ಬಡವರಿಗೆ ಯಾವುದೇ ಧರ್ಮವಿಲ್ಲ, ನಮ್ಮನ್ನು ಗುರಿ ಮಾಡದಿರಿ: ಬಲಪಂಥೀಯರ ದಾಳಿಗೊಳಗಾದ ಮುಸ್ಲಿಂ ವ್ಯಾಪಾರಿ

ಬಡವರಿಗೆ ಯಾವುದೇ ಧರ್ಮವಿಲ್ಲ, ಬಡವರನ್ನು ಗುರಿ ಮಾಡದಿರಿ ಎಂದು ಬಲಪಂಥೀಯರ ಕೆಂಗಣ್ಣಿಗೆಗೊಳಗಾದ ಮುಸ್ಲಿಂ ವ್ಯಾಪಾರಿಗಳು ಮನವಿ ಮಾಡಿಕೊಂಡಿದ್ದಾರೆ. 

Published: 11th April 2022 10:56 AM  |   Last Updated: 11th April 2022 01:48 PM   |  A+A-


Arbaz (left), Nabisab Killedar’s grandson, at their residence in Dharwad

ನಬಿಸಾಬ್ ಅವರ ಮೊಮ್ಮಕ್ಕಳು.

The New Indian Express

ಧಾರವಾಡ: ಬಡವರಿಗೆ ಯಾವುದೇ ಧರ್ಮವಿಲ್ಲ, ಬಡವರನ್ನು ಗುರಿ ಮಾಡದಿರಿ ಎಂದು ಬಲಪಂಥೀಯರ ಕೆಂಗಣ್ಣಿಗೆಗೊಳಗಾದ ಮುಸ್ಲಿಂ ವ್ಯಾಪಾರಿಗಳು ಮನವಿ ಮಾಡಿಕೊಂಡಿದ್ದಾರೆ. 

ಧಾರವಾಡದ ರಾಜೀವ್ ಗಾಂಧಿ ನಗರದಲ್ಲಿ ಚಿಕ್ಕ ಮನೆಯಲ್ಲಿ 8 ಮಂದಿ ವಾಸವಿದ್ದು, ಕುಟುಂಬದ ಹಿರಿಯ ಸದಸ್ಯರಾಗಿರುವ ನಬಿ ಸಾಬ್ ಕಿಲ್ಲಾದಾರ್ ಅವರು, ಹಣ್ಣು ಮಾರಾಟ ಮಾಡಿ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದಾರೆ. ನಬಿಸಾಬ್ ಅವರು ಧಾರವಾಡದ ನುಗ್ಗಿಕೇರಿಯಲ್ಲಿರುವ ಹನುಮನ ದೇವಾಲಯದ ಬಳಿ ಅಂಗಡಿಯೊಂದರಲ್ಲಿ ಹಣ್ಣುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಆದರೆ, ಕೆಲ ಬಲಪಂಧೀಯ ಕಾರ್ಯಕರ್ತರು ಅಂಗಡಿಯೊಳಗೆ ನುಗ್ಗಿ ಹಣ್ಣುಗಳನ್ನು ಧ್ವಂಸ ಮಾಡಿದ್ದಾರೆ. ಅಂಗಡಿಯ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ನಬಿ ಸಾಬ್ ಅವರ ಕುಟುಂಬ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. 

ಪ್ರಸ್ತುತ ಬರುತ್ತಿರುವ ದೇಣಿಗೆಗಳು ನಮಗೆ ಸಹಾಯ ಮಾಡಲಿದೆ. ಆದರೆ, ಎಲ್ಲಿ ಬೇಕಾದರೂ ವ್ಯಾಪಾರ ಮಾಡುವ ಸ್ವಾತಂತ್ರ್ಯವನ್ನು ನಾನು ಬಯಸುತ್ತಿದ್ದೇನೆ. ನನ್ನ ಅಂಗಡಿಯನ್ನು ಧ್ವಂಸ ಮಾಡಿದವರನ್ನು ಕ್ಷಮಿಸುವಂತೆ ಹನುಮಂತನಲ್ಲಿ ಪ್ರಾರ್ಥಿಸುತ್ತೇನೆ. ಆದರೆ, ಬಡವರನ್ನು ಗುರಿ ಮಾಡಬೇಡಿ. ಅವರಿಗೆ ಯಾವ ಧರ್ಮವೂ ಇಲ್ಲ ಎಂದು ನಬಿ ಸಾಬ್ ಮನವಿ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ: ಧಾರವಾಡ: ಮುಸ್ಲಿಂ ವ್ಯಾಪಾರಿ ಅಂಗಡಿ ಧ್ವಂಸ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಅಂಗಡಿ ಧ್ವಂಸಗೊಂಡ ಹಿನ್ನೆಲೆಯಲ್ಲಿ ಇದೀಗ ನಬಿ ಸಾಬ್ ಅವರು ಬೇರೆ ಸ್ಥಳದಲ್ಲಿ ಹಣ್ಣಿನ ಅಂಗಡಿ ಇಟ್ಟುಕೊಳ್ಳಲು, ಜೀವನ ಮುಂದುವರೆಸಲು ನಿರ್ಧರಿಸಿದ್ದಾರೆ. ಆದರೆ, ಪ್ರಸ್ತುತ ಜೀವನೋಪಾಯಕ್ಕೆ ಯಾವುದೇ ಆಧಾರವಿಲ್ಲದ ಕಾರಣ ಕೂಲಿ ಕೆಲಸಕ್ಕೆ ಹೋಗಲು ನಿರ್ಧರಿಸಿದ್ದೇನೆ. ನಮಗೆಲ್ಲ ನಿತ್ಯದ ರೊಟ್ಟಿಯ ಚಿಂತೆ ಕಾಡುತ್ತಿದೆ ಎಂದು ತಿಳಿಸಿದ್ದಾರೆ. 

ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ನಾನು ವಿದ್ಯಾಭ್ಯಾಸವನ್ನು ಬಿಟ್ಟಿದ್ದೆ. ಆದರೆ, ನನ್ನ ಸಹೋದರಿ ಹಾಗೂ ಸಹೋದರರ ವಿದ್ಯಾಭ್ಯಾಸ ಮಾಡಿಸಲು ನನ್ನಿಂದ ಸಾಧ್ಯವಾದ ಎಲ್ಲಾ ಪ್ರಯತ್ನವನ್ನೂ ಮಾಡುವೆ ಎಂದು ನಬಿ ಸಾಬ್ ಅವರ ಮೊಮ್ಮಗ ಅರ್ಬಾಜ್ ಅವರು ಹೇಳಿದ್ದಾರೆ. 

ಹಣ್ಣಿನ ಅಂಗಡಿಯ ಮೇಲೆ ನಾವು ಸಂಪೂರ್ಣವಾಗಿ ಅವಲಂಬಿತರಾಗಿದ್ದೆವು. ಆದರೆ, ಇದೀಗ ಅದನ್ನು ಕಳೆದುಕೊಂಡಿದ್ದೇವೆ. ಸಹಾಯ ಮಾಡಲು ಜನರು ಮುಂದೆ ಬರುತ್ತಿದ್ದಾರೆ. ಈ ಸಹಾಯಕ್ಕೆ ಇನ್ನೆಷ್ಟು ದಿನ ಕಾಯಬೇಕು. ಸಮಾನತೆಯಲ್ಲಿ ನಂಬಿಕೆಯಿರುವ ಬಡವರಿಗೆ ತೊಂದರೆ ಕೊಡಬೇಡಿ. ಬೀದಿ ವ್ಯಾಪಾರಿಗಳನ್ನು ಗುರಿ ಮಾಡದೆ, ಉದ್ಯಮಿಗಳನ್ನು ಗುರಿ ಮಾಡಿಕೊಳ್ಳಲಿ ಎಂದು ಸಂಘಟನೆಗಳಿಗೆ ನಬಿ ಸಾಬ್ ಮನವಿ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ: ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ವಿಧಿಸುವವರ ವಿರುದ್ಧ ಕ್ರಮ: ಸಚಿವ ಮಾಧುಸ್ವಾಮಿ ಎಚ್ಚರಿಕೆ

ಬಿಡುವಿನ ಸಮಯದಲ್ಲಿ ನಾವು ಸೆಕ್ಯುರಿಟಿ ಗಾರ್ಡ್ ಕೆಲಸವನ್ನು ಮಾಡುತ್ತೇವೆಂದು ಕುಟುಂಬದ ಮತ್ತೊಬ್ಬ ಸದಸ್ಯರು ಹೇಳಿದ್ದಾರೆ. 

ನಬಿ ಸಾಬ್ ಅವರ ನೆರೆಮನೆಯ ದ್ರಾಕ್ಷಾಯಿಣಿ ಕಾಂಬಳೆ ಅವರು ಮಾತನಾಡಿ, ನಬಿ ಸಾಬ್ ಕುಟುಂಬ ನಮಗೆ ಗೊತ್ತಿದೆ. ಅವರು ಒಳ್ಳೆಯ ಜನರು. ಇತ್ತೀಚಿನ ಘಟನೆಯು ಇಲ್ಲಿನ ಎರಡೂ ಸಮುದಾಯಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.

ಶನಿವಾರ ನಡೆದ ದಾಳಿ ಘಟನೆಯ ಬಳಿಕ ಹಲವಾರು ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಸಂಸ್ಥೆಗಳು ನಬಿ ಸಾಬ್‌ಗೆ ನೆರವು ನೀಡಲು ಮುಂದೆ ಬರುತ್ತಿದ್ದು, ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ರೂ.10 ಸಾವಿರ ನೆರವು ನೀಡಿದ್ದಾರೆ.


Stay up to date on all the latest ರಾಜ್ಯ news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp