ನಿಗೂಢವಾಗಿ ಕಾಣೆಯಾಗಿದ್ದ ಜೆಡಿಎಸ್ ಮಾಜಿ ಕಾರ್ಪೊರೇಟರ್ ಐಶ್ವರ್ಯ ನಾಗರಾಜ್ ಪತಿ ಲೋಹಿತ್ ಪತ್ತೆ
ನಾಪತ್ತೆ ಆಗಿದ್ದ ಜೆಡಿಎಸ್ ಮಾಜಿ ಕಾರ್ಪೊರೇಟರ್ ಐಶ್ವರ್ಯ ನಾಗರಾಜ್ ಪತಿ ಲೋಹಿತ್ ವಾರಣಾಸಿಯಲ್ಲಿ ಪತ್ತೆಯಾಗಿದ್ದಾರೆ. ವಾರಣಾಸಿಯಲ್ಲಿ ಲೋಹಿತ್ ನನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
Published: 15th April 2022 08:45 AM | Last Updated: 15th April 2022 01:22 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನಾಪತ್ತೆ ಆಗಿದ್ದ ಜೆಡಿಎಸ್ ಮಾಜಿ ಕಾರ್ಪೊರೇಟರ್ ಐಶ್ವರ್ಯ ನಾಗರಾಜ್ ಪತಿ ಲೋಹಿತ್ ವಾರಣಾಸಿಯಲ್ಲಿ ಪತ್ತೆಯಾಗಿದ್ದಾರೆ. ವಾರಣಾಸಿಯಲ್ಲಿ ಲೋಹಿತ್ ನನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ನಂದಗುಡಿ ಇನ್ಸ್ ಪೆಕ್ಟರ್ ರಂಗಸ್ವಾಮಿ ನೇತೃತ್ವದ ತಂಡದಿಂದ ಪತ್ತೆ ಮಾಡಲಾಗಿದೆ. ಕಾರು ನಂದಗುಡಿ ಬಳಿ ಬಿಟ್ಟು ನಿಗೂಡವಾಗಿ ನಾಪತ್ತೆಯಾಗಿದ್ದ ಲೋಹಿತ್ ಇದೀಗ ಸಿಕ್ಕಿದ್ದಾರೆ. ಮಾರ್ಚ್ 29 ರಂದು ಕಾರು ಪಂಕ್ಷರ್ ಆಗಿ ರಕ್ತದ ಕಲೆ ಇದ್ದಹಾಗೆ ಪತ್ತೆಯಾಗಿತ್ತು. ಯಾರು ಕಿಡಿಗೇಡಿಗಳು ಕಿಡ್ನ್ಯಾಪ್ ಮಾಡಿರಬಹುದು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರು. ಹೀಗಾಗಿ ನಂದಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಕಾರು ಬಿಟ್ಟು ಸ್ವಯಂ ಪ್ರೇರಿತವಾಗಿ ತೆರಳಿದ್ದ ಲೋಹಿತ್, ಚಪ್ಪಲಿ ಬೆಲ್ಟ್ ದೇವಸ್ಥಾನದ ಬಳಿ ಬಿಟ್ಟು ವಾರಣಾಸಿಗೆ ಹೋಗಿದ್ದರು. ಲೋಹಿತ್ ನಾಪತ್ತೆ ಹಿನ್ನೆಲೆ ತನಿಖೆ ನಡೆಸಲಾಗಿದ್ದು, ಆತ ತನ್ನ ಸ್ನೇಹಿತರ ಜತೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದ. ಆತನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ. ವಾರಣಾಸಿಗೆ ಪೊಲೀಸ್ ತಂಡವನ್ನು ಕಳುಹಿಸಲಾಗಿತ್ತು, ಬುಧವಾರ ಅಲ್ಲಿ ಆತನನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲೋಹಿತ್ ಅಪಾರ ಪ್ರಮಾಣದಲ್ಲಿ ಸಾಲ ಮಾಡಿದ್ದರು, ಸಾಲ ಕೊಟ್ಟವರು ವಾಪಸ್ ಹಣ ನೀಡುವಂತೆ ಒತ್ತಡ ಹೇರಿದ ಕಾರಣ ಭೂಗತರಾಗಲು ನಿರ್ಧರಿಸಿದ್ದರು, ಹೀಗಾಗಿ ಕಾರಿನ ಮೇಲೆ ರಕ್ತ ಸುರಿದು ಪರಾರಿಯಾಗಲು ಯತ್ನಿಸಿದ್ದರು ಎಂದು ಪೋಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.