ಸ್ವಚ್ಛತಾ ಸಿಬ್ಬಂದಿ ಗೌರವಿಸುವುದು ಸಮಾಜದ ಕರ್ತವ್ಯ- ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ
ಸಮಾಜದಲ್ಲಿ ಪ್ರತಿಯೊಬ್ಬರು ಸಹನೀಯವಾಗಿ ಬದುಕುವಂತೆ ಮಾಡುವಲ್ಲಿ ಸ್ವಚ್ಛತಾ ಸಿಬ್ಬಂದಿಯ ಪಾತ್ರ ಅಮೂಲ್ಯವಾಗಿದೆ. ತಮ್ಮ ವೈಯಕ್ತಿಕ ಬದುಕಿನ ಸುಖವನ್ನು ಮರೆತು ಸಾರ್ವಜನಿಕ ಸ್ವಚ್ಛತೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಇಂಥವರನ್ನು ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.
Published: 19th April 2022 12:50 AM | Last Updated: 19th April 2022 12:53 AM | A+A A-

ಸ್ವಚ್ಛತಾ ಸಿಬ್ಬಂದಿ ಅಭಿನಂದಿಸಿದ ಡಾ. ಸಿ.ಎನ್. ಅಶ್ವತ್ಥ ನಾರಾಯಣ
ಬೆಂಗಳೂರು: ಸಮಾಜದಲ್ಲಿ ಪ್ರತಿಯೊಬ್ಬರು ಸಹನೀಯವಾಗಿ ಬದುಕುವಂತೆ ಮಾಡುವಲ್ಲಿ ಸ್ವಚ್ಛತಾ ಸಿಬ್ಬಂದಿಯ ಪಾತ್ರ ಅಮೂಲ್ಯವಾಗಿದೆ. ತಮ್ಮ ವೈಯಕ್ತಿಕ ಬದುಕಿನ ಸುಖವನ್ನು ಮರೆತು ಸಾರ್ವಜನಿಕ ಸ್ವಚ್ಛತೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಇಂಥವರನ್ನು ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮಲ್ಲೇಶ್ವಂನಲ್ಲಿ ಸ್ಥಳೀಯ ಬಿಜೆಪಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಚ್ಛತಾ ಸಿಬ್ಬಂದಿಗೆ ಗೌರವ ಸಮರ್ಪಣೆ ಮಾಡಿ ಮಾತನಾಡಿದ ಅವರು, ಒಂದು ದೇಶದ ಪ್ರಗತಿ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಇಲ್ಲ. ಅದಿರುವುದು ಗುಣಮಟ್ಟದ ಮತ್ತು ನೈರ್ಮಲ್ಯದಿಂದ ಕೂಡಿರುವ ಶೌಚಾಲಯ ಹಾಗೂ ಚೊಕ್ಕಟವಾದ ಬೀದಿಗಳಲ್ಲಿ ಇದೆ. ಇದನ್ನು ಸಾಧ್ಯವಾಗಿಸಿರುವ ಶ್ರೇಯಸ್ಸು ಸ್ವಚ್ಛತಾ ಸಿಬ್ಬಂದಿಗೆ ಸಲ್ಲಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತಾ ಸಿಬ್ಬಂದಿ ನಿರ್ಮಲ ಭಾರತವನ್ನು ಕಟ್ಟುವಲ್ಲಿ ಕೊಡುತ್ತಿರುವ ಕೊಡುಗೆಯನ್ನು ಗುರುತಿಸಿ ಅವರನ್ನು ಘನತೆಯಿಂದ ನಡೆಸಿಕೊಂಡು ಗೌರವಿಸುವಂತಹ ಸಕಾರಾತ್ಮಕ ಸಂಸ್ಕೃತಿ ತಂದಿದ್ದಾರೆ. ಜೊತೆಗೆ ಸ್ವಚ್ಛತಾ ಸಿಬ್ಬಂದಿಗೂ ಸಮಾನ ಸ್ಥಾನಮಾನ ಮತ್ತು ಭದ್ರತೆಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ನಮ್ಮ ಮಲ್ಲೇಶ್ವರದ ಸ್ವಚ್ಛತಾ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.
— Dr. Ashwathnarayan C. N. (@drashwathcn) April 18, 2022
ಈ ಸಂದರ್ಭದಲ್ಲಿ ನಮ್ಮ ಮಲ್ಲೇಶ್ವರವನ್ನು ಸ್ವಚ್ಛ, ಸುಂದರವಾಗಿಡಲು ಶ್ರಮಿಸುತ್ತಿರುವ ಅವರ ಜತೆ ಆಪ್ತ ಮಾತುಕತೆ ನಡೆಸಿ ಹೃತ್ಪೂರ್ವಕ ಧನ್ಯವಾದ ತಿಳಿಸಿದೆ. ಸರ್ಕಾರದಿಂದ ಅಗತ್ಯ ನೆರವು ಕಲ್ಪಿಸಲಾಗುವುದು.#SamajikNyay pic.twitter.com/Xs6fWI0wwq
ಇತ್ತೀಚಿನ ವರ್ಷಗಳಲ್ಲಿ ಆಧುನಿಕ ಯಂತ್ರೋಪಕರಣಗಳು ಬಂದು ಅವರ ಬದುಕು ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಆದರೆ, ಈ ನಿಟ್ಟಿನಲ್ಲಿ ಆಗಬೇಕಾದ ಕೆಲಸಗಳು ಇನ್ನೂ ಬಹಳಷ್ಟಿವೆ ಎಂದು ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟರು.