
ಸಾಂದರ್ಭಿಕ ಚಿತ್ರ
ಬೆಂಗಳೂರು: ಮದುವೆಗೆ ಕೆಲವೇ ನಿಮಿಷಗಳ ಮೊದಲು, ವಧುವಿನ ಕೋಣೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
27 ವರ್ಷದ ಖಾಸಗಿ ಕಂಪನಿ ಉದ್ಯೋಗಿ ಪೂರ್ಣಿಮಾ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿರುವ ಮಹಾಲಕ್ಷ್ಮಿ ಮಂಟಪದಲ್ಲಿ ಮಂಗಳಸೂತ್ರ ಧಾರಣೆಗಾಗಿ ಕೊಠಡಿಯಿಂದ ಹೊರಬಂದಿದ್ದರು.
ಈ ವೇಳೆ ವಧುವಿನ ಕೊಠಡಿಯಲ್ಲಿದ್ದ 102 ಗ್ರಾಮ್ ತೂಕದ 5 ಲಕ್ಷ ರು. ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿದೆ. ಶಾಸ್ತ್ರದ ಕೆಲಸಗಳಿಗಾಗಿ ವಧು ಕೋಣೆಯಿಂದ ಹೊರಬಂದಿದ್ದಾರೆ. ಈ ಸಮಯದಲ್ಲಿ ಬ್ಯೂಟಿಶಿಯನ್ ಮಾತ್ರ ಅಲ್ಲಿದ್ದರು ಎಂಬುದಾಗಿ ಹೇಳಿದ್ದಾರೆ.
ಆಭರಣಗಳನ್ನು ಧರಿಸಲು ಪೂರ್ಣಿಮಾ ತನ್ನ ಕೋಣೆಗೆ ತೆರಳಿದಾಗ ಅಲ್ಲಿ ಆಭರಣ ಕಾಣೆಯಾಗಿತ್ತು. ಕನಕಪುರ ರಸ್ತೆಯ ರಂಗನಾಥ ಲೇಔಟ್ ನಿವಾಸಿ ಪೂರ್ಣಿಮಾ ಅವರಿಗೆ ಬಾವೀ ಪತಿ ವಿನೋದ್ ಕುಮಾರ್ ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಭಾನುವಾರ ದೂರು ದಾಖಲಾದ ನಂತರ ಪೊಲೀಸರು ಸಮನ್ಸ್ ಪಡೆದ ಮೇಕಪ್ ಮಾಡಲು ಬಂದಿದ್ದವರಪ ನಿರಪರಾಧಿ ಎಂದು ಹೇಳಿದ್ದಾರೆ. ವಿವಾಹಕ್ಕೆ ಆಗಮಿಸಿದ ಆಹ್ವಾನಿತರ ವಿವರಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿ ಪೊಲೀಸರು ತೊಡಗಿದ್ದಾರೆ. ವಧುವಿನ ಮೇಕಪ್ ಗಾಗಿ ಬ್ಯೂಟಿಷಿಯನ್ ಬಂದಿದ್ದರು, ತಾನು ಶಾಸ್ತ್ರಕ್ಕೆ ತೆರಳುವಾಗ ಆಕೆ ಕೋಣೆಯಲ್ಲಿದ್ದರು ಎಂದು ಹೇಳಿದ್ದಾರೆ.
ಆಭರಣಗಳು ಕಾಣದಿದ್ದಾಗ ಕೂಡಲೇ ಆರ್ಟ್ ಆಫ್ ಲಿವಿಂಗ್ ಆಶ್ರಮದ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ, ಆಶ್ರಮದ ಭದ್ರತಾ ಸಿಬ್ಬಂದಿ ಅತಿಥಿಗಳನ್ನು ಪರಿಶೀಲಿಸಿದ್ದು, ಅವರಲ್ಲಿ ಆಭರಣಗಳು ಪತ್ತೆಯಾಗಿಲ್ಲ.
ಮೇಕಪ್ ಕಲಾವಿದರು ಈಗಾಗಲೇ ಹೊರಟು ಹೋಗಿದ್ದರಿಂದ ಅವರನ್ನು ಪರಿಶೀಲಿಸಲಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.
ಮೇಕಪ್ ಕಲಾವಿದರನ್ನು ವಿಚಾರಣೆಗೆ ಕರೆಯಲಾಯಿತು ಆದರೆ ಈ ವೇಳೆ ಅವರು ತಮ್ಮ ಮುಗ್ಧತೆಯನ್ನು ಪ್ರದರ್ಶಿದ್ದಾರೆ. ಪ್ರಕರಣವು ಇನ್ನೂ ತನಿಖೆಯಲ್ಲಿದೆ ಮತ್ತು ಚಿನ್ನಾಭರಣಗಳನ್ನು ಇನ್ನೂ ವಶಪಡಿಸಿಕೊಳ್ಳಬೇಕಾಗಿದೆ” ಎಂದು ಅಧಿಕಾರಿ ಹೇಳಿದರು.