ಸಂತೋಷ್ ಪಾಟೀಲ್ ಸೂಸೈಡ್ ಕೇಸ್: ಬೆಳಗಾವಿ ಜಿಪಂ ಸಿಇಒ ರಜೆ, ತನಿಖೆ ಮತ್ತಷ್ಟು ವಿಳಂಬ
ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಜೆಯಲ್ಲಿರುವ ಹಿನ್ನೆಲೆಯಲ್ಲಿ ಆದೇಶವಿಲ್ಲದೆ ಹಿಂಡಲಗಾದಲ್ಲಿ ಗುತ್ತಿಗೆದಾರ ಸಂತೋಷ ಪಾಟೀಲ ಅವರು ಕೈಗೊಂಡಿರುವ ರಸ್ತೆ ಕಾಮಗಾರಿಯ ತನಿಖೆ ವಿಳಂಬವಾಗುವ ಸಾಧ್ಯತೆ ಇದೆ.
Published: 15th April 2022 11:28 AM | Last Updated: 15th April 2022 01:26 PM | A+A A-

ಈಶ್ವರಪ್ಪ ಜೊತೆ ಸಂತೋಷ್ ಪಾಟೀಲ್
ಬೆಳಗಾವಿ: ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಜೆಯಲ್ಲಿರುವ ಹಿನ್ನೆಲೆಯಲ್ಲಿ ಆದೇಶವಿಲ್ಲದೆ ಹಿಂಡಲಗಾದಲ್ಲಿ ಗುತ್ತಿಗೆದಾರ ಸಂತೋಷ ಪಾಟೀಲ ಅವರು ಕೈಗೊಂಡಿರುವ ರಸ್ತೆ ಕಾಮಗಾರಿಯ ತನಿಖೆ ವಿಳಂಬವಾಗುವ ಸಾಧ್ಯತೆ ಇದೆ.
ಸಂತೋಷ್ ಪಾಟೀಲ್ ಕಾಮಗಾರಿ ಕೈಗೆತ್ತಿಕೊಂಡಿರುವ ಕುರಿತು ಅಧಿಕಾರಿಯಿಂದ ರಾಜ್ಯ ಸರ್ಕಾರ ಮಾಹಿತಿ ಕೇಳಿದೆ. ಆದರೆ ವಾರಂತ್ಯದಲ್ಲಿ ಎರಡು ಮೂರು ಸರ್ಕಾರಿ ರಜೆ ಇರುವ ಕಾರಣ ವರದಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಶೇ. 40 ರಷ್ಟು ಕಮಿಷನ್ ಕೇಳಿದ್ದಾರೆಂದು ಆರೋಪಿಸಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಏಪ್ರಿಲ್ 12 ರಂದು ಉಡುಪಿಯ ಲಾಡ್ಜ್ ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು.
ಆದರೆ ನಾಲ್ಕು ದಿನಗಳ ಹಿಂದೆ, ಅಂದರೆ ಏಪ್ರಿಲ್ 8 ರಂದು ಆರ್ಡಿಪಿಆರ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ಎಲ್ಕೆ ಅತೀಕ್ ಅವರು ಸಿಇಒ ದರ್ಶನ್ ಎಚ್ವಿ ಅವರಿಗೆ ಪತ್ರ ಬರೆದು, 108 ಕಾಮಗಾರಿಗಳ ವಿವರ, ಕಾಮಗಾರಿಗೆ ತಾಂತ್ರಿಕ ಅಥವಾ ಆಡಳಿತಾತ್ಮಕ ಅನುಮೋದನೆ ದೊರತಿಯೆದೆಯೇ ಹಾಗೂ ಯಾವ ಆಧಾರದ ಮೇಲೆ ಅವುಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡುವಂತೆ ಕೇಳಿದ್ದರು.
ಇದನ್ನೂ ಓದಿ: ಆರ್ ಎಸ್ ಎಸ್ ನಿಷ್ಠ, ಪ್ರಖರ ಹಿಂದೂವಾದಿ, 'ವಿವಾದಪ್ರಿಯ' ಈಶ್ವರಪ್ಪ ತಲೆದಂಡ! ಬಿಜೆಪಿ ನಾಗಾಲೋಟಕ್ಕೆ ಪರ್ಸೆಂಟೇಜ್ ಬ್ರೇಕ್?
ಕಾಮಗಾರಿ ಕೈಗೆತ್ತಿಕೊಂಡಿದ್ದರೆ ಸ್ಥಳೀಯ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ಏಕೆ ಬಂದಿಲ್ಲ ಎಂದು ಅತೀಕ್ ಪ್ರಸ್ತಾಪಿಸಿದ್ದರು. ಅಧಿಕಾರಿಗಳು ಶಾಮೀಲಾಗಿದ್ದಲ್ಲಿ ವಿವರವಾದ ವರದಿ ನೀಡುವಂತೆಯೂ ಕೋರಿದ್ದರು.
ಇದಕ್ಕೂ ಮುನ್ನ ಏಪ್ರಿಲ್ 5ರಂದು ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆರ್ ಡಿಪಿಆರ್ ಇಲಾಖೆಗೆ ಪತ್ರ ಬರೆದಿದ್ದುಇದಕ್ಕೂ ಮುನ್ನ ಏಪ್ರಿಲ್ 5ರಂದು ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆರ್ ಡಿಪಿಆರ್ ಇಲಾಖೆಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೇಳಿದಾಗ, ರಜೆಯಲ್ಲಿರುವ ಸಿಇಒ ಅವರಿಂದ ವಿವರ ಕೇಳಿದ್ದೇನೆ ಎಂದು ಅತೀಕ್ ಹೇಳಿದರು. "ಅವರು ಹಿಂತಿರುಗಿದ ತಕ್ಷಣ ಅವರು ವರದಿಯನ್ನು ಕಳುಹಿಸುತ್ತಾರೆ" ಎಂದು ಅತೀಕ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಮತ್ತೊಂದೆಡೆ, ಘಟನೆ ಸಂಭವಿಸುವ ಮೊದಲು ವಿವರಗಳನ್ನು ಕೋರಲಾಗಿತ್ತು ಎಂದು ಇಲಾಖೆ ಮೂಲಗಳು ತಿಳಿಸಿವೆ. “ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒಗೆ ಎಸಿ ಎಸ್ ಪತ್ರ ಬರೆದು ಆರು ದಿನಗಳಾಗಿವೆ. ವಾರಾಂತ್ಯದ ರಜೆ ಕಾರಣ, ಕನಿಷ್ಠ ಸೋಮವಾರದವರೆಗೆ ವರದಿ ಕಳುಹಿಸಲಾಗುವುದಿಲ್ಲ”ಎಂದು ಮೂಲಗಳು ತಿಳಿಸಿವೆ.