ಹಣ ಸಂಗ್ರಹಕ್ಕಾಗಿ ಬ್ಯಾಂಕ್ಗಳಿಗೆ ನಿವೇಶನ ಅಡಮಾನ ಮಾಡಲು ಬಿಡಿಎ ಚಿಂತನೆ
ಡಾ. ಕೆ. ಶಿವರಾಮ್ ಕಾರಂತ ಬಡಾವಣೆಗಾಗಿ ಹಣ ಸಂಗ್ರಹಿಸಲು ಭಾರತದ ಯಾವುದೇ ಬ್ಯಾಂಕ್ನೊಂದಿಗೆ ತನ್ನ ಮೂಲೆ ಸೈಟ್ ಗಳನ್ನು ಅಡಮಾನ ಇಡುವುದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.
Published: 14th April 2022 04:04 PM | Last Updated: 14th April 2022 04:29 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಡಾ. ಕೆ. ಶಿವರಾಮ್ ಕಾರಂತ ಬಡಾವಣೆಗಾಗಿ ಹಣ ಸಂಗ್ರಹಿಸಲು ಭಾರತದ ಯಾವುದೇ ಬ್ಯಾಂಕ್ನೊಂದಿಗೆ ತನ್ನ ಮೂಲೆ ಸೈಟ್ ಗಳನ್ನು ಅಡಮಾನ ಇಡುವುದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.
ಬಿಡಿಎ ಇನ್ನೂ ಯಾವುದೇ ನಿವೇಶನವನ್ನು ಬ್ಯಾಂಕ್ಗೆ ಹಸ್ತಾಂತರಿಸಿಲ್ಲ, ಆದರೆ ಲೇಔಟ್ ಅಭಿವೃದ್ಧಿಯ ಸಂದರ್ಭದಲ್ಲಿ ಸಂಪನ್ಮೂಲ ಕೊರತೆ ಎದುರಾದಾಗ ಆ ಮಾರ್ಗವನ್ನು ಅನುಸರಿಸಬಹುದೆಂದು ಮೂಲಗಳು ಹೇಳಿವೆ. 2022 ಜನವರಿ 11 ರಂದು ಬಿಡಿಎ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ಪ್ರತಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ.
ಕಾರ್ನರ್ ಸೈಟ್ ಗಳನ್ನು ಮಾತ್ರ ಹರಾಜು ಹಾಕಲಾಗುತ್ತದೆ ಮತ್ತು ಇವುಗಳನ್ನು ಮಾರಾಟ ಮಾಡಲ್ಲ. ಆದರೆ, ಅದನ್ನೇ ಭದ್ರತೆಯಾಗಿ ಬ್ಯಾಂಕ್ಗೆ ಅಡಮಾನವಿಟ್ಟರೆ, ಬಿಡಿಎ ಬ್ಯಾಂಕ್ನಿಂದ ಸೈಟ್ ಮೌಲ್ಯ ಶೇ. 70 ರಷ್ಟು ಮೊತ್ತವನ್ನು ಪಡೆಯುತ್ತದೆ ಮತ್ತು ಅದನ್ನು ಅಭಿವೃದ್ಧಿ ಚಟುವಟಿಕೆಗೆ ಬಳಸಬಹುದು. ಐದು ವರ್ಷದೊಳಗೆ ಸೈಟ್ನ ಮೌಲ್ಯವು ಗಗನಕ್ಕೇರುತ್ತದೆ ಮತ್ತು ಅದನ್ನು ಹರಾಜು ಮಾಡಬಹುದು. ಇದು ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಬ್ಯಾಂಕ್ಗೆ ಸಾಲ ಮರುಪಾವತಿಸಲು ಬಿಡಿಎಗೆ ಸಹಾಯ ಮಾಡುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ಡಾ. ಶಿವರಾಮ್ ಕಾರಂತ ಲೇಔಟ್ ನಲ್ಲಿ ಕೆಲಸ ಕೈಗೆತ್ತಿಕೊಳ್ಳಲು ಪ್ರಸ್ತುತ ಯಾವುದೇ ಹಣದ ಕೊರತೆಯಿಲ್ಲ, ಹಣದ ಅಗತ್ಯತೆ ಎದುರಾದಾಗ ಬ್ಯಾಂಕ್ ಕೇಳಲು ಯೋಚಿಸುತ್ತೇವೆ ಎಂದು ಬಿಡಿಎ ಕಮೀಷನರ್ ರಾಜೇಶ್ ಗೌಡ ತಿಳಿಸಿದ್ದಾರೆ.