ಕೋವಿಡ್ ನಿರ್ಬಂಧ ತೆರವು: ಚೇತರಿಕೆ ಹಾದಿಯತ್ತ ರಾಜ್ಯ ಪ್ರವಾಸೋದ್ಯಮ
ಕೋವಿಡ್ -19 ಲಾಕ್‌ಡೌನ್ ಮತ್ತು ಎರಡು ವರ್ಷಗಳಿಂದ ಇದ್ದ ನಿರ್ಬಂಧಗಳು ತೆರವುಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಪ್ರವಾಸೋದ್ಯಮವು ಮರಳಿ ಚೇತರಿಕೆಯ ಹಾದಿಯತ್ತ ಸಾಗಿದೆ. ಸೋಂಕು ಕಡಿಮೆಯಾಗಿರುವುದು, ವಾರಾಂತ್ಯದ ರಜೆಗಳು, ಬೇಸಿಗೆ ರಜೆಯು ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
Published: 18th April 2022 12:07 PM | Last Updated: 18th April 2022 01:50 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕೋವಿಡ್ -19 ಲಾಕ್‌ಡೌನ್ ಮತ್ತು ಎರಡು ವರ್ಷಗಳಿಂದ ಇದ್ದ ನಿರ್ಬಂಧಗಳು ತೆರವುಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಪ್ರವಾಸೋದ್ಯಮವು ಮರಳಿ ಚೇತರಿಕೆಯ ಹಾದಿಯತ್ತ ಸಾಗಿದೆ. ಸೋಂಕು ಕಡಿಮೆಯಾಗಿರುವುದು, ವಾರಾಂತ್ಯದ ರಜೆಗಳು, ಬೇಸಿಗೆ ರಜೆಯು ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ನಿರ್ಬಂಧಗಳಿಂದಾಗಿ ಮನೆಗಳಿಗೆ ಸೀಮಿತವಾದ ನಂತರ, ಪ್ರವಾಸೋದ್ಯಮದಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ಕೊರೋನಾ ವೈರಸ್ ಪ್ರಕರಣಗಳ ಕುಸಿತ, ದೀರ್ಘ ವಾರಾಂತ್ಯಗಳು ಮತ್ತು ಬೇಸಿಗೆ ರಜೆಯೊಂದಿಗೆ, ಪ್ರಯಾಣದಲ್ಲಿ ಹೊಸ ಆಸಕ್ತಿಗೆ ಕಾರಣವಾಗುತ್ತದೆ. ಸಾಂಕ್ರಾಮಿಕ ರೋಗದಿಂದಾಗಿ ಈ ವಲಯವು ಹೆಚ್ಚು ಹಾನಿಗೊಳಗಾಗಿತ್ತು.
ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಸೇರಿದೆ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳಲ್ಲಿ ಕಳೆದ ಕೆಲವು ತಿಂಗಳಿನಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಎಂದು ಕರ್ನಾಟಕ ಪ್ರವಾಸೋದ್ಯಮ ವೇದಿಕೆಯ ಉಪಾಧ್ಯಕ್ಷ ಎಂ ರವಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಇಂದು ಬೆಂಗಳೂರಿನಲ್ಲಿ 49 ಸೇರಿ 54 ಮಂದಿಗೆ ಪಾಸಿಟಿವ್, ಯಾವುದೇ ಸಾವು ವರದಿಯಾಗಿಲ್ಲ
"ಪ್ರವಾಸೋದ್ಯಮ ಪುನರಾರಂಭಗೊಂಡಿದ್ದು, ಹಿಂದಿನ ದಿನಗಳು ಮರುಕಳುಹಿಸಿದೆ. ವಾಸ್ತವವಾಗಿ, ಪ್ರವಾಸಿ ತಾಣಗಳು ಸಾಂಕ್ರಾಮಿಕ ಪೂರ್ವದ ಅವಧಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.
ಮಡಿಕೇರಿ, ಕಬಿನಿ, ಸಕಲೇಶಪುರ, ಚಿಕ್ಕಮಗಳೂರು, ಮೈಸೂರು, ಉಡುಪಿ ಮತ್ತು ಕಾರವಾರದ ಬೀಚ್ ರೆಸಾರ್ಟ್‌ಗಳಲ್ಲಿನ ಸಾಮರ್ಥ್ಯ ಶೇ.100ರಷ್ಟಿಗೆ, ಈ ಪ್ರವಾಸಿಗರಲ್ಲಿ ಕನಿಷ್ಠ ಶೇಕಡಾ 30 ರಷ್ಟು ಪ್ರವಾಸಿಗರು ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಉತ್ತರ ಭಾರತ ಸೇರಿದಂತೆ ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. ಫೆಬ್ರವರಿ ತಿಂಗಳಿನಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದೇಶದಲ್ಲಿ ಕೋವಿಡ್ ಸೋಂಕು ಮತ್ತೆ ಏರಿಕೆ: ಕಳೆದ 24 ಗಂಟೆಗಳಲ್ಲಿ 2,183 ಹೊಸ ಕೇಸ್ ಪತ್ತೆ, 214 ಮಂದಿ ಸಾವು
ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ ನಾರಾಯಣಗೌಡ ಮಾತನಾಡಿ, ಮೈಸೂರಿನಲ್ಲಿಯೂ ಹೋಟೆಲ್ ಕೊಠಡಿಗಳು ಶೇ 100 ಸಾಮರ್ಥ್ಯದೊಂದಿಗೆ ಭರ್ತಿಗೊಂಡಿದ್ದು, ಇದರಲ್ಲಿ ಶೇ.60ರಷ್ಟು ಪ್ರವಾಸಿಗರು ಮೈಸೂರಿನವರೇ ಆಗಿದ್ದು, ಶೇ.40ರಷ್ಟು ಪ್ರವಾಸಿಗರು ಇತರೆ ರಾಜ್ಯದವರಾಗಿದ್ದಾರೆಂದು ಹೇಳಿದ್ದಾರೆ.
ಜೆಎಲ್ಆರ್ (ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್‌ಸ್) ಎಂಡಿ ಮನೋಜ್ ಕುಮಾರ್ ಅವರು ಮಾತನಾಡಿ, ಈ ತಿಂಗಳೊಂದರಲ್ಲೇ, ರಾಜ್ಯದ ಪ್ರಮುಖ ಐದು ಜೆಎಲ್ಆರ್ ರೆಸಾರ್ಟ್ ಗಳಲ್ಲಿ ಶೇ.100ರಷ್ಟು ಭರ್ತಿಗೊಂಡಿದೆ. ಸಾಂಕ್ರಾಮಿಕ ರೋಗ ಸಂದರ್ಭದಲ್ಲಿಯೂ ಇದೇ ರೀತಿಯಲ್ಲಿಯೇ ಇತ್ತು. ಆದರೆ, 2020ಕ್ಕೆ ಹೋಲಿಕೆ ಮಾಡಿದರೆ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ. ಗಳಿಕೆ ಮೊತ್ತವೂ ರೂ.64,36 ಕೋಟಿಗೆ ತಲುಪಿದೆ ಎಂದು ಹೇಳಿದ್ದಾರೆ.