
ಸಾಂದರ್ಭಿಕ ಚಿತ್ರ
ಬೆಂಗಳೂರು: 60 ವರ್ಷದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಒಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಕೇವಲ 9 ನಿಮಿಷಗಳಲ್ಲಿ 3 ಲಕ್ಷ ರೂ. ಹಣ ಕಳೆದುಕೊಂಡಿರುವ ಆತಂಕಕಾರಿ ಘಟನೆ ನಡೆದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಶೀಘ್ರದಲ್ಲೇ ಸೈಬರ್ ಭದ್ರತಾ ನೀತಿ ಜಾರಿಗೆ: ಡಾ. ಸಿ.ಎನ್. ಅಶ್ವತ್ಥ ನಾರಾಯಣ
ಮೊದಲಿಗೆ ವಂಚಕ ನಿವೃತ್ತ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೊಬೈಲಿಗೆ ಸಂದೇಶವೊಂದನ್ನು ಕಳಿಸಿದ್ದ. ಆ ಸಂದೇಶದಲ್ಲಿ 'ನಿಮ್ಮ ನೆಟ್ ಬ್ಯಾಂಕಿಂಗ್ ಸವಲತ್ತನ್ನು ರದ್ದುಪಡಿಸಲಾಗಿದೆ. ಅದನ್ನು ಯಥಾಸ್ಥಿತಿಗೆ ಸರಿಪಡಿಸಲು ಕೆಳಗಿನ ಲಿಂಕ್ ಒತ್ತಿ' ಎಂದು ಬರೆಯಲಾಗಿತ್ತು.
ಇದನ್ನೂ ಓದಿ: ಡಿಜಿಟಲ್ ಪರದೆ ಹಿಂದಿನ ಡೇಂಜರ್: ಸೈಬರ್ ಜಗತ್ತಿನಲ್ಲಿ ನಾವು ಪಾಲಿಸಬೇಕಾದ 5 ಪಾಲಿಸಿಗಳು
ಸಂದೇಶ ಓದಿ ಆತಂಕಗೊಂಡ ಮಹಿಳೆ ಸಂದೇಶದಲ್ಲಿ ನೀಡಲಾಗಿದ್ದ ಲಿಂಕ್ ಅನ್ನು ಒತ್ತಿದ್ದರು. ಆ ಲಿಂಕ್ ನಲ್ಲಿ ಮಹಿಳೆಯ ಬ್ಯಾಂಕ್ ವಿವರಗಳನ್ನು ಕೇಳಲಾಗಿತ್ತು. ಅದರಂತೆ ಅಕೆ ಮಾಹಿತಿಯನ್ನು ನೀಡಿದ್ದರು. ಒಟಿಪಿ ಸಂಖ್ಯೆಯನ್ನು ಸಹ ಆಕೆ ನಮೂದಿಸಿದ್ದರು.
ಇದನ್ನೂ ಓದಿ: ಹಣಕ್ಕಾಗಿ ಮಹಿಳೆಯರ ಫೋಟೋ ಇರಿಸಿಕೊಂಡು ಬ್ಲ್ಯಾಕ್ ಮೇಲ್: ಬೆಂಗಳೂರಿನಲ್ಲಿ ವ್ಯಕ್ತಿಯ ಬಂಧನ
ಕೆಲ ಹೊತ್ತಿನ ನಂತರ ಅವರ ಬ್ಯಾಂಕ್ ಖಾತೆಯಿಂದ 3 ಲಕ್ಷ ಡ್ರಾ ಆಗಿರುವ ಸಂದೇಶ ಬಂದಿತ್ತು. ಕೂಡಲೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಯಾಗಿದ್ದುಕೊಂಡು ಅಪರಿಚಿತ ಸಂಖ್ಯೆಯಿಂದ ಬಂದ ಸಂದೇಶಕ್ಕೆ ರಿಪ್ಲೈ ಕೊಡುವುದಕ್ಕೆ ಮುಂಚೆ ಅವರು ಎಚ್ಚರ ವಹಿಸಬೇಕಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 2021ರಲ್ಲಿ 14 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿ ನಡೆದಿವೆ!