ತೋಂಟದ ಸಿದ್ಧಲಿಂಗ ಸ್ವಾಮೀಜಿ ಜನ್ಮದಿನ ಭಾವೈಕ್ಯ ದಿನವಾಗಿ ಆಚರಣೆ, ಶೀಘ್ರ ಸರ್ಕಾರಿ ಆದೇಶ: ಸಿಎಂ ಬೊಮ್ಮಾಯಿ

ಜಗದ್ಗುರು ಡಾ: ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಗಳ ಜನ್ಮದಿನವನ್ನು ಭಾವೈಕ್ಯ ದಿನವನ್ನಾಗಿ ಆಚರಿಸಲಾಗುವುದು. ಈ ಕುರಿತು ಶೀಘ್ರದಲ್ಲೇ ಸರ್ಕಾರಿ ಆದೇಶವನ್ನು ಹೊರಡಿಸಲಾಗುವುದು...

Published: 15th April 2022 04:51 PM  |   Last Updated: 15th April 2022 04:51 PM   |  A+A-


bommai1

ಜಗದ್ಗುರು ಡಾ: ತೋಂಟದ ಸಿದ್ಧಲಿಂಗಮಹಾಸ್ವಾಮೀಜಿಗಳ ಐಕ್ಯ ಮಂಟಪ ಲೋಕಾರ್ಪಣೆ ಮಾಡಿದ ಸಿಎಂ

Online Desk

ಗದಗ: ಜಗದ್ಗುರು ಡಾ: ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಗಳ ಜನ್ಮದಿನವನ್ನು ಭಾವೈಕ್ಯ ದಿನವನ್ನಾಗಿ ಆಚರಿಸಲಾಗುವುದು. ಈ ಕುರಿತು ಶೀಘ್ರದಲ್ಲೇ ಸರ್ಕಾರಿ ಆದೇಶವನ್ನು ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಹೇಳಿದ್ದಾರೆ. 

ಸಿಎಂ ಬೊಮ್ಮಾಯಿ ಅವರು ಇಂದು ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ, ಗದಗ ವತಿಯಿಂದ ಆಯೋಜಿಸಿದ್ದ ತ್ರಿವಿಧ ದಾಸೋಹಮೂರ್ತಿ ಪೂಜ್ಯ ಲಿಂಗೈಕ್ಯ ಶ್ರೀ ಜಗದ್ಗುರು ಡಾ: ತೋಂಟದ ಸಿದ್ಧಲಿಂಗಮಹಾಸ್ವಾಮೀಜಿಗಳ ಐಕ್ಯ ಮಂಟಪ ಲೋಕಾರ್ಪಣೆ ಮಾಡಿ ಮಾತನಾಡಿದರು.

ಇದನ್ನು ಓದಿ: ಈಶ್ವರಪ್ಪನವರು ಶೀಘ್ರವೇ ಆರೋಪಗಳಿಂದ ಮುಕ್ತರಾಗುತ್ತಾರೆ, ರಾಜೀನಾಮೆ ನೀಡಲು ಒತ್ತಡವಿರಲಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಜನ್ಮ ದಿನವನ್ನು ಅರ್ಥಪೂರ್ಣ ವಾಗಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯ. ಪರಮಪೂಜ್ಯರು ಜ್ಞಾನಿಗಳಾಗಿದ್ದರು. ಆಧ್ಯಾತ್ಮಿಕವಾಗಿ ಅವರ ಜ್ಞಾನ ಆಳವಾಗಿತ್ತು. ಆ ಆಳದ ಲೆಕ್ಕ ನಮಗ್ಯಾರಿಗೂ ಸಿಕ್ಕಿಲ್ಲ. ಅವರ ಲೌಕಿಕ ಜ್ಞಾನವೂ ಅಷ್ಟೇ ವಿಸ್ತಾರವಾಗಿತ್ತು. ಭಕ್ತರಿಗೆ ಜ್ಞಾನದ ಮೂಲಕ ಮಾರ್ಗದರ್ಶನ ಮಾಡಿದಾಗ ಅವರು ಸಂತೃಪ್ತರಾಗಿ ಬದುಕಿನ ಮಾರ್ಗವನ್ನು ಪಡೆದುಕೊಂಡು ಯಶಸ್ವಿಯಾಗಿದ್ದಾರೆ. ಪರಮಪೂಜ್ಯರ ಸಂಘಕ್ಕೆ ಬಂದವರಿಗೆ ಅಪಾರವಾದ ಪ್ರೀತಿ, ಆತ್ಮೀಯತೆ, ಆಶೀರ್ವಾದ ನೀಡಿದ್ದಾರೆ ಎಂದರು.

ಮನುಷ್ಯರನ್ನು ಮನುಷ್ಯತ್ವದಿಂದ ಕಟ್ಟಲು ಪ್ರಯತ್ನಿಸಿದರು. ಅವರು ಮನಸ್ಸು ಮಾಡಿದ್ದರೆ, ದೊಡ್ಡ ಸಂಸ್ಥೆಗಳನ್ನು ಕಟ್ಟಬಹುದಿತ್ತು. ಆದರೆ ಅವರ ಚಿಂತನೆಗಳು ಬೇರೆ. ಕಟ್ಟಡಗಳನ್ನು ಕಟ್ಟಲು ಮಹತ್ವ ನೀಡಲಿಲ್ಲ. ಮನುಷ್ಯರನ್ನು ಮನುಷ್ಯತ್ವದಿಂದ ಕಟ್ಟಲು ಪ್ರಯತ್ನ ಮಾಡಿದ್ದಾರೆ. ಆ ಮೂಲಕ ಸಾಮೂಹಿಕ ಚಿಂತನೆಯ ಸಮಾಜ ಕಟ್ಟಲು ಬಯಸಿದ್ದರು. ಹೊಗಳಿಕೆಗೆ ತೆಗಳಿಕೆಗೆ ಕಿವಿಗೊಡದೆ ಸ್ಥಿತಪ್ರಜ್ಞರಾಗಿದ್ದರು. ಆಧ್ಯಾತ್ಮಿಕವಾಗಿ ಬಹಳ ದೊಡ್ಡ ಸಾಧನೆ ಮಾಡಿದವರಿಗೆ ಮಾತ್ರ ಅದು ಸಾಧ್ಯವಾಗುತ್ತದೆ. ಇಂಥ ಪರಮಪೂಜ್ಯರನ್ನು ಹೊಂದಿದ ಮಠ ಪವಿತ್ರ ಕ್ಷೇತ್ರ. ಇದರ ಪರಂಪರೆ, ಸಂಸ್ಕೃತಿ, ಎಲ್ಲರನ್ನೂ ಒಳಗೊಂಡಿದೆ. ಜಾತ್ರಾ ಮಾಹೋತ್ಸವದಲ್ಲಿ ಇದನ್ನು ಕಾಣುಬಹುದಾಗಿದೆ. ಅರ್ಥಪೂರ್ಣ ವಾಗಿ ಆಚರಣೆಯಾಗುವ ಹಂಬಲ ಗುರುಗಳದ್ದು. ಕೆರೆಕಟ್ಟೆಗಳ ನಿರ್ಮಾಣಕ್ಕಾಗಿ ಅವರು ತಾಯಿ ಹೃದಯದಿಂದ ಮಿಡಿಯುತ್ತಿದ್ದರು. ಅವರ ಆಶೀರ್ವಾದದಿಂದ ಅನೇಕ ಕೆರೆ ತುಂಬಿಸುವ ಯೋಜನೆಗಳಾಗಿವೆ ಎಂದರು.

ಪರಿಸರ ಕಾಳಜಿ
ಸ್ವಾಮಿಗಳು ಜನ ಹಾಗೂ ಪರಿಸರದ ಬಗ್ಗೆಯೂ ಕಳಕಳಿ ಹೊಂದಿದ್ದರು. ಕಪ್ಪತಗುಡ್ಡವನ್ನು ವನ್ಯಜೀವಿ ತಾಣವನ್ನಾಗಿ ಘೋಷಿಸಲು ಅವರು ದೊಡ್ಡ ಹೋರಾಟ ಮಾಡಿದರು. ಕನ್ನಡ ಬಾಷೆಯ ಬಗ್ಗೆಯೂ ಅವರಿಗೆ ಅಭಿಮಾನವಿತ್ತು. ಗೋಕಾಕ್ ಚಳವಳಿಯಲ್ಲಿಯೂ ಭಾಗಿಯಾಗಿದ್ದರು. ಅವರ ಭಾಷಣ ಕೇಳಿ ಡಾ: ರಾಜ್ ಕುಮಾರ್ ಅವರೂ ಪ್ರಶಂಸೆ ವ್ಯಕ್ತಪಡಿಸಿದ್ದರು. ಅವರನ್ನು ಕಳೆದುಕೊಂಡು ನಮ್ಮ ನಾಡು, ಸಂಸ್ಕೃತಿ, ಸಮಾಜ ಬಡವಾಗಿದೆ. ನಿರ್ಣಾಯಕ ವಿಚಾರಗಳಿದ್ದದ್ದರಿಂದ ವಿವಾದಗಳಿದ್ದವು. ನಿಷ್ಠುರವಾಗಿ ಸತ್ಯವನ್ನಾಡಿದರೆ ವಿವಾದಗಳಿರುತ್ತವೆ. ಸಕಾರಾತ್ಮಕ, ಜನಕಲ್ಯಾಣಕ್ಕಾಗಿ ವಿವಾದಗಳು ಹುಟ್ಟುತ್ತಿದ್ದವು. ಅವರ ಪ್ರಭಾವ ನಮ್ಮ ಮೇಲಿದೆ ಎಂದರು.

ಮೌಲಿಕ ಚಿಂತನೆಗಳು
ಪ್ರಸಿದ್ದಿ ಇದ್ದವರಿಗೆ ಎಲ್ಲರೂ ಪ್ರಶಸ್ತಿ ಕೊಡುತ್ತಾರೆ. ಸದ್ದಿಲ್ಲದೆ ಸಮಾಜಕ್ಕಾಗಿ ಕೆಲಸ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಬೇಕೆಂದು ಸ್ವಾಮಿಗಳು ಹೇಳುತ್ತಿದ್ದರು. ವಿಧವೆಯೊಬ್ಬರು ಬರೆದ ಪುಸ್ತಕಕ್ಕೆ 32 ವರ್ಷಗಳ ನಂತರ ಪುಸ್ತಕ ಮತ್ತು ಲೇಖಕರಿಗೆ ಪ್ರಶಸ್ತಿ ನೀಡಲಾಯಿತು. ಮೌಲಿಕವಾಗಿ ಚಿಂತನೆ ಮಾಡಿ, ದೊಡ್ಡ ಪ್ರಮಾಣದಲ್ಲಿ ಪ್ರಕಟಣೆಗಳನ್ನು ಹೊರತಂದಿದ್ದಾರೆ.

ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವನು ಸಾಧಕ ಎನ್ನುವ ಸ್ವಾಮಿ ವಿವೇಕಾನಂದರ ನುಡಿಗಳಂತೆ ಅವರು ಸಾಧಕರಾಗಿ ನಮ್ಮ ನಡುವೆ ಬದುಕಿದ್ದಾರೆ. ಸಿದ್ದರಾಮ ಮಹಾಸ್ವಾಮಿಗಳನ್ನು ಗುರುತಿಸಿ ಪರಂಪರೆ ಮುಂದುವರೆಯಲು ಎಲ್ಲಾ ಕೆಲಸ ಮಾಡಿದ್ದಾರೆ ಎಂದರು.


Stay up to date on all the latest ರಾಜ್ಯ news
Poll
RBI

ರೈತರಿಗೆ ಕೃಷಿ ಸಾಲ ನೀಡಲು CIBIL ಸ್ಕೋರ್ ಪರಿಗಣಿಸುವ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನೀತಿ ಸರಿಯೇ?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp