ನುಡಿಹಬ್ಬ 2022: ಮುರುಘಾ ಶ್ರೀಗಳಿಗೆ ಡಿ.ಲಿಟ್ ಪದವಿ; ಸಾಹಿತಿಗಳಿಗೆ ನಾಡೋಜ ಪ್ರಶಸ್ತಿ ಪ್ರದಾನ
ಹಂಪಿ ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬದಲ್ಲಿ ಮುರುಘಾ ಮಠ ಪೀಠಾಧಿಪತಿಗಳಾದ ಶ್ರೀ ಶಿವಮೂರ್ತಿ ಮುರುಘಾ ಶರಣ ಸ್ವಾಮಿಗಳಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಲಾಯಿತು.
Published: 13th April 2022 12:36 AM | Last Updated: 13th April 2022 01:20 PM | A+A A-

ಮುರುಘಾ ಶ್ರೀಗಳಿಗೆ ಡಿ.ಲಿಟ್ ಪದವಿ; ಸಾಹಿತಿಗಳಿಗೆ ನಾಡೋಜ ಪ್ರಶಸ್ತಿ ಪ್ರದಾನ
ವಿಜಯನಗರ: ಹಂಪಿ ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬದಲ್ಲಿ ಮುರುಘಾ ಮಠ ಪೀಠಾಧಿಪತಿಗಳಾದ ಶ್ರೀ ಶಿವಮೂರ್ತಿ ಮುರುಘಾ ಶರಣ ಸ್ವಾಮಿಗಳಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಲಾಯಿತು.
Murugha Mutt pontiff Shivamurathy Murugha Sharana received D.Litt degree from #Governor @TCGEHLOT in #NudiHabbba (Annual Convocation) event on Tuesday in university auditorium. @XpressBengaluru @KannadaPrabha @ramupatil_TNIE @Amitsen_TNIE @HospetOnline @BellaryNamma pic.twitter.com/icUXkQCpod
— @Kiran_TNIE (@KiranTNIE1) April 12, 2022
ವಿಜಯನಗರದ ಹಂಪಿ ಕನ್ನಡ ವಿಸ್ವವಿದ್ಯಾಲಯದ ನುಡಿಹಬ್ಬದಲ್ಲಿ ಮುರುಘಾ ಶ್ರೀಗಳಿಗೆ ರಾಜ್ಯಪಾಲ ಗೆಹ್ಲೂಟ್ ಅವರು ಡಿ.ಲಿಟ್ ಪದವಿ ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ಶ್ರೀಗಳು, 'ಸಾಮಾಜಿಕ ಸಾಮರಸ್ಯ ಕಾಪಾಡಲು ಮೊದಲಿನಿಂದಲೂ ವಿಧಾಯಕ, ಶಾಂತಿಯ ಹೆಜ್ಜೆ ಇಡಲಾಗುತ್ತಿದ್ದು, ಆ ಕೆಲಸ ಮುಂದುವರೆಸಲಾಗುವುದು ಎಂದು ಹೇಳಿದರು.
ಅಲ್ಲದೆ ಕನ್ನಡ ವಿ.ವಿ ಕನ್ನಡಕ್ಕಾಗಿ, ಕನ್ನಡ ಕಟ್ಟುವ ಕೆಲಸ ಮಾಡುತ್ತಿದೆ. ಕನ್ನಡ ಬೆಳೆಸುವ ಪ್ರಯತ್ನ, ಸಾಧನೆ ಮಾಡಿದವರಿಗೆ ಪದವಿ ಕೊಟ್ಟು ಸತ್ಕರಿಸುವ ಉತ್ತಮ ಕೆಲಸ ಮಾಡುತ್ತಿದೆ ಎಂದರು. ಇದೇ ವೇಳೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಂಬಂಧ ಸರ್ಕಾರಕ್ಕೆ ಏನಾದರೂ ಸಲಹೆ ನೀಡುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಶ್ರೀಗಳು ಪ್ರತಿಕ್ರಿಯಿಸಲಿಲ್ಲ.
#Governor @TCGEHLOT honoured #Nadoja award 2022 to Dr Bhashyam Swamiji, Channabasappa and T V Venkatachala Sastri in #NudiHabbba (Annual Convocation) event on Tuesday in university auditorium. @XpressBengaluru @KannadaPrabha @ramupatil_TNIE @Amitsen_TNIE @HospetOnline pic.twitter.com/PBIUsUAcgO
— @Kiran_TNIE (@KiranTNIE1) April 12, 2022
ಸಾಹಿತಿಗಳಿಗೆ ನಾಡೋಜ ಪ್ರಶಸ್ತಿ ಪ್ರದಾನ
ಇದೇ ವೇಳೆ ಈ ಹಿಂದೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಘೋಷಣೆ ಮಾಡಿದ್ದ ನಾಡೋಜ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತ ಡಾ ಭಾಷ್ಯಂ ಸ್ವಾಮೀಜಿ, ಚನ್ನಬಸಪ್ಪ ಮತ್ತು ಟಿ ವಿ ವೆಂಕಟಾಚಲ ಶಾಸ್ತ್ರಿ ಅವರಿಗೆ ನಾಡೋಜ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.