
ಭಾರಿ ಮಳೆ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ನಗರದ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
#Bengaluru #Rain effects at several parts.
— Madhu M (@MadhunaikBunty) April 14, 2022
Daily life disturbed due to over flow of Rajakaluve in some parts of the city. #Karnataka pic.twitter.com/ZgkI956ccE
ಬೆಂಗಳೂರಿನ ಜಯನಗರ, ಸೌತ್ ಎಂಡ್ ಸರ್ಕಲ್, ಜೆ.ಪಿ. ನಗರ, ಬನಶಂಕರಿ, ವಿಲ್ಸನ್ ಗಾರ್ಡನ್, ಟೌನ್ ಹಾಲ್, ಮೈಸೂರು ರಸ್ತೆ, ಕತ್ರಿಗುಪ್ಪೆ, ಪದ್ಮನಾಭನಗರ, ಮೆಜೆಸ್ಟಿಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜೋರು ಮಳೆಯಾಗಿದೆ.
ಸುರಿದ ಮಳೆಗೆ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಂಜೆ ವೇಳೆಗೆ ಕೆಲಸ ಮುಗಿಸಿಕೊಂಡು ಮನೆ ಸೇರಬೇಕೆಂದುಕೊಂಡವರಿಗೆ ವಾಹನ ದಟ್ಟಣೆ ಎದುರಾಗಿದೆ. ಬೈಕ್ ಸವಾರರು ಅಲ್ಲಲ್ಲಿ ಫ್ಲೈಓವರ್ ಕೆಳಗೆ ಆಶ್ರಯ ಪಡೆದಿದ್ದಾರೆ. ಹಲವೆಡೆ ಮಳೆಯಿಂದಾಗಿ ವಿದ್ಯುತ್ ಕಡಿತವಾಗಿದೆ.
ಮಲ್ಲೇಶ್ವರಂ, ಗುಟ್ಟಳ್ಳಿ, ವಸಂತನಗರ, ಶೇಷಾದ್ರಿ ರಸ್ತೆ ಕೆಲವು ಕಡೆ ಮಳೆ ಬೀಳುತ್ತಿರುವ ಕಾರಣದಿಂದಾಗಿ ಪವರ್ ಕಟ್ ಸಮಸ್ಯೆ ಎದುರಾಗಿತ್ತು.
#WATCH | Karnataka: Several parts of Bengaluru face waterlogging amidst heavy rainfall in the city.
— ANI (@ANI) April 14, 2022
An emergency operation in waterlogged areas is underway by BBMP (Bruhat Bengaluru Mahanagara Palike) & fire department.
Visuals from Banashankari, Kathreguppe, Jayaprakash Nagara pic.twitter.com/XOn81C9C8d
ವಾಡಿಕೆಯಂತೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಇನ್ನು ಈ ಬಾರಿಯ ನೈರುತ್ಯ ಮುಂಗಾರು ವಾಡಿಕೆಯಂತೆ ಇರಲಿದ್ದು, ಉತ್ತರ ಭಾರತದ ಕೆಲವೆಡೆ ಅಧಿಕ ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ ಹೇಳಿದೆ. ದೇಶದ ಮಧ್ಯ ಭಾಗ, ಹಿಮಾಲಯದ ತಪ್ಪಲಿನಲ್ಲಿ ಹಾಗೂ ವಾಯವ್ಯ ಭಾಗದಲ್ಲಿ ಸಹ ವಾಡಿಕೆಗಿಂತ ಹೆಚ್ಚು ಮಳೆ ಬೀಳುವುದು. ದೇಶದ ಈಶಾನ್ಯ ಹಾಗೂ ವಾಯವ್ಯ ಭಾಗದ ಕೆಲ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
1971–2020ವರೆಗಿನ ದೀರ್ಘಾವಧಿ ಸರಾಸರಿ (ಎಲ್ಪಿಎ) ಮಳೆ 87 ಸೆಂ.ಮೀ. ಇದೆ. ಈ ಬಾರಿ ಈ ಎಲ್ಪಿಎದ ಶೇ 96ರಿಂದ 104ರಷ್ಟು ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ. ಈ ಮೊದಲು 1961ರಿಂದ2010ರ ವರೆಗಿನ ಎಲ್ಪಿಎ 88 ಸೆಂ.ಮೀ. ಅನ್ನು ಮಾನದಂಡವಾಗಿ ಇಲಾಖೆ ಪರಿಗಣಿಸುತ್ತಿತ್ತು.