ಚನ್ನಕೇಶವ ರಥೋತ್ಸವ: ವ್ಯಾಪಾರ ಮಾಡಲು ಅಲ್ಪಸಂಖ್ಯಾತರಿಗೆ ಅವಕಾಶ
ಬೇಲೂರಿನ ಪ್ರಸಿದ್ಧ ಚನ್ನಕೇಶವ ದೇವಸ್ಥಾನದ ರಥೋತ್ಸವದ ವೇಳೆ ಅಂಗಡಿಗಳ ಹಂಚಿಕೆ ವಿಚಾರವಾಗಿ ಉಂಟಾಗಿದ್ದ ಬಿಕ್ಕಟ್ಟನ್ನು ಬಗೆಹರಿಸಿ ಅಲ್ಪಸಂಖ್ಯಾತರಿಗೆ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.
Published: 13th April 2022 08:34 AM | Last Updated: 13th April 2022 12:17 PM | A+A A-

ಸಂಗ್ರಹ ಚಿತ್ರ
ಹಾಸನ: ಬೇಲೂರಿನ ಪ್ರಸಿದ್ಧ ಚನ್ನಕೇಶವ ದೇವಸ್ಥಾನದ ರಥೋತ್ಸವದ ವೇಳೆ ಅಂಗಡಿಗಳ ಹಂಚಿಕೆ ವಿಚಾರವಾಗಿ ಉಂಟಾಗಿದ್ದ ಬಿಕ್ಕಟ್ಟನ್ನು ಬಗೆಹರಿಸಿ ಅಲ್ಪಸಂಖ್ಯಾತರಿಗೆ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಸಮಾಜದ ವಿವಿಧ ವರ್ಗಗಳ ಮುಖಂಡರು, ಪ್ರಗತಿಪರ ಚಿಂತಕರು ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು ಮಂಗಳವಾರ ಸಭೆ ನಡೆಸಿದ್ದು, ಈ ನಿರ್ಣಯ ಕೈಗೊಂಡಿದ್ದಾರೆ.
ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಪ್ರಗತಿಪರ ಚಿಂತಕರು, ಶಾಂತಿಯುತ ಪಾದಯಾತ್ರೆ ನಡೆಸಿದರು.
ಇದನ್ನೂ ಓದಿ: ಬೀದಿ, ರಸ್ತೆಗೆ ಬಂದು ನಿಂತ ಧರ್ಮ ಸಂಘರ್ಷ: ಬೆಂಗಳೂರಿನ ಮುಸ್ಲಿಂ ಹೆಸರಿನ ರಸ್ತೆ, ಸರ್ಕಲ್ ಗಳಿಗೆ ಹಿಂದೂ ಮರುನಾಮಕರಣ?
ಧಾರ್ಮಿಕ ಪರಿಷತ್ ಹಾಗೂ ಹಿಂದೂಪರ ಸಂಘಟನೆಗಳ ಸದಸ್ಯರು ರಥೋತ್ಸವದಂದು ಮುಸ್ಲಿಮರು ಸ್ಟಾಲ್'ಗಳ ಹಾಕಲು ಅವಕಾಶ ನೀಡಬಾರದು ಎಂದು ಕೆಲವರು ದೇವಸ್ಥಾನ ಸಮಿತಿ ಹಾಗೂ ತಾಲೂಕು ಆಡಳಿತಕ್ಕೆ ಮನವಿ ಪತ್ರ ಸಲ್ಲಿಸಿದ್ದರು. ತಮ್ಮ ಬೇಡಿಕೆಯನ್ನು ಸಮರ್ಥಿಸಿಕೊಳ್ಳಲು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯಿದೆ, 2002 ಅನ್ನು ಉಲ್ಲೇಖಿಸಿದ್ದರು. ಇದರಿಂದ ಸಮಸ್ಯೆ ಉದ್ಭವಗೊಂಡಿತ್ತು,
ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಎರಡೂ ಸಮುದಾಯದ ಧಾರ್ಮಿಕ ಮುಖಂಡರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸಲಾಗಿದೆ. ರಥೋತ್ಸವ ಸುಗಮವಾಗಿ ನಡೆಯಲು ಕ್ರಮಕೈಗೊಳ್ಳಲಾಗುವುದು ಎಂದರು