ಡಿಕೆ ಶಿವಕುಮಾರ್ ಗೆ ಬೆದರಿಕೆ: ಸುಳ್ಯದ ವ್ಯಾಪಾರಿಗೆ 2 ವರ್ಷ ಜೈಲು ಶಿಕ್ಷೆ
ಮಾಜಿ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಬೆದರಿಕೆ ಹಾಕಿದ್ದ ಸುಳ್ಯದ ವ್ಯಾಪಾರಿಯೊಬ್ಬರಿಗೆ ಸ್ಥಳೀಯ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಿದೆ.
Published: 19th April 2022 09:00 PM | Last Updated: 20th April 2022 01:42 AM | A+A A-

ಡಿ.ಕೆ ಶಿವಕುಮಾರ್
ಸುಳ್ಯ: ಮಾಜಿ ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಬೆದರಿಕೆ ಹಾಕಿದ್ದ ಸುಳ್ಯದ ವ್ಯಾಪಾರಿಯೊಬ್ಬರಿಗೆ ಸ್ಥಳೀಯ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಿದೆ.
2016 ರಲ್ಲಿ ಡಿ.ಕೆ ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಈ ವರ್ತಕ ಬೆದರಿಕೆ ಹಾಕಿದ್ದ.
ಅಪರಾಧಿ ಸಾಯಿ ಗಿರಿಧರ್ ರೈ ಸುಳ್ಯದ ಬೆಳ್ಳಾರೆ ಮೂಲದ ವ್ಯಕ್ತಿಯಾಗಿದ್ದು 2016 ರ ಫೆ.28 ರಂದು ಶಿವಕುಮಾರ್ ಗೆ ಕರೆ ಮಾಡಿ ತಮ್ಮ ಪ್ರದೇಶದಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತಿದ್ದರ ಬಗ್ಗೆ ದೂರು ನೀಡಿದ್ದರು. ಆದರೆ ಡಿಕೆ ಶಿವಕುಮಾರ್ ಈ ವಿಷಯವನ್ನು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರಲು ಹೇಳಿ ಕರೆಯನ್ನು ಸ್ಥಗಿತಗೊಳಿಸಲು ಹೇಳಿದ್ದರು. ಇದರಿಂದ ಆಕ್ರೋಶಗೊಂಡಿದ್ದ ವ್ಯಕ್ತಿ ಡಿ.ಕೆ ಶಿವಕುಮಾರ್ ನ್ನು ನಿಂದಿಸಿ ಬೆದರಿಕೆ ಹಾಕಿದ್ದ.
ಈ ಬಳಿಕ ಮೆಸ್ಕಾಮ್ ಅಧಿಕಾರಿಗಳಿಗೂ ರೈ ಬೆದರಿಕೆ ಹಾಕಿದ್ದರು. ಮೆಸ್ಕಾಮ್ ಅಧಿಕಾರಿಗಳು ನೀಡಿದ್ದ ದೂರಿನ ಆಧಾರದಲ್ಲಿ ಸುಳ್ಯ ಪೊಲೀಸರು ರೈ ವಿರುದ್ಧ ಐಪಿಸಿ ಸೆಕ್ಷನ್ 341, 353 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.