್ನಾಟಕದಲ್ಲಿ ಗೋ ಮಾಂಸ ನಿಷೇಧ ಬಗ್ಗೆ ಇತ್ತೀಚೆಗೆ ವರದಿಯೊಂದನ್ನು ಬಿಡುಗಡೆ ಮಾಡಿದ್ದರು. ಜಾನುವಾರು ಸಾಕಣೆದಾರರು ಸಂಕಷ್ಟದಲ್ಲಿದ್ದಾರೆ. ಅವರು ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ಇತರ ರೈತರಿಂದ ಜಾನುವಾರುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಲ್ಲಿ ವಿವರಿಸಿದ್ದಾರೆ.
ಮೇಕೆ, ಕುರಿ ಮತ್ತು ಕೋಳಿ ಸಾಕಣೆದಾರರಿಗೆ ದೊಡ್ಡ ಭಯವೆಂದರೆ ದೊಡ್ಡ ದೊಡ್ಡ ಸಂಸ್ಥೆಗಳ ಒಳಗೊಳ್ಳುವಿಕೆ ಮತ್ತು ಮಧ್ಯವರ್ತಿಗಳ ಪ್ರವೇಶ. ಸ್ಥಳೀಯ ವ್ಯಾಪಾರಿಗಳು ಪ್ರಾಣಿಗಳನ್ನು ಖರೀದಿಸುತ್ತಾರೆ, ಆದರೆ ಮಧ್ಯವರ್ತಿಗಳು ಎಲ್ಲಾ ಲಾಭಗಳನ್ನು ದೋಚುವ ಸಾಧ್ಯತೆಯಿದೆ ಎಂದು ಸಿಲ್ವಿಯಾ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡುತ್ತಾ ಹೇಳುತ್ತಾರೆ.
ಮೇಕೆ ಮತ್ತು ಕುರಿ ವ್ಯಾಪಾರದಲ್ಲಿ, ಸಾಗಾಣಿಕೆ ಮತ್ತು ಕಸಾಯಿಖಾನೆ ಸೇರಿದಂತೆ ಪೂರೈಕೆ ಸರಪಳಿಯಲ್ಲಿ ಒಳಗೊಂಡಿರುವವರು ಬಹುಪಾಲು ಮುಸ್ಲಿಮರು ಎನ್ನುತ್ತಾರೆ ಗ್ರಾಮೀಣ ಪ್ರದೇಶದ ರೈತರಿಗೆ ತರಬೇತಿ ನೀಡಲು ಸ್ವಯಂಸೇವಕರಾಗಿ ಪಶುವೈದ್ಯಕೀಯ ವೈದ್ಯೆ ಮತ್ತು ಕರ್ನಾಟಕ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ (AWAKE) ಡಾ ರಾಜೇಶ್ವರಿ ಶಂಕರ್.
ಇದನ್ನೂ ಓದಿ: ಹಲಾಲ್ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ, ಅನಗತ್ಯ ವಿಚಾರಕ್ಕೆ ಸಮಾಜದಲ್ಲಿ ಅಶಾಂತಿ ಸೃಷ್ಟಿ: ಸಿದ್ದರಾಮಯ್ಯ
ಹಲಾಲ್ ಕಟ್ ಮಾಂಸಕ್ಕೆ ಬಹಿಷ್ಕಾರ ಹಾಕಿದರೆ ರೈತರಿಗೆ ಹಾನಿಯಾಗುವುದು ಖಂಡಿತ. ವ್ಯಾಪಾರಿಗಳು ಮುಸ್ಲಿಂ ವ್ಯಾಪಾರಿಗಳಿಂದ ಖರೀದಿಸದಿರಲು ನಿರ್ಧರಿಸುತ್ತಾರೆ.. ಮುಸ್ಲಿಂ ಸಮುದಾಯದಿಂದ ಮಾಂಸಗಳ ಪೂರೈಕೆ ಸರಪಳಿಯಲ್ಲಿ ತೊಡಗಿಸಿಕೊಂಡಿರುವ ಹೆಚ್ಚಿನವರೊಂದಿಗೆ, ಮಾಂಸದ ವ್ಯಾಪಾರಕ್ಕೆ ನಿರ್ಬಂಧ ಹೇರುವುದರಿಂದ ಮಾಂಸ ಮಾರಾಟ ಮೇಲೆ ವ್ಯತ್ಯಯವುಂಟಾಗಿ ಅಂತಿಮವಾಗಿ ರೈತರ ಮೇಲೆ ಹೊಡೆತ ಬೀಳುತ್ತದೆ ಎನ್ನುತ್ತಾರೆ.
ಬಹುಪಾಲು ರೈತರು ಕಾರ್ಮಿಕ ವರ್ಗ ಮತ್ತು ಸಾಮಾನ್ಯವಾಗಿ ಅಲೆಮಾರಿ, ಭೂರಹಿತ ಅಥವಾ ಸಣ್ಣ ಹಿಡುವಳಿದಾರರಾಗಿದ್ದಾರೆ. ಹೆಚ್ಚಿನ ರೈತರು ಜಾನುವಾರು, ಕುರಿ, ಮೇಕೆ ಮತ್ತು ಕೋಳಿ ವ್ಯಾಪಾರದಲ್ಲಿ ಭಾಗಿಯಾಗುತ್ತಾರೆ, ಆದರೆ ಮೇಕೆ ಮತ್ತು ಕುರಿ ಸಾಕಣೆಯಲ್ಲಿ ತೊಡಗಿಸಿಕೊಂಡಿರುವ ಕೆಲವರು ಬಡ ಹಿನ್ನೆಲೆಯಿಂದ ಬಂದ ಋತುಮಾನ ರೈತರಾಗಿದ್ದಾರೆ ಎನ್ನುತ್ತಾರೆ ಡಾ ರಾಜೇಶ್ವರಿ.