ಸಂತೋಷ್ ಸಾವು ಪ್ರಕರಣ: ಸಿಎಂ ಬೊಮ್ಮಾಯಿಗೆ ಮಂಗಳೂರಿನಲ್ಲಿ ಕಪ್ಪು ಬಾವುಟ ಪ್ರದರ್ಶನ
ಗುತ್ತಿಗೆದಾರ ಸಂತೋಷ್ ಪಾಟೀಲ್ ನಿಗೂಢ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ಬಂಧನಕ್ಕೆ ಆಗ್ರಹ ಹೆಚ್ಚಾಗಿದ್ದು, ಮಂಗಳೂರಿನಲ್ಲಿ ಇಂದು ಬುಧವಾರ SDPI ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ.
Published: 13th April 2022 12:31 PM | Last Updated: 13th April 2022 12:31 PM | A+A A-

ಎಸ್ ಡಿಪಿಐ ಕಾರ್ಯಕರ್ತರಿಂದ ಕಪ್ಪು ಬಾವುಟ ಪ್ರದರ್ಶನ
ಮಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ನಿಗೂಢ ಸಾವಿನ ಪ್ರಕರಣ(Contractor Santosh Patil death case) ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ(Minister K S Eshwarappa) ಬಂಧನಕ್ಕೆ ಆಗ್ರಹ ಹೆಚ್ಚಾಗಿದ್ದು, ಮಂಗಳೂರಿನಲ್ಲಿ ಇಂದು ಬುಧವಾರ SDPI ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ.
ಬಂಟ್ವಾಳದಲ್ಲಿ ಪಕ್ಷದ ಸಭೆಯಲ್ಲಿ ಭಾಗವಹಿಸಲು ಸಿಎಂ ಬೊಮ್ಮಾಯಿಯವರು ಮಂಗಳೂರಿನಿಂದ ವಾಹನದಲ್ಲಿ ತೆರಳುತ್ತಿದ್ದ ವೇಳೆ ದಾರಿಯುದ್ದಕ್ಕೂ SDPI ಕಾರ್ಯಕರ್ತರು ವಳಚ್ಚಿಲ್ ಬಳಿ ಪ್ರತಿಭಟನೆ ನಡೆಸಿದರು. ದಲಿತ ವಿರೋಧಿ ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಧಿಕ್ಕಾರ, ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಸಿಎಂ ಬಂಟ್ವಾಳಕ್ಕೆ ಹೆದ್ದಾರಿಯಲ್ಲಿ ಸಾಗುವಾಗ ಕಪ್ಪು ಬಾವುಟ ಪ್ರದರ್ಶನವಾಗಿದೆ, ಕೂಡಲೇ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
Contrator Santhosh Patil suicide: SDPI activists show black flags to CM @BSBommai demanding arrest and resignation of minister K S Eshwarappa in Mangaluru. CM was heading to attend a party meeting in Bantwal @vinndz_TNIE @XpressBengaluru @santwana99 @compolmlr @ikseshwarappa pic.twitter.com/Ub5NE0MtX8
— Divya Cutinho_TNIE (@cutinha_divya) April 13, 2022