ಸಂಘಮಿತ್ರ ಎಕ್ಸ್ಪ್ರೆಸ್ನಿಂದ ಕಳ್ಳಸಾಗಣೆ ಮಾಡುತ್ತಿದ್ದ ಮೊಲಗಳ ರಕ್ಷಣೆ
ಸಂಘಮಿತ್ರ ಎಕ್ಸ್ಪ್ರೆಸ್ ಮೂಲಕ ಇಬ್ಬರು ಪ್ರಯಾಣಿಕರು ಬಿಹಾರ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 11 ಮೊಲಗಳನ್ನು ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಶನಿವಾರ ರಾತ್ರಿ ರಕ್ಷಣೆ ಮಾಡಿದ್ದಾರೆ.
Published: 18th April 2022 09:33 AM | Last Updated: 18th April 2022 12:22 PM | A+A A-

ಅಕ್ರಮವಾಗಿ ಸಾಗಿಸುತ್ತಿದ್ದ ಮೊಲಗಳು.
ಬೆಂಗಳೂರು: ಸಂಘಮಿತ್ರ ಎಕ್ಸ್ಪ್ರೆಸ್ ಮೂಲಕ ಇಬ್ಬರು ಪ್ರಯಾಣಿಕರು ಬಿಹಾರ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 11 ಮೊಲಗಳನ್ನು ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಶನಿವಾರ ರಾತ್ರಿ ರಕ್ಷಣೆ ಮಾಡಿದ್ದಾರೆ.
ರೈಲ್ವೇ ಮೂಲಗಳ ಪ್ರಕಾರ, 'ಅಬ್ಬಕ್ಕ' ಘಟಕ, ಆರ್ಪಿಎಫ್ನ ಶಕ್ತಿ ತಂಡಗಳು (ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಯಲು ರಚಿಸಲಾಗಿರುವ ತಂಡ) ಸಹಾಯಕ ಸಬ್ಇನ್ಸ್ಪೆಕ್ಟರ್ ಎನ್ಪಿ ತಂಜೂಜಾ ನೇತೃತ್ವದಲ್ಲಿ ಕೃಷ್ಣರಾಜಪುರಂ ಮತ್ತು ಬಂಗಾರಪೇಟೆ ನಡುವೆ ಸಂಚಾರ ನಡೆಯುವ ರೈಲುಗಳಲ್ಲಿ ನಿತ್ಯ ತಪಾಸಣೆ ನಡೆಸುತ್ತವೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕನ ದರೋಡೆಗೆ ಯತ್ನ, ಏನೂ ಸಿಗದ್ದಕ್ಕೆ ಕೋಪ: ಚೂರಿಯಿಂದ ಇರಿದು ಪರಾರಿಯಾದ ದುಷ್ಕರ್ಮಿಗಳು
ಇದರಂತೆ ಶನಿವಾರ ರಾತ್ರಿ ಸಂಘಮಿತ್ರ ಎಕ್ಸ್ ಪ್ರೆಸ್ ರೈಲಿನ ಏಸ್3 ಕೋಟ್ ಒಳಗೆ ತಪಾಸಣೆ ನಡೆಸುತ್ತಿದ್ದಾಗ, ಮೊಲಗಳಿರುವ ಎರಡು ಕಬ್ಬಿಣದ ಪಂಜರಗಳು ಸಿಕ್ಕಿವೆ.
ಇಬ್ಬರು ಪ್ರಯಾಣಿಕರು 11 ಮೊಲಗಳನ್ನು ಹೊತ್ತೊಯ್ಯುತ್ತಿದ್ದರು. ಮೊಲಗಳನ್ನು ನೋಡಿದಾಗ ಅವುಗಳು ಆರೋಗ್ಯದಿಂದ ಬಳಲುತ್ತಿರುವುದು ಕಂಡು ಬಂದಿತ್ತು. ಸಾಕುಪ್ರಾಣಿಗಳಾಗಿ ನೋಡಿಕೊಳ್ಳಲು ಕೊಂಡೊಯ್ಯುತ್ತಿರುವುದಾಗಿ ಇಬ್ಬರೂ ಹೇಳಿದ್ದರು. ಆದರೆ, ಸಾಕಲು ಇಷ್ಟೊಂದು ಮೊಲಗಳನ್ನು ಯಾರು ತೆಗೆದುಕೊಂಡು ಹೋಗದ ಕಾರಣ ನಮ್ಮ ಅನುಮಾನ ಹೆಚ್ಚಾಗಿತ್ತು. ಈ ವೇಳೆ ವಿಚಾರಣೆಯನ್ನು ತೀವಗೊಳಿಸಿದಾಗ ಅಕ್ರಮವಾಗಿ ಮೊಲಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿತ್ತು. ಇದೀಗ ಇಬ್ಬರನ್ನು ಬಂಧನಕ್ಕೊಳಪಡಿಸಿದ್ದು, ಬಂಗಾರಪೇಟೆಯ ಪ್ರಾದೇಶಿಕ ಅರಣ್ಯಾಧಿಕಾರಿಗೆ ಒಪ್ಪಿಸಲಾಗಿದೆ. ವಶಪಡಿಸಿಕೊಂಡಿರುವ ಮೊಲಗಳನ್ನು ಆರ್ಎಫ್ಒಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.