ಸೌರಮಾನ ಯುಗಾದಿ; ಕೇರಳಿಗರಿಗೆ ವಿಷು, ತುಳುನಾಡಿನ ಜನತೆಗೆ ಬಿಸು ಸಂಭ್ರಮ: ಸಿಎಂ ಬೊಮ್ಮಾಯಿ ತುಳುವಿನಲ್ಲಿ ಶುಭಾಶಯ
ಕೇರಳಿಗರಿಗೆ ಇಂದು ಏಪ್ರಿಲ್ 15 ಹೊಸವರ್ಷ ವಿಷುವಿನ ಸಂಭ್ರಮ. ತುಳುನಾಡು ಮಂಗಳೂರಿನಲ್ಲಿ ಇದನ್ನು ಬಿಸು ಎಂದು ಕರೆಯಲಾಗುತ್ತದೆ. ಅಂದರೆ ಮೇಷ ಸಂಕ್ರಮಣದ ಮಾರನೆ ದಿನ ಸೌರ ಯುಗಾದಿ ಕರಾವಳಿ ಮತ್ತು ಕೇರಳಿಗರಿಗೆ ಹೊಸ ವರ್ಷ ಆರಂಭ.
Published: 15th April 2022 10:51 AM | Last Updated: 15th April 2022 01:24 PM | A+A A-

ವಿಷು ಕಣಿ
ಕೇರಳಿಗರಿಗೆ ಇಂದು ಏಪ್ರಿಲ್ 15 ಹೊಸವರ್ಷ ವಿಷುವಿನ ಸಂಭ್ರಮ. ತುಳುನಾಡು ಮಂಗಳೂರಿನಲ್ಲಿ ಇದನ್ನು ಬಿಸು ಎಂದು ಕರೆಯಲಾಗುತ್ತದೆ. ಅಂದರೆ ಮೇಷ ಸಂಕ್ರಮಣದ ಮಾರನೆ ದಿನ ಸೌರ ಯುಗಾದಿ ಕರಾವಳಿ ಮತ್ತು ಕೇರಳಿಗರಿಗೆ ಹೊಸ ವರ್ಷ ಆರಂಭ.
ಕೇರಳಿಗರಿಗೆ ವಿಷು ಕೈನೀಟಮ್: ಹಿಂದೂ ಹಬ್ಬವಾಗಿರುವ ವಿಷುವನ್ನು ಕೇರಳದಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ. ತುಳು ನಾಡಿನಲ್ಲಿಯೂ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಹಿಂದೂ ಹೊಸ ವರ್ಷವನ್ನು ವಿಷು ಕೇಂದ್ರೀಕರಿಸುತ್ತಿದ್ದು ಮಲಯಾಳಮ್ ಕ್ಯಾಲೆಂಡರ್ನಲ್ಲಿ ಮೇಡಮ್ ತಿಂಗಳಲ್ಲಿ ಈ ಹಬ್ಬ ಬರುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ನಲ್ಲಿ ಏಪ್ರಿಲ್ ತಿಂಗಳ ಎರಡನೇ ವಾರದಂದು ಈ ಹಬ್ಬವನ್ನು ಆಚರಿಸುತ್ತಾರೆ. ಬೆಳಕಿನ ಹಬ್ಬವಾಗಿ ಕೇರಳದಲ್ಲಿ ಜನಜನಿತವಾಗಿರುವ ವಿಷು ಹಬ್ಬವನ್ನು ವಿಷು ಕೈನೀಟಮ್ನಿಂದ ಆಚರಿಸುತ್ತಾರೆ. ಹೊಸ ಬಟ್ಟೆಯನ್ನು ಧರಿಸಿ ಪಟಾಕಿ ಹಚ್ಚಿ ಸಂಭ್ರಮಿಸುತ್ತಾ ಹಿರಿಯರ ಆಶೀರ್ವಾದ ಮತ್ತು ಅವರಿಂದ ನಗದು ರೂಪದಲ್ಲಿ ಕಾಣಿಕೆಯನ್ನು ಪಡೆದುಕೊಳ್ಳುವುದುನ್ನು ವಿಷು ಕೈನೀಟಮ್ ಎಂದು ಕರೆಯುತ್ತಾರೆ. ವಿಷು ದಿನದಂದು ಸೂರ್ಯನು ಸಮಭಾಜಕ ರೇಖೆಯ ಮೇಲೆ ಬರುತ್ತಾನೆ ಎಂಬ ನಂಬಿಕೆ ಕೂಡ ಇದೆ.
ವಿಷ್ಣು ವಸಂತ ಕಾಲದಲ್ಲಿ ಬರುವುದರಿಂದ ಪ್ರಕೃತಿಯಲ್ಲಿ ಫಲ ವಸ್ತುಗಳು, ಹೂವು-ಹಣ್ಣುಗಳು, ಬೆಳೆಗಳು ಚೆನ್ನಾಗಿ ಫಲ ಬರುವ ಕಾಲ. ಕೇರಳದಲ್ಲಿ ವಿಷ್ಣು ಹಬ್ಬವನ್ನು ವಸಂತ ಮಾಸವಾಗಿ ಆಚರಣೆ ಮಾಡಲಾಗುತ್ತದೆ ಮತ್ತು ಮಲಯಾಳಿಗೆ ಇದು ಜ್ಯೋತಿಷ್ಯದ ಹೊಸ ವರ್ಷ. ಸೂರ್ಯನು ಮೇಷ ರಾಶಿಗೆ ಪ್ರವೇಶಿಸುವುದನ್ನು ವಿಷ್ಣು ಸೂಚಿಸುವನು. ಇದರ ಬಳಿಕ ಕೃಷಿಕರು ವಿವಿಧ ರೀತಿಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವರು.
ವಿಷು ಕಣಿ: ಕರಾವಳಿ ಭಾಗ ತುಳು ನಾಡಿನ ಜನತೆ ಈ ದಿನ ದೇವರ ಮನೆಯಲ್ಲಿ ವಿಷು ಕಣಿ ಎಂದು ಇಡುತ್ತಾರೆ. ವಿಷುವಿನ ಹಿಂದಿನ ದಿನ ರಾತ್ರಿ ಮನೆಯ ಹಿತ್ತಲಿನಲ್ಲಿ, ತೋಟದಲ್ಲಿ ಬೆಳೆದ ಫಲ ವಸ್ತುಗಳು, ಹೂವು-ಹಣ್ಣುಗಳು, ಕನ್ನಡಿ, ಮನೆಯಲ್ಲಿರುವ ಬಂಗಾರ-ಬೆಳ್ಳಿಯನ್ನು ದೇವರ ಮುಂದೆ ಇಡಲಾಗುತ್ತದೆ.
ಬೆಳಗ್ಗೆ ಎದ್ದ ತಕ್ಷಣ ಮನೆಯ ಗೃಹಿಣಿಯರು, ಮಕ್ಕಳು ಮುಖ ತೊಳೆದು ಬಂದು ನೇರವಾಗಿ ದೇವರ ಮನೆಗೆ ಹೋಗಿ ಕನ್ನಡಿಯಲ್ಲಿ ವಿಷು ಕಣಿ ನೋಡುವ ಸಂಪ್ರದಾಯ ಕರಾವಳಿ ಭಾಗದಲ್ಲಿದೆ. ನಂತರ ದೇವರಿಗೆ, ಮನೆಯ ಹಿರಿಯ ಸದಸ್ಯರಿಗೆ ನಮಸ್ಕರಿಸಿ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಾರೆ.
ವಿಷು ಹಬ್ಬದ ಸಲುವಾಗಿ ಎಳೆ ಗೇರುಬೀಜದ ಪಾಯಸ, ಹಬ್ಬದಡುಗೆ ಮಾಡಿ ಮನೆಯವರೆಲ್ಲಾ ಸೇರಿ ಸಂಭ್ರಮದಿಂದ ಊಟ ಮಾಡುವ ಪದ್ಧತಿಯಿದೆ. ತಮಿಳು ನಾಡಿನ ಜನತೆಗೆ ಸಹ ಇಂದು ಹೊಸ ವರ್ಷ ಆರಂಭ.
ಸಿಎಂ ಬೊಮ್ಮಾಯಿ ತುಳುವಿನಲ್ಲಿ ಶುಭಾಶಯ: ವಿಷು ಹಬ್ಬ ತುಳುನಾಡಿನ ಜನತೆಗೆ ವಿಶೇಷ. ಹೀಗಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುಳು ಭಾಷೆಯಲ್ಲಿಯೇ ಕರಾವಳಿ ಜನತೆಗೆ ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸಿದ್ದಾರೆ.
ಹೊಸ ವರ್ಷದ ಹೊಸ ಗಳಿಗೆಗೆ ಹೊಸ ಬೆಳಕಿನ ವಿಷು ಕಣಿ ಇಟ್ಟು ಬೆಳಗಿನ ದೀಪ ಹಚ್ಚಿ ವಿಷು ಕಣಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಮಹಾಜನತೆಗೆ ವಿಷು ಹಬ್ಬದ ಶುಭಾಶಯಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
"ಪೊಸ ವರ್ಸೊದ ಪೊಸ ಗಲಿಗೆಗ್
— CM of Karnataka (@CMofKarnataka) April 15, 2022
ಪೊಸ ಬುಲೆಕ್ ಲೆನ ಕಣಿ ದೀದ್
ಪೊಲ್ಸುದ ತುಡರ್ ಪೊತ್ತಾದ್
ಬಿಸು-ಕಣಿಕ್ ಎಡ್ಡೆಪ್ಪು ಬಾಮ್ಯೊಂದುಲ್ಲೆ...
ಮಹಾ ಜನತೆ ಗ್ ಬಿಸು-ವಿಷು ಪರ್ಬೊದ ಎಡ್ಡೆಪ್ಪುಲು : ಸಿಎಮ್ @BSBommai pic.twitter.com/qxiq2J7dnl