
ಸಿಸಿ ಪಾಟೀಲ್
ಗದಗ: ಮೂರು ವರ್ಷಗಳ ನಂತರ ಜಿಲ್ಲೆಯಲ್ಲಿ ಮತ್ತೆ ಲಕ್ಕುಂಡಿ ಉತ್ಸವ ಆಯೋಜಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ.
2019 ರ ನಂತರ ತೀವ್ರ ಬರಗಾಲದ ಕಾರಣ ಉತ್ಸವವನ್ನು ರದ್ದುಗೊಳಿಸಿತ್ತು. ಜೊತೆಗೆ ಕೊರೊನೋ ಸಾಂಕ್ರಾಮಿಕ ರೋಗದಿಂದಾಗಿ ಉತ್ಸವವನ್ನು ನಿಲ್ಲಿಸಲಾಗಿತ್ತು.
ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಯಾವುದೇ ಹೊಸ ಪ್ರಕರಣಗಳು ವರದಿಯಾಗದ ಕಾರಣ, ಈ ವಾರ್ಷಿಕ ಕಾರ್ಯಕ್ರಮವನ್ನು ಪುನರಾರಂಭಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಉತ್ಸವ ನಡೆಸಲಾಗುವುದು ಎಂದು ಪಾಟೀಲ್ ತಿಳಿಸಿದ್ದಾರೆ.
‘ಐತಿಹಾಸಿಕ ಸ್ಥಳದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಿ, ಬರುವವರಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಿರುವುದರಿಂದ ಗ್ರಾಮಸ್ಥರು ಸಹಕಾರ ನೀಡಬೇಕು’ ಎಂದರು. “ಕಳೆದ ವರ್ಷ ಕೆಲವು ಇತಿಹಾಸ ಪ್ರೇಮಿಗಳು ಹಂಪಿಗೆ ಭೇಟಿ ನೀಡುವವರನ್ನು ಲಕ್ಕುಂಡಿಗೆ ಸೆಳೆಯಲು ಹೆದ್ದಾರಿಯನ್ನು ಗ್ರಾಮದ ಮೂಲಕ ಹಾದುಹೋಗುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಐತಿಹಾಸಿಕ ಧರ್ಮರಾಯಸ್ವಾಮಿ ಕರಗಕ್ಕೆ ಭಿಗಿ ಭದ್ರತೆ; ಹೆಚ್ಚಿನ ಅನುದಾನ
ಹುಬ್ಬಳ್ಳಿ, ಧಾರವಾಡ, ಗದಗ ಕಡೆಯಿಂದ ಹಂಪಿಗೆ ಹೋಗುವ ಹಲವರು ಬೈಪಾಸ್ ರಸ್ತೆಯು ಹಳೆಯ ಮುಖ್ಯ ರಸ್ತೆಯಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುವುದರಿಂದ ಲಕ್ಕುಂಡಿ ಬಿಟ್ಟು ಹೋಗುತ್ತಾರೆ.
ಗದಗದ ಇತಿಹಾಸ ಉಪನ್ಯಾಸಕ ದತ್ತ ಪ್ರಸನ್ನ ಪಾಟೀಲ ಮಾತನಾಡಿ, ‘ಲಕ್ಕುಂಡಿ ಅಭಿವೃದ್ಧಿಯಾಗಬೇಕಿದ್ದು, ಹುಬ್ಬಳ್ಳಿಯಿಂದ ಹೊಸಪೇಟೆ ರಸ್ತೆಗೆ ಹೋಗುವ ಪ್ರಯಾಣಿಕರು ಇಲ್ಲಿಗೆ ಭೇಟಿ ನೀಡಬೇಕು. ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಸಹ ಪ್ರಾರಂಭಿಸಲಾಗಿದೆ ಆದರೆ ಜನರನ್ನು ಆಕರ್ಷಿಸಲು ಹೆಚ್ಚಿನ ಪ್ರಯತ್ನದ ಅಗತ್ಯವಿದೆ ಎಂದು ಹೇಳಿದ್ದಾರೆ.