'ಬಿಟ್ಟೋಗ್ಬೇಡಿ ಟೀಚರ್': ವಿಜಯಪುರ ಶಿಕ್ಷಕಿ ಬೀಳ್ಕೋಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳು- ಪೋಷಕರ ಅಳಲು!
ಎಲ್ಲವೂ ಯಾಂತ್ರಿಕವಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಗುರು ಶಿಷ್ಯ ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ ಎನ್ನುವ ತರ್ಕಗಳ ನಡುವೆಯೇ, ವಿಜಯಪುರ ಜಿಲ್ಲೆಯು ಒಂದು ಅಪೂರ್ವ-ಗುರು ಶಿಷ್ಯ ಸಂಬಂಧಕ್ಕೆ ಸಾಕ್ಷಿಯಾಗಿದೆ.
Published: 13th April 2022 01:44 PM | Last Updated: 13th April 2022 03:43 PM | A+A A-

ಶಿಕ್ಷಕಿ ಬೀಳ್ಕೋಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳ ಅಳಲು
ವಿಜಯಪುರ: ಎಲ್ಲವೂ ಯಾಂತ್ರಿಕವಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಗುರು ಶಿಷ್ಯ ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ ಎನ್ನುವ ತರ್ಕಗಳ ನಡುವೆಯೇ, ವಿಜಯಪುರ ಜಿಲ್ಲೆಯು ಒಂದು ಅಪೂರ್ವ-ಗುರು ಶಿಷ್ಯ ಸಂಬಂಧಕ್ಕೆ ಸಾಕ್ಷಿಯಾಗಿದೆ. ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುವ ವೇಳೆ ವಿದ್ಯಾರ್ಥಿಗಳು ಬಿಕ್ಕಿ-ಬಿಕ್ಕಿ ಅತ್ತಿದ್ದು, ಗುರು-ಶಿಷ್ಯರ ಸಂಬಂಧಕ್ಕೆ ಹಿಡಿದ ಕೈಗನ್ನಡಿಯಂತಿತ್ತು.
ವಿಜಯಪುರ ಜಿಲ್ಲೆ ಕೋಲ್ಹಾರ ತಾಲೂರಕಿನ ಬೋಳತಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಪಿಎಸ್ ತೊರವಿ ತಮ್ಮ 11 ವರ್ಷದ ಸುದೀರ್ಘ ಸೇವೆಯ ನಂತರ ಬೇರೆಡೆಗೆ ವರ್ವಾವಣೆಯಾಗಿದ್ದರು. ಹೀಗಾಗಿ ಅವರಿಗೆ ಬೀಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮ್ಕೆ ಹಾಜರಾಗಿದ್ದ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರು ವರ್ಗಾವಣೆಯಾಗಿದ್ದಕ್ಕೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು, ಮಕ್ಕಳ ಜೊತೆಗೆ ಪೋಷಕರು ಕೂಡ ದುಃಖದಲ್ಲಿದ್ದರು.
ಪಿಎಸ್ ತೊರವಿ ಅವರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಆಕೆ ಕೇವಲ ಬೋಧನೆಗಾಗಿ ತಮ್ಮ ಸೇವೆ ಸೀಮಿತಗೊಳಿಸಿರಲಿಲ್ಲ, ವಿದ್ಯಾರ್ಥಿಗಳಿಗೆ ನೈತಿಕ ಪಾಠ, ಶಿಸ್ತು, ಸಂಸ್ಕೃತಿಗಳ ಬಗ್ಗೆ ಹೇಳಿಕೊಡುತ್ತಿದ್ದರು, ರಾಷ್ಟ್ರೀಯ ನಾಯಕರು ಮತ್ತು ತತ್ವಜ್ಞಾನಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಇದರ ಜೊತೆಗೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಪೋಷಕರ ಜೊತೆಗೆ ಉತ್ತಮ ಭಾಂದವ್ಯ ಹೊಂದಿದ್ದರು.
ಶಾಲೆ ಆರಂಭವಾದಾಗಿನಿಂದ ಇಂತಹ ಶಿಕ್ಷಕರನ್ನು ನಾವು ನೋಡಿರಲಿಲ್ಲ ಎಂದು ಗ್ರಾಮಸ್ಥರಾದ ಜಿಯು ಗೋಡಯಾಳ್ ತಿಳಿಸಿದ್ದಾರೆ. ಶಾಲೆ ಬಿಟ್ಟ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿತೋರವಿ ಅವರು ವಾಪಸ್ ಶಾಲೆಗೆ ಕರೆತರುತ್ತಿದ್ದರು. ಕೇವಲ ಶಾಲೆಯಲ್ಲಿ ಮಾತ್ರವಲ್ಲ ಇಡೀ ಗ್ರಾಮಸ್ಥರೆಲ್ಲ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಪಠ್ಯೇತರ ಚಟುವಟಿಕೆಗಳನ್ನು ಸಕ್ರಿಯವಾಗಿ ಆಯೋಜಿಸುತ್ತಿದ್ದರು ಎಂದು ಶಾಲಾ ಮುಖ್ಯೋಪಾಧ್ಯಾಯ ಎಸ್ ಎಸ್ ಬಾಗಲಕೊಟ ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ತೋರವಿ ಅವರು, ನಾನು ಈ ಊರಿಗೆ ಶಾಲೆಗೆ ಬಂದಾಗ, ಇಡೀ ಗ್ರಾಮಸ್ಥರು ನನ್ನನ್ನು ಮಗಳಂತೆ ನೋಡಿಕೊಂಡಿದ್ದಾರೆ. ಗ್ರಾಮ ಮತ್ತು ಶಾಲೆ ಬಿಟ್ಟು ಹೋಗುತ್ತಿರುವುದು ವಯಕ್ತಿಕವಾಗಿ ನನಗೆ ತುಂಬಾ ನೋವು ತರುತ್ತಿದೆ. ಗ್ರಾಮಸ್ಥರೊಂದಿಗೆ ಭಾವನಾತ್ಮಕ ಬಾಂಧವ್ಯವಿತ್ತು, ಯಾವುದೇ ಶಾಲೆಗೆ ನನ್ನನ್ನು ವರ್ಗಾವಣೆ ಮಾಡಿದರೂ ಅಲ್ಲಿಯೂ ಇದೇ ಬದ್ಧತೆಯಿಂದ ಕೆಲಸ ಮಾಡುತ್ತೇನೆ ಎಂದು ಭಾವುಕರಾಗಿ ನುಡಿದರು.