ಕೋಲಾರ: ಶ್ರೀರಾಮ ಶೋಭಾಯಾತ್ರೆ ವೇಳೆ ದುಷ್ಕರ್ಮಿಗಳಿಂದ ಕಲ್ಲುತೂರಾಟ; ಬೈಕ್ ಗೆ ಬೆಂಕಿ, ಲಘು ಲಾಠಿ ಪ್ರಹಾರ!
ಮುಳಬಾಗಿಲು ಪಟ್ಟಣದಲ್ಲಿ ಶ್ರೀರಾಮನವಮಿ ಅಂಗವಾಗಿ ಬೃಹತ್ ಶೋಭಾಯಾತ್ರೆಯನ್ನು ಆಯೋಜಿಸಲಾಗಿದ್ದು ಈ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
Published: 08th April 2022 11:32 PM | Last Updated: 08th April 2022 11:32 PM | A+A A-

ಶ್ರೀರಾಮ ಶೋಭಯಾತ್ರೆ
ಕೋಲಾರ: ಮುಳಬಾಗಿಲು ಪಟ್ಟಣದಲ್ಲಿ ಶ್ರೀರಾಮನವಮಿ ಅಂಗವಾಗಿ ಬೃಹತ್ ಶೋಭಾಯಾತ್ರೆಯನ್ನು ಆಯೋಜಿಸಲಾಗಿದ್ದು ಈ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಮುಳಬಾಗಿಲಿನ ಜಹಾಂಗೀರ್ ಮೊಹಲ್ಲಾ ಬಳಿ ಶೋಭಾಯಾತ್ರೆ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇನ್ನು ಉದ್ರಿಕ್ತರು ಬೈಕ್ ಗೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಇಂದು ಹಿಂದೂ ಶೋಭಾಯಾತ್ರೆ ಹಾಗೂ ಬೃಹತ್ ಶ್ರೀರಾಮನ ಮೂರ್ತಿಯ ಮೆರವಣಿಗೆ ಕಾರ್ಯಕ್ರಮ ನಡೆದಿದ್ದು ಕಾರ್ಯಕ್ರಮದಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.
ಕಲ್ಲುತೂರಾಟದಿಂದ 5-6 ಕಾರುಗಳು ಜಖಂಗೊಂಡಿದೆ. ಕಲ್ಲುತೂರಾಟ ಸಂಬಂಧ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ಕೋಲಾರ ಎಸ್ಪಿ ದೇವರಾಜ್ ಹೇಳಿದ್ದಾರೆ.