ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಪೊಲೀಸರಿಂದ ಜಿಲ್ಲಾ ಪಂಚಾಯತ್ ಅಧ್ಯಕ್ಷ, ಸದಸ್ಯರ ವಿಚಾರಣೆ

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಉಡುಪಿ ಪೊಲೀಸರು ಚುರುಕುಗೊಳಿಸಿದ್ದು, ಪ್ರಕರಣ ಸಂಬಂಧ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರನ್ನು ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದುಬಂದಿದೆ.

Published: 20th April 2022 11:32 AM  |   Last Updated: 20th April 2022 01:28 PM   |  A+A-


KPCC president DK Shivakumar gives a cheque of Rs 11 Lakh to the family of  civil contractor Santosh Patil at Badas village near Belagavi on Tuesday

ಮೃತ ಸಂತೋಷ್ ಪಾಟೀಲ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದ ಡಿ.ಕೆ.ಶಿವಕುಮಾರ್.

The New Indian Express

ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಉಡುಪಿ ಪೊಲೀಸರು ಚುರುಕುಗೊಳಿಸಿದ್ದು, ಪ್ರಕರಣ ಸಂಬಂಧ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರನ್ನು ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ಸಂತೋಷ್ ಅವರು ಹಿಂಡಲಗಾ ಗ್ರಾಮ ಪಂಚಾಯಿತಿಯಲ್ಲಿ ಅವರು ರಸ್ತೆ ಕಾಮಗಾರಿಗೆ ನಿಯೋಜಿಸಿದ್ದ ಇತರ ರಸ್ತೆ ಗುತ್ತಿಗೆದಾರರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಸಂತೋಷ್ ಪಾಟೀಲ್ ಮನೆಗೆ ಡಿಕೆ ಶಿವಕುಮಾರ್ ಭೇಟಿ, 11 ಲಕ್ಷ ರೂ. ಪರಿಹಾರ ಚೆಕ್ ವಿತರಣೆ

ಮೂಲಗಳ ಪ್ರಕಾರ, ಸಂತೋಷ್ ಅವರ ಸೂಚನೆ ಮೇರೆಗೆ ಹಿಂಡಲಗಾ ಗ್ರಾ.ಪಂ.ಅಧ್ಯಕ್ಷ ನಾಗೇಶ ಮನ್ನೋಳ್ಕರ್ ಮತ್ತು ಸಣ್ಣಪುಟ್ಟ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದ 12 ಮಂದಿ ಗುತ್ತಿಗದಾರರು ಕೆಲವು ಕಾಮಗಾರಿಗಳನ್ನು ನಡೆಸಿದ್ದು, ಈ ಬಗ್ಗೆ ಪೊಲೀಸರು ಮಾಹಿತಿಗಳನ್ನು ಕಲೆಹಾಕಿದ್ದಾರೆಂದು ತಿಳಿದುಬಂದಿದೆ. ಹಿಂಡಲಗಾ ಲಕ್ಷ್ಮೀ ಜಾತ್ರೆಗೆ ಮುನ್ನಾ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂತೋಷ್ ಪಾಟೀಲ್ ಅವರು ಒತ್ತಡ ಹೇರಿದ್ದು, ಒತ್ತಾಯದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿದ್ದರು ಎಂದು ತಿಳಿದುಬಂದಿದೆ. ಹಿಂಡಲಗಾದಲ್ಲಿ 100 ವರ್ಷಕ್ಕೊಮ್ಮೆ ನಡೆಯುವ ಲಕ್ಷ್ಮೀ ಜಾತ್ರೆ ಇತ್ತೀಚೆಗಷ್ಟೇ ನಡೆದಿತ್ತು.

ವಿಚಾರಣೆ ಬಳಿಕ ಪ್ರತಿಕ್ರಿಯೆ ನೀಡಿರುವ ಮನ್ನೋಳ್ಕರ್ ಅವರು, ಸಂತೋಷ್ ಅವರು ಹಿಂಡಲಗಾ ವ್ಯಾಪ್ತಿಯ 108 ರಸ್ತೆಗಳ ಅಭಿವೃದ್ಧಿಯನ್ನು ಪೂರ್ಣಗೊಳಿಸಲು 12 ಗುತ್ತಿಗೆದಾರರಿಗೆ ಉಪ ಗುತ್ತಿಗೆ ನೀಡಿದ್ದರು. ಸಂತೋಷ್ ಅವರು ಸ್ವಂತವಾಗಿ 50 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿ ನಡೆಸಿದ್ದರು. ಉಪ ಗುತ್ತಿಗೆದಾರರು ಸಂತೋಷ್ ಮೇಲೆ ಹಣ ಪಾವತಿಗಾಗಿ ಒತ್ತಡ ಹೇರಿದ್ದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಸ್ತೆ ಕಾಮಗಾರಿ ಮುಗಿಸಲು ಸಂತೋಷ್ ಪಾಟೀಲ್ ಸಬ್ ಕಾಂಟ್ರಾಕ್ಟ್ ನೀಡಿದ್ದರು: ಬೆಳಗಾವಿ ಗುತ್ತಿಗೆದಾರರು!

12 ಉಪ ಗುತ್ತಿಗೆದಾರರ ವಿಚಾರಣೆ ವೇಳೆ ಸಂತೋಷ್ ಅವರು ತಮಗೆ ಕಾಮಗಾರಿ ವಹಿಸಿಕೊಡುವಾಗ ಆರ್‌ಡಿಪಿಆರ್‌ ನಿಧಿಯಡಿ ಕಾಮಗಾರಿ ಕೈಗೊಳ್ಳಲು ಯಾವುದೇ ಅಧಿಕಾರಿಗಳಿಂದ ಅನುಮತಿ ಬೇಕಾಗಿಲ್ಲ ಎಂದು ಹೇಳಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬೆಳಗಾವಿ ಸಮೀಪದ ಬಡಾಸ್ ಗ್ರಾಮದಲ್ಲಿರುವ ಸಂತೋಷ್ ಅವರ ಪತ್ನಿ ಜಯಶ್ರೀ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ರೂ. 11 ಲಕ್ಷ ರೂ. ಚೆಕ್ ಅನ್ನು ಹಸ್ತಾಂತರಿಸಿದರು. ಇದಲ್ಲದೆ, ಮಾಜಿ ಸಂಸದರೂ ಆಗಿರುವ ಮಾಜಿ ಶಾಸಕ ಪ್ರಕಾಶ ಹುಕ್ಕೇರಿ ಅವರು ಜಯಶ್ರೀ ಅವರಿಗೆ 5 ಲಕ್ಷ ರೂ ನೀಡಿದ್ದಾರೆ.


Stay up to date on all the latest ರಾಜ್ಯ news
Poll
Vidhana Saudha

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬೊಮ್ಮಾಯಿ ಸರ್ಕಾರ ವಿಫಲವಾಗಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp