ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣ ಶಾಲಾ ಪಠ್ಯಕ್ರಮದಲ್ಲಿ ಜಾರಿ, ಕುರಾನ್ ಸೇರ್ಪಡೆ: ಸಚಿವ ಬಿ ಸಿ ನಾಗೇಶ್
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಪುಸ್ತಕದಲ್ಲಿ ನೈತಿಕ ಶಿಕ್ಷಣವನ್ನು ಸೇರಿಸಲಾಗುವುದು. ಅದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗುವುದಿಲ್ಲ. ಎಲ್ಲಾ ಧರ್ಮಗಳ ನೈತಿಕ ಮೌಲ್ಯಗಳನ್ನು ಕಲಿಸುವ ಪಠ್ಯಗಳನ್ನು ಸೇರಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
Published: 20th April 2022 08:19 AM | Last Updated: 20th April 2022 01:16 PM | A+A A-

ಬಿ ಸಿ ನಾಗೇಶ್
ಬೆಂಗಳೂರು:ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಪುಸ್ತಕದಲ್ಲಿ ನೈತಿಕ ಶಿಕ್ಷಣವನ್ನು ಸೇರಿಸಲಾಗುವುದು. ಅದು ಕೇವಲ ಒಂದು ಧರ್ಮಕ್ಕೆ ಸೀಮಿತವಾಗುವುದಿಲ್ಲ. ಎಲ್ಲಾ ಧರ್ಮಗಳ ನೈತಿಕ ಮೌಲ್ಯಗಳನ್ನು ಕಲಿಸುವ ಪಠ್ಯಗಳನ್ನು ಸೇರಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚತಂತ್ರ, ರಾಮಾಯಣ, ಮಹಾಭಾರತ, ಭಗವದ್ಗೀತೆ, ಕುರಾನ್ ಮತ್ತು ಇತರ ನೈತಿಕ ಶಿಕ್ಷಣಗಳನ್ನು ಕೂಡ ಸೇರಿಸಲಾಗುವುದು. ಸಮಿತಿಯೊಂದು ಪಠ್ಯಕ್ರಮವನ್ನು ನಿರ್ಧರಿಸಲಿದ್ದು ಈ ನೈತಿಕ ಶಿಕ್ಷಣದ ಪಠ್ಯಕ್ಕೆ ಪರೀಕ್ಷೆಯಿರುವುದಿಲ್ಲ ಎಂದು ವಿವರಿಸಿದರು.
ಮದ್ರಸಗಳಿಂದ ಅಥವಾ ಅಲ್ಪಸಂಖ್ಯಾತ ಸಮುದಾಯ ಮುಖಂಡರಿಂದ ನಮಗೆ ಬೇಡಿಕೆ ಬರದಿದ್ದರೂ ಕೂಡ ನಿಗದಿತ ಶಿಕ್ಷಣ ಮಕ್ಕಳಿಗೆ ಕೊಡಿಸಿ ಎಂದು ಪೋಷಕರಿಂದ ಬೇಡಿಕೆ ಬಂದಿದೆ. ಈ ಮೂಲಕ ಅಲ್ಪಸಂಖ್ಯಾತ ಸಮುದಾಯ ಮಕ್ಕಳು ಕೂಡ ಬೇರೆ ಮಕ್ಕಳಂತೆ ಶಾಲೆಗಳಲ್ಲಿ ಪಡೆಯುವ ನಿಗದಿತ ಶಿಕ್ಷಣವನ್ನು ಗಳಿಸಿ ಪೈಪೋಟಿ ಒಡ್ಡಲು, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ವೃತ್ತಿಪರ ಕೋರ್ಸ್ ಗಳಿಸಲು ಸಹಾಯವಾಗುತ್ತದೆ ಎಂದರು.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ; ಹಿಜಾಬ್ ಸೇರಿ ಯಾವುದೇ ಧಾರ್ಮಿಕ ವಸ್ತ್ರಕ್ಕೆ ಅವಕಾಶವಿಲ್ಲ: ಬಿಸಿ ನಾಗೇಶ್
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಕುಸಿದು ಹೋಗಿದ್ದ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಸುಧಾರಿಸಲು ಪೂರ್ವಸಿದ್ಧತಾ ತರಗತಿಗಳು, ಕಲಿಕಾ ಚೆತಾರಿಕೆ ವಿದ್ಯಾರ್ಥಿಗಳಿಗೆ ಹಾಡು ಮತ್ತು ನೃತ್ಯದ ಮೂಲಕ ಕಲಿಸುವತ್ತ ಗಮನ ಹರಿಸಲಾಗುತ್ತಿದ್ದು, ಅದು ಮೇ 16 ರಂದು ಪ್ರಾರಂಭವಾಗಲಿದೆ. ಜೂನ್ 1 ರಂದು ನಿಯಮಿತ ತರಗತಿಗಳು ಪ್ರಾರಂಭವಾಗುತ್ತವೆ. ಎನ್ಇಪಿ ಪ್ರಕಾರ ವಿದ್ಯಾರ್ಥಿಗಳಿಗೆ ಕಡಿಮೆ ಹೋಮ್ವರ್ಕ್ ಇರುತ್ತದೆ ಎಂದು ಶಿಕ್ಷಣ ಸಚಿವರು ತಿಳಿಸಿದರು. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಗ್ರಾಮ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಅನೇಕ ಶಾಲೆಗಳನ್ನು ವಿಲೀನಗೊಳಿಸಿ ಮಾದರಿ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದರು.
ರಾಜ್ಯದಲ್ಲಿ ಇಂತಹ 2,300 ಶಾಲೆಗಳಿದ್ದು, ಅವುಗಳಲ್ಲಿ ಕೆಲವು ಈಗಾಗಲೇ ರಾಮನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವ ಕುರಿತು ಹೈಕೋರ್ಟ್ ಸರ್ಕಾರಕ್ಕೆ ಕನಿಷ್ಠ ಎರಡು ಸೆಟ್ ನೀಡುವಂತೆ ಸೂಚಿಸಿದೆ ಎಂದರು. ಟೆಂಡರ್ ಕರೆದ ನಂತರ ಸಮವಸ್ತ್ರದ ಬೆಲೆಯನ್ನು 182 ರೂಪಾಯಿಗೆ ಇಳಿಸಲಾಗಿದೆ ಎಂದು ಸಚಿವರು ಹೇಳಿದರು.